ಲಂಚ ಪಡೆಯುತ್ತಿದ್ದ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಸಸ್ಪೆಂಡ್

 

ಬೆಂಗಳೂರು: ಕಾರಿನಲ್ಲಿ ವಾಶ್ ಬೇಸಿನ್ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆದು 2,500 ರೂಪಾಯಿ ಲಂಚ ಪಡೆದಿದ್ದಕ್ಕಾಗಿ ಬೆಂಗಳೂರಿನಲ್ಲಿ ಇಬ್ಬರು ಟ್ರಾಫಿಕ್ ಪೊಲೀಸ್ (Bengaluru Traffic Police) ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೂನ್ 10 ರಂದು, ಕೇರಳ ಮೂಲದ ಸಂತೋಷ್ ಕುಮಾರ್ ಎಂಬ ವ್ಯಕ್ತಿ ಕೇರಳ ನೋಂದಣಿಯ ತಮ್ಮ ಕಾರಿನಲ್ಲಿ ಬೆಂಗಳೂರು ನಗರದಲ್ಲಿ (Bengaluru Traffic) ಪ್ರಯಾಣಿಸುತ್ತಿದ್ದರು.
ಇದೇ ವೇಳೆ ಹಲಸೂರು ಗೇಟ್ ನಿಲ್ದಾಣದ ಬಳಿ ಇಬ್ಬರು ಟ್ರಾಫಿಕ್ ಸಿಬ್ಬಂದಿ ಅವರನ್ನು ತಡೆದರು. ಸಂತೋಷ್ ತಮ್ಮ ಕಾರಿನಲ್ಲಿ ವಾಶ್ ಬೇಸಿನ್ ಕೊಂಡೊಯ್ಯುತ್ತಿದ್ದುದನ್ನು ನೋಡಿದ ಟ್ರಾಫಿಕ್ ಸಿಬ್ಬಂದಿ ಅವರ ನೋಂದಣಿ ದಾಖಲೆಗಳನ್ನು ಕೇಳಿದರು.
ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ರವಿಕಾಂತೇಗೌಡ ಬಿ ಆರ್ ಮಾಹಿತಿ ನೀಡಿರುವ ಪ್ರಕಾರ, ಕಾರು ಚಾಲಕ ಸಂತೋಷಷ್ ಬಳಿ ಈ ಇಬ್ಬರು ಅಧಿಕಾರಿಗಳು ಆರಂಭದಲ್ಲಿ 20,000 ರೂ. ದಂಡವಿಧಿಸುವುದಾಗಿ ಹೇಳಿದ್ದಾರೆ.
20 ಸಾವಿರ ದಂಡ ಪಾವತಿಸಲು ಬೇಡಿಕೆ
ಸಂತೋಷ್‌ ಅವರು 20 ಸಾವಿರ ದಂಡ ಪಾವತಿಸಲು ಒಪ್ಪದೇ ಪ್ರತಿಭಟನೆ ಮಾಡಿದ್ದಾರೆ. ನಂತರ, ಇಬ್ಬರು ಅಧಿಕಾರಿಗಳು 2,500 ರೂ ಪಾವತಿಸಲು ಒತ್ತಾಯಿಸಿದರು. ಅವರು ಯಾವುದೇ ರಸೀದಿಯನ್ನು ನೀಡದೇ ಸಂತೋಷ್ ಅವರು ನೀಡಿದ್ದ ರೂ.2500ನ್ನು ಜೇಬಿಗೆ ಹಾಕಿಕೊಂಡಿದ್ದಾರೆ. ಆದರೆ ಕಾರು ಮಾಲೀಕ ಸಂತೋಷ್ ಇದರ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅಲ್ಲದೇ ಇಮೇಲ್ ಮೂಲಕ ತಕ್ಷಣವೇ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಹಿರಿದ ಅಧಿಕಾರಿಗಳಿಂದ ಪರಿಶೀಲನೆ
ಸಂತೋಷ್ ಅವರು ತಮ್ಮ ದೂರಿನ ಇಮೇಲ್ ಮಾಡಿದ ನಂತರ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸಂತೋಷ್ ಅವರ ವಾಹನವದ ದಾಖಲೆಗಳನ್ನು ಪರಿಶೀಲಿಸಲು ಮಾತ್ರ ನಿಲ್ಲಿಸಲಾಗಿತ್ತು. ಅವರು ಯಾವುದೇ ಅಪರಾಧ ಮಾಡಿರಲಿಲ್ಲ ಎಂದು ಕಂಡುಬಂದಿದೆ. ಇಬ್ಬರು ಅಧಿಕಾರಿಗಳು ತಪ್ಪಿತಸ್ಥರು ಎಂದು ಕಂಡುಬಂದ ನಂತರ, ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ ಈ ಪ್ರಕರಣದ ಕುರಿತು ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಯಾವುದೇ ವಾಹನವನ್ನು ನಿಲ್ಲಿಸಬಾರದು
ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಅವರು ಯಾವುದೇ ಸಂಚಾರ ಉಲ್ಲಂಘನೆ ಮಾಡದಿದ್ದರೆ ಯಾವುದೇ ವಾಹನವನ್ನು ನಿಲ್ಲಿಸಬಾರದು ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಇನ್ಮುಂದೆ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದ ದಾಖಲೆ ಪರಿಶೀಲನೆ ಮಾಡುವಂತಿಲ್ಲ ಎಂದು ಡಿಜಿ & ಐಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ಇನ್ನೂ ಈ ಬಗ್ಗೆ ಪ್ರವೀಣ್ ಸೂದ್ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದ್ದಾರೆ. ಎಲ್ಲೆಂದರಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಡೆದು ದಾಖಲೆ ಪರಿಶೀಲನೆ ಮಾಡ್ತಾರೆ ಎಂದು ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆ ಈ ಆದೇಶ ಹೊರಡಿಸಿದ್ದಾರೆ. ಕಣ್ಣಿಗೆ ಕಾಣುವಂತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ತಡೆಯಬಹುದಾಗಿದೆ. ಇದರ ಜೊತೆಗೆ ಡ್ರಿಂಕ್ ಆಂಡ್ ಡ್ರೈವ್ ಮಾಡುವ ವಾಹನಗಳನ್ನು ತಪಾಸಣೆ ನಡೆಸಬಹುದಾಗಿದೆ. ಬೆಂಗಳೂರಿನ ಪೊಲೀಸರಿಂದಲೇ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ದಂಡದ ಸಂಗ್ರಹಕ್ಕಾಗಿ ರಸ್ತೆಯಲ್ಲಿಯೇ ವಾಹನಗಳನ್ನು ತಡೆಯುತ್ತಾರೆ. ಇದರಿಂದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎರಡು ಬಾರಿ ರಾಜೀನಾಮೆ ನೀಡಲು ಸಿದ್ಧರಾಗಿದ್ದ ಉದ್ಧವ್ ಠಾಕ್ರೆ:

Tue Jun 28 , 2022
ಮುಂಬೈ ಜೂನ್ 28: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಈ ಸಮಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎರಡು ಬಾರಿ ರಾಜೀನಾಮೆ ನೀಡಲು ಬಯಸಿದ್ದರು ಎಂಬುದು ಮುನ್ನೆಲೆಗೆ ಬಂದಿದೆ. ಮೂಲಗಳ ಪ್ರಕಾರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ, ಜೂನ್ 27 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದರು. ಆದರೆ ಅವರನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಎರಡೂ ಬಾರಿ ತಡೆದಿದ್ದಾರೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಠಾಕ್ರೆ ಇಂದು […]

Advertisement

Wordpress Social Share Plugin powered by Ultimatelysocial