ಕೋವಿಡ್ ಹೆಚ್ಚಳ : ಭಾರತಕ್ಕೆ 4ನೇ ಅಲೆ!

 

ನವದೆಹಲಿ :ಈಗಾಗಲೇ ಚೀನಾ ದೇಶದ ಶಾಂಘೈನಗರದಲ್ಲಿ ಕೋವಿಡ್ ಹೆಚ್ಚಳವಾಗಿದ್ದು ಹಿರಿಯ ನಾಗರಿಕರ ಸರಣಿ ಸಾವುಗಳು ಸಂಭವಿಸುತ್ತಿದೆ.
ಕೊರೊನಾ ನಿಯಂತ್ರಿಸಲು ಚೀನಾ ಸರ್ಕಾರವೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಭಾರತದಲ್ಲೇ 5 ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿರುವುದು ನಾಲ್ಕನೇ ಅಲೆಯ ಮುನ್ಸೂಚನೆ ನೀಡಿದಂತಾಗಿದೆ.

ಚೀನಾ, ಅಮೆರಿಕ ಮತ್ತು ಯೂರೋಪ್ನ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್ನ ರೂಪಾಂತರ ತಳಿಯಾದ ಓಮೈಕ್ರಾನ್ನ ಉಪ ತಳಿಯಾದ ಘಿಇ ತಳಿಯೂ ಸಹ ಭಾರತದಲ್ಲಿ 2 ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಹಾಗಾಗಿ ಭಾರತದ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ದೇಶದ ಕೇರಳ, ಹರಿಯಾಣ, ಮಹಾರಾಷ್ಟ್ರ ದೆಹಲಿ ಹಾಗೂ ಮಿಜೋರಾಂಗಳಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಿ ಪತ್ರ ಬರೆದಿದೆ.

ಕೋವಿಡ್ ಹೆಚ್ಚಳದ ಬಗ್ಗೆ ನಿಗಾ ವಹಿಸಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ನಿಯಂತ್ರಣಾ ಕ್ರಮ ಕೈಗೊಳ್ಳಬೇಕು ಎಂದೂ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

17ರಂದು ರಾತ್ರಿ ವೇಳೆ ಕೆಲವು ಭಾಗಗಳಲ್ಲಿ ಅನುಭವಕ್ಕೆ ಬಂದ ಗ್ಯಾಸ್‌ ವಾಸನೆ!

Mon Apr 11 , 2022
  ಮಹಾನಗರ: ನಗರದಲ್ಲಿ ಕಳೆದ ಫೆಬ್ರವರಿ 17ರಂದು ರಾತ್ರಿ ವೇಳೆ ಕೆಲವು ಭಾಗಗಳಲ್ಲಿ ಅನುಭವಕ್ಕೆ ಬಂದ ಗ್ಯಾಸ್‌ ವಾಸನೆಯ ಮೂಲ ಎಲ್ಲಿ ಎನ್ನುವುದನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗದೆ ನಿಗೂಢವಾಗಿದೆ. ಜಿಲ್ಲಾಡಳಿತವು ಈ ಗ್ಯಾಸ್‌ ವಾಸನೆಯ ಮೂಲ ಪತ್ತೆ ಮಾಡಿ ವರದಿ ಸಲ್ಲಿಸಲು ಜಿಲ್ಲಾ ಕಾರ್ಖಾನೆ ಮತ್ತು ಬಾಯ್ಲರ್‌ ಇಲಾಖೆಗೆ ಸೂಚನೆ ನೀಡಿತ್ತು. ಇಲಾಖೆಯ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತಪಾಸಣೆ ನಡೆಸಿ ಮೂಲ ಎಲ್ಲಿ ಎನ್ನುವುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು […]

Advertisement

Wordpress Social Share Plugin powered by Ultimatelysocial