ಬಂದೇ ಬಿಡ್ತು ‘ಬೆಂಗಳೂರು ಬಾಯ್ಸ್’ ಫಸ್ಟ್ ಲುಕ್ ಟೀಸರ್…ಅಂತ..ರಣಧೀರ..ಓಂ ಸಿನಿಮಾ ನೆನಪಿಸಿದ ವಿ ಮೇಕರ್ಸ್

ಸಿನಿಮಾ ಮಾಡೋದೇ ಒಂದು ಕಲೆ. ಟೀಸರ್, ಟ್ರೇಲರ್ ಹಾಡುಗಳ ಮೂಲಕ ಸಿನಿಮಾದ ತಾಕತ್ತು ಏನು ಅನ್ನೋದನ್ನು ಸಾಬೀತು ಮಾಡುವುದು ಒಂದು ಜಾಣ್ಮೆ. ಅಂತಹ ಕಲೆಯನ್ನು ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ವಿ ಮೇಕರ್ಸ್ ಪ್ರೋವ್ ಮಾಡಿದ್ದಾರೆ.

ಸ್ಪೆಷಲ್ ಆಗಿದೆ ಬೆಂಗಳೂರು ಬಾಯ್ಸ್ ಟೀಸರ್
ವಿ ಮೇಕರ್ಸ್ ಪ್ರಯತ್ನದಲ್ಲಿ ಮೂಡಿ ಬಂದಿರುವ ಬೆಂಗಳೂರು ಬಾಯ್ಸ್ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. 90ರ ದಶಕದ ಸೂಪರ್ ಹಿಟ್ ಸಿನಿಮಾಗಳದ ಅಂತ, ರಣಧೀರ, ಓಂ ಹಾಗೂ ಎ ಸಿನಿಮಾಗಳ ನಾಯಕರ ರೀತಿಯಲ್ಲಿ ಸಚಿನ್ ಚೆಲುವರಾಯ ಸ್ವಾಮಿ, ಅಭಿಷೇಕ್ ದಾಸ್, ರೋಹಿತ್ ಮಿಂಚಿದ್ದಾರೆ. ಇವರ ಜೊತೆ ವೈನಿಧಿ ಜಗದೀಶ್, ಸೋನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಬೆಂಗಳೂರು ಬಾಯ್ಸ್ ರೋಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿದ್ದು, ಕಾಲೇಜು ಕಥೆ, ಲವ್ ಸ್ಟೋರಿ, ಎಮೋಷನ್-ಸೆಂಟಿಮೆಂಟ್ ಮಿಶ್ರಣದ ಹೂರಣವಾಗಿದ್ದು, ರ್ಯಾಪರ್ ಅಲೋಕ್ ಸಂಗೀತ ನಿರ್ದೇಶನ, ಧರ್ಮ ವಿಷ್ ಸಂಗೀತ ಸಂಯೋಜನೆ ಸಿನಿಮಾಕ್ಕಿದೆ. ವಿಕ್ರಮ್ ಕೆ ವೈ ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಅಂಬಿ ನಿಂಗೆ ವಯಸ್ಸಾಯ್ತೋ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ಡೈರೆಕ್ಟರ್ ಆಗಿ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಗೆ ಮುನ್ನುಡಿ ಬರೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ಹೆಚ್ಚಳ : ಭಾರತಕ್ಕೆ 4ನೇ ಅಲೆ!

Mon Apr 11 , 2022
  ನವದೆಹಲಿ :ಈಗಾಗಲೇ ಚೀನಾ ದೇಶದ ಶಾಂಘೈನಗರದಲ್ಲಿ ಕೋವಿಡ್ ಹೆಚ್ಚಳವಾಗಿದ್ದು ಹಿರಿಯ ನಾಗರಿಕರ ಸರಣಿ ಸಾವುಗಳು ಸಂಭವಿಸುತ್ತಿದೆ. ಕೊರೊನಾ ನಿಯಂತ್ರಿಸಲು ಚೀನಾ ಸರ್ಕಾರವೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಭಾರತದಲ್ಲೇ 5 ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿರುವುದು ನಾಲ್ಕನೇ ಅಲೆಯ ಮುನ್ಸೂಚನೆ ನೀಡಿದಂತಾಗಿದೆ. ಚೀನಾ, ಅಮೆರಿಕ ಮತ್ತು ಯೂರೋಪ್ನ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್ನ ರೂಪಾಂತರ ತಳಿಯಾದ ಓಮೈಕ್ರಾನ್ನ ಉಪ ತಳಿಯಾದ ಘಿಇ ತಳಿಯೂ ಸಹ ಭಾರತದಲ್ಲಿ […]

Advertisement

Wordpress Social Share Plugin powered by Ultimatelysocial