ಬೆಂಗಳೂರು- ಬೆಳಗಾವಿ ಮಧ್ಯೆ ವಿಶೇಷ ರೈಲು , ಶಬರಿಮಲೆಯ ಯಾತ್ರೆ ?

ಸಂಕ್ರಾಂತಿ  ,ಶಬರಿಮಲೆಯ ಯಾತ್ರೆ ಪ್ರಯುಕ್ತ ಬೆಂಗಳೂರಿನಿಂದ ಬೆಳಗಾವಿಗೆ ಒಂದು  ವಿಶೇಷ ರೈಲು  ಬಿಡುಗಡೆ

ಜನಸಂಖ್ಯೆ ಹೆಚ್ಚಾಗಿ ಇರುವುದರಿಂದ ಯಶವಂತಪುರ- ಬೆಳಗಾವಿ-  ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಾಗುವುದು

ಯಶವಂತಪುರ ನಿಲ್ದಾಣದಿಂದ ಜ.13ರಂದು ರಾತ್ರಿ 9.30 ಕ್ಕೆ ರೈಲು ಸಂಖ್ಯೆ 06597 ಹೊರಡುವ ರೈಲು ಮರುದಿನ 8.25ಕ್ಕೆ ಬೆಳಗಾವಿ ನಿಲ್ದಾಣ ಸೇರುತ್ತದೆ. ಪುನ: ಜ.16ರಂದು ರಾತ್ರಿ 9.20ಕ್ಕೆ ರೈಲು ಸಂಖ್ಯೆ 06598 ಹೊರಟು ಮರುದಿನ ಬೆಳಗ್ಗೆ 8.30ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತದೆ.

ಈ ರೈಲು ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ ಮಾರ್ಗವನ್ನು ಹಿಡಿದು ಬೆಳಗಾವಿ ಸೇರುತ್ತದೆ. ಇದೇ ಮಾರ್ಗವಾಗಿ ಬೆಂಗಳೂರಿಗೆ ‌ಮತ್ತೆ  ಮರಳುತ್ತದೆ.

ವಿಶೇಷ ರೈಲಿನಲ್ಲಿ ಎರಡು ಎಸಿ ತ್ರೀ ಟೈರ್ ಬೋಗಿ, ಹಾಗು ಎಂಟು ಸ್ಲೀಪರ್ ದರ್ಜೆ ಬೋಗಿ, ಮತ್ತು ನಾಲ್ಕು ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ಇರಲಿವೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ಮಾಡಿದಾರೆ.

ಎಸ್‌.ಎಸ್‌.ಎಸ್‌. ಹುಬ್ಬಳ್ಳಿ- ವಿಜಯಪುರ- ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ನಡುವಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರ ಜ.11ರಿಂದ ಆರಂಭವಾಗಲಿದೆ.

ಎರಡು ನಗರಗಳ ಮಧ್ಯೆ ರೈಲು  ಸಂಖ್ಯೆ: 07329-07330ನಿತ್ಯ ಸಂಚಾರ ಮಾಡುತ್ತದೆ. ಹುಬ್ಬಳ್ಳಿಯಿಂದ ಜ.11ರಿಂದ ಮತ್ತು ವಿಜಯಪುರದಿಂದ ಜ.12ರಿಂದ ರೈಲು ಸಂಚಾರ ಪುರನರಾರಂಭವಾಗಲಿದೆ.

ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ನಿಲ್ದಾಣದಿಂದ ರೈಲು ಸಂಖ್ಯೆ: 07329 ಪ್ರತಿದಿನ ಸಂಜೆ 4.45ಕ್ಕೆ ಹೊರಡುತ್ತದೆ. ರಾತ್ರಿ 10.10ಕ್ಕೆ ವಿಜಪುರ ತಲುಪುತ್ತದೆ. ವಿಜಯಪುರ ನಿಲ್ದಾಣದಿಂದ ರೈಲು ಸಂಖ್ಯೆ- 07330 ಪ್ರತಿದಿನ ಬೆಳಗ್ಗೆ 5.45ಕ್ಕೆ ಹೊರಟು ಬೆಳಗ್ಗೆ 11ಕ್ಕೆ ಹುಬ್ಬಳ್ಳಿ ತಲುಪುತ್ತದೆ.

ಈ ರೈಲು ಎಸ್.ಎಸ್.ಎಸ್. ಹುಬ್ಬಳ್ಳಿ, ಗದಗ, ಮಲ್ಲಾಪುರ, ಹೊಳೆ ಆಲೂರು, ಬದಾಮಿ, ಗುಳೇದಗುಡ್ಡ ರೋಡ್, ಬಾಗಲಕೋಟ, ಆಲಮಟ್ಟಿ, ಬಸವನಬಾಗೇವಾಡಿ ರೋಡ್, ಇಬ್ರಾಹಿಂಪುರ ಹಾಲ್ಟ್ ಮೂಲಕ ವಿಜಯಪುರ ತಲುಪುತ್ತದೆ. ಇದೇ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತದೆ.

ಇಂಟರ್‌ಸಿಟಿ ರೈಲಿನಲ್ಲಿ ಐದು ಸ್ಲೀಪರ್ ದರ್ಜೆ ಮತ್ತು ಆರು ಜನರಲ್ ಎರಡನೇ ದರ್ಜೆ ಬೋಗಿಗಳು ಇರುತ್ತವೆ ಎಂದು ನೈರುತ್ಯ ರೈಲ್ವೆ ಪ್ರಕಟಿಸಿದ್ದಾರೆ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

Congress Mekedatu Padayatre Day-2: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​ ನಾಯಕರ ಪಾದಯಾತ್ರೆ| D K Shivakumar |

Mon Jan 10 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial