ಬೆಂಗಳೂರಲ್ಲಿ ಇನ್ನು 6 ರಿಂದ 8 ತಿಂಗಳು ಪವರ್ ಕಟ್!

ಬೆಂಗಳೂರು, ಮಾರ್ಚ್ 14; ಬೇಸಿಗೆ ಈಗಷ್ಟೇ ಆರಂಭವಾಗಿದೆ ಬೆಂಗಳೂರು ನಗರದಲ್ಲಿ ಪ್ರತಿದಿನ ಪವರ್ ಕಟ್ ಬಿಸಿ ಜನರಿಗೆ ತಟ್ಟುತ್ತಿದೆ.ಅದರಲ್ಲೂ ವಾರಾಂತ್ಯದಲ್ಲಿ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸುವುದು ಸಾಮಾನ್ಯವಾಗಿದೆ. ಆದರೆ ಜನರನ್ನು ಚಿಂತೆಗೆ ದೂಡುವ ಮತ್ತೊಂದು ಸುದ್ದಿ ಈಗ ಬಂದಿದೆ.ಮುಂದಿನ 6 ರಿಂದ 8 ತಿಂಗಳುಗಳ ಕಾಲ ಬೆಂಗಳೂರು ನಗರದಲ್ಲಿ ಪವರ್ ಕಟ್ ಮುಂದುವರೆಯಲಿದೆ. ಅದರಲ್ಲೂ ವಾರಾಂತ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಹೆಚ್ಚು ಅಡಚಣೆ ಉಂಟಾಗಲಿದೆ. ನಿಯಮಿತ ಮತ್ತು ಅನಿಯಮಿತ ಪವರ್ ಕಟ್ ಬೆಂಗಳೂರು ನಗರದಲ್ಲಿ ಜಾರಿಯಲ್ಲಿರಲಿದೆ.ಬೆಂಗಳೂರು ನಗರದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆ ಆಧುನೀಕರಣಗೊಳಿಸುವತ್ತ ಬೆಸ್ಕಾಂ ಹೆಜ್ಜೆ ಇಟ್ಟಿದೆ. ಇದರ ಭಾಗವಾಗಿ ನೆಲದಡಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ ಮಾಡುವ ಕಾಮಗಾರಿ ವಿವಿಧ ಬಡಾವಣೆಯಲ್ಲಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಓವರ್ ಹೆಡ್ ಕೇಬಲ್‌ಗಳನ್ನು ಭೂಗತಗೊಳಿಸಲಾಗುತ್ತದೆ.ಈ ಕಾಮಗಾರಿ ಪೂರ್ಣಗೊಳಿಸಲು ಬೆಸ್ಕಾಂ ನಿಗದಿತ ಗುರಿಯನ್ನು ಹಾಕಿಕೊಂಡಿದೆ. ಈ ಗುರಿ ತಲುಪಲು 6 ರಿಂದ 8 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ನಿಯಮಿತ, ಅನಿಯಮಿತ ವಿದ್ಯುತ್ ಕಡಿತ ಜಾರಿಯಲ್ಲಿರುತ್ತದೆ. ಅದರಲ್ಲೂ ವಾರಾಂತ್ಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 7 ರ ತನಕ ವಿದ್ಯುತ್ ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ.

ಕಳೆದ ಮೂರು ವಾರಾಂತ್ಯಗಳಿಂದ ವಿದ್ಯುತ್ ಕಡಿತವಾಗುತ್ತಿದೆ. ಬೆಸ್ಕಾಂ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ತನಕ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಹೇಳುತ್ತದೆ. ಆದರೆ ಕರೆಂಟ್ ಬರುವಾಗ ಸಂಜೆ 7 ರಿಂದ 8 ಗಂಟೆ ಆಗುತ್ತದೆ ಎಂದು ಮಾಗಡಿ ರಸ್ತೆಯ ನಿವಾಸಿಯೊಬ್ಬರು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಇನ್ನೂ ಹಲವು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ ದಿನವಿಡೀ ವಿದ್ಯುತ್ ಪೂರೈಕೆ ಇಲ್ಲದಿರುವ ಕಾರಣ ಜನರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ವಾರಾಂತ್ಯದಲ್ಲಿ ದಿನಪೂರ್ತಿ ವಿದ್ಯುತ್ ಕಡಿತಗೊಂಡರೆ ಏನು ಮಾಡಬೇಕು? ಎಂದು ಜನರು ಪ್ರಶ್ನಿಸಿದ್ದಾರೆ.

ಯುಪಿಎಸ್‌ ಇದ್ದರೆ ಗೀಸರ್, ವಾಷಿಂಗ್ ಮೆಷಿನ್ ಬಳಕೆ ಮಾಡಲು ಆಗುವುದಿಲ್ಲ. ಆರ್‌. ಆರ್. ನಗರ, ಪೀಣ್ಯ, ಸರ್ಜಾಪುರ, ಕನಕನಪುರ ರಸ್ತೆ, ರಾಜಾಜಿನಗರ, ಹೆಚ್‌ಎಸ್‌ಆರ್ ಲೇಔಟ್, ಅತ್ತಿಗುಪ್ಪೆ ಮುಂತಾದ ಸ್ಥಳಗಳಲ್ಲಿ ವಾರಾಂತ್ಯದಲ್ಲಿ ವಿದ್ಯುತ್ ಪೂರೈಕೆ ಇಲ್ಲ ಎಂಬ ವರದಿಗಳು ಬರುತ್ತಿವೆ.

ನೆಲದಡಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ ಮಾಡುವ ಕಾಮಗಾರಿ ನಗರದಲ್ಲಿ ಶೇ 80ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ಸಹ ವೇಗವಾಗಿ ನಡೆಯುತ್ತಿವೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ. ಆದರೆ ಕಾಮಗಾರಿ ಪೂರ್ಣಗೊಳ್ಳುವ ತನಕ ವಿವಿಧ ಬಡಾವಣೆ ನಿವಾಸಿಗಳು ಪವರ್ ಕಟ್ ಎದುರಿಸುವುದು ಅನಿವಾರ್ಯವಾಗಲಿದೆ.

ಸಮಯ, ಕಡಿಮೆ ದಟ್ಟಣೆ, ಗ್ರಿಡ್ ಲೋಡ್, ಬಡಾವಣೆವಾರು ವಿಭಾಗ ಮುಂತಾದ ಆಧಾರದ ಮೇಲೆ ಬೆಸ್ಕಾಂ ಕಾಮಗಾರಿ ಕೈಗೊಳ್ಳುವ ಕುರಿತು ತೀರ್ಮಾನ ಕೈಗೊಳ್ಳುತ್ತಿದೆ. ವಾರಾಂತ್ಯದಲ್ಲಿ ವಿದ್ಯುತ್ ಬಳಕೆ ಹೆಚ್ಚಿರುವುದರಿಂದ ಪವರ್ ಕಟ್ ಮಾಡುವುದು ಅನಿವಾರ್ಯವಾಗಲಿದೆ.

ರಾಜ್ಯದ ವಿದ್ಯುತ್ ಉತ್ಪಾದನೆಯ ಶೇ 50ರಷ್ಟು ವಿದ್ಯುತ್ ಬೆಂಗಳೂರು ನಗರದಲ್ಲಿಯೇ ಬಳಕೆಯಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ತೊಂದರೆ ಉಂಟಾಗಬಾರದು ಎಂದರೆ ಜನರು ಈಗ ಬೆಸ್ಕಾಂ ಜೊತೆ ಸಹಕರಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ವ್ಯವಸ್ಥೆ ಆಧುನೀಕರಣ ಓವರ್ ಹೆಡ್ ಕೇಬಲ್‌ಗಳನ್ನು ಭೂಗತಗೊಳಿಸುವ ಮೂಲಕ ವಿದ್ಯುತ್ ವ್ಯವಸ್ಥೆ ಆಧುನೀಕರಣಗೊಳಿಸುವುದರಿಂದ ವಿದ್ಯುತ್ ಅವಘಡಗಳು ಕಡಿಮೆಯಾಗಲಿವೆ. ಸುರಕ್ಷಿತವಾಗಿ ಸಹ ಇರುತ್ತದೆ. ಆದ್ದರಿಂದ ಬೆಸ್ಕಾಂ ಈ ಕಾಮಗಾರಿ ಕೈಗೊಂಡಿದೆ.

ನಗರದ 7066 ಕಿ. ಮೀ. ಉದ್ದದ ಹೆಚ್‌ಟಿ, ಕಟ್ಟಡಗಳಿಗೆ ಸಂರ್ಪಕಿಸುವ ಎಲ್‌ಟಿ ತಂತಿಗಳನ್ನು 4 ವಿಭಾಗ ಮಾಡಿ ಭೂಗತ ಕೇಬಲ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಈ ಯೋಜನೆಯ ವೆಚ್ಚ ಸುಮಾರು 5031 ಕೋಟಿ ರೂ.ಗಳು.

2018-19ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಭೂಗತ ಕೇಬಲ್ ಅಳವಡಿಕೆ ಮಾಡುವುದಾಗಿ ಘೋಷಣೆ ಮಾಡಿತು. 2019ರ ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಿದೆ. 2022ರ ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ, ರೂ 52,800 ಕ್ಕಿಂತ ಕಡಿಮೆಯಾಗಿದೆ!

Mon Mar 14 , 2022
ಭಾರತದಲ್ಲಿ ಚಿನ್ನದ ಬೆಲೆ ಸೋಮವಾರ ಭಾರಿ ಇಳಿಕೆ ಕಂಡಿದೆ. ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ, ಮಾರ್ಚ್ 14 ರಂದು 0950 ಗಂಟೆಗೆ 10 ಗ್ರಾಂಗೆ 52,750 ರೂ.ಗೆ 0.24 ಪ್ರತಿಶತದಷ್ಟು ಚಿನ್ನದ ಬೆಲೆ ಕುಸಿದಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ನಡೆಯುತ್ತಿರುವ ಸಂಘರ್ಷದಿಂದಾಗಿ ಹಳದಿ ಲೋಹವು ಕಳೆದ ವಾರ 55,000-ಮಾರ್ಕ್ ಅನ್ನು ದಾಟಿದೆ. ಸೋಮವಾರ ಬೆಳ್ಳಿ ಬೆಲೆಯೂ ಭಾರಿ ಕುಸಿತ ಕಂಡಿದೆ. ಸೋಮವಾರದಂದು ಒಂದು ಕಿಲೋಗ್ರಾಂಗೆ ಬೆಲೆಬಾಳುವ ಲೋಹದ ಭವಿಷ್ಯವು ಶೇಕಡಾ 0.42 […]

Advertisement

Wordpress Social Share Plugin powered by Ultimatelysocial