techo spark:ಭಾರತದಲ್ಲಿ ಟೆಕ್ನೋ ಸ್ಪಾರ್ಕ್ ಗೋ 2022 ಫೋನ್‌ ಲಾಂಚ್‌;

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳಲ್ಲಿ ಒಂದಾದ ಟೆಕ್ನೋ ಬಜೆಟ್ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಟೆಕ್ನೋ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಟೆಕ್ನೋ ಸ್ಪಾರ್ಕ್ ಗೋ 2022 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಫೋನ್ ಆಗಿದ್ದು, 2GB + 32GB ಆಯ್ಕೆಯಲ್ಲಿ ಸಿಂಗಲ್‌ ವೇರಿಯಂಟ್‌ದ ಲಭ್ಯವಾಗಲಿದೆ.

ಅಪ್‌ಗ್ರೇಡ್
 ಹೌದು, ಟೆಕ್ನೋ ಕಂಪೆನಿ ಟೆಕ್ನೋ ಸ್ಪಾರ್ಕ್ ಗೋ 2022 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಫೋನ್ ಈ ಹಿಂದಿನ ಟೆಕ್ನೋ ಸ್ಪಾರ್ಕ್ ಗೋ 2021 ಸ್ಮಾರ್ಟ್‌ಫೋನಿನ ಅಪ್‌ಗ್ರೇಡ್ ಆವೃತ್ತಿ ಆಗಿದೆ. ಇದು ಕ್ವಾಡ್ ಕೋರ್ ಮೀಡಿಯಾ ಟೆಕ್ ಹೆಲಿಯೊ A20 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ ಗೋ 2022 ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಟೆಕ್ನೋ ಸ್ಪಾರ್ಕ್ ಗೋ 2022 ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇದು ಡಾಟ್ ನಾಚ್ ಡಿಸ್‌ಪ್ಲೇ ಆಗಿದ್ದು, ರಚನೆಯ ಅನುಪಾತ 20:9 ರಷ್ಟಿದೆ. ಜೊತೆಗೆ ಈ ಡಿಸ್‌ಪ್ಲೇ 480 ನಿಟ್ ಪೀಕ್ ಬ್ರೈಟ್‌ನೆಸ್ ಹೊಂದಿದೆ.

ಪ್ರೊಸೆಸರ್‌ ಪವರ್ ಏನು

ಟೆಕ್ನೋ ಸ್ಪಾರ್ಕ್ ಗೋ 2022 ಸ್ಮಾರ್ಟ್‌ಫೋನ್‌ ಕ್ವಾಡ್ ಕೋರ್ ಮೀಡಿಯಾ ಟೆಕ್ ಹಿಲಿಯೊ A20 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 32 GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 256 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ

ಟೆಕ್ನೋ ಸ್ಪಾರ್ಕ್ ಗೋ 2022 ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಎಫ್ / 1.8 ಲೆನ್ಸ್ ಹೊಂದಿದೆ. ಇನ್ನು ದ್ವಿತೀಯ ಕ್ಯಾಮೆರಾ AI ಬೆಂಬಲಿತ ಆಗಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಬೇಸಿಕ್ ಫೋಟೊ ಎಡಿಟಿಂಗ್ ಆಯ್ಕೆಗಳು ಇರಲಿವೆ.

ಬ್ಯಾಟರಿ ಮತ್ತು ಇತರೆ

ಟೆಕ್ನೋ ಸ್ಪಾರ್ಕ್ ಗೋ 2022 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳು 4ಜಿ ಎಲ್ ಟಿಇ, ವೈ-ಫೈ, ಬ್ಲೂಟೂತ್ ವಿ 4.2 ಅನ್ನು ಒಳಗೊಂಡಿದೆ. ಇದಲ್ಲದೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಟೆಕ್ನೋ ಸ್ಪಾರ್ಕ್ ಗೋ 2022 ಸ್ಮಾರ್ಟ್‌ಫೋನ್‌ ಏಕೈಕ 2 GB RAM + 32 GB ಶೇಖರಣಾ ಮಾದರಿ ಆಯ್ಕೆ ಹೊಂದಿದ್ದು, ಅದು 7,499ರೂ. ಬೆಲೆ ಹೊಂದಿದೆ. ಇನ್ನು ಈ ಫೋನ್ ಟರ್ಕೋಯಿಸ್ ಸಯಾನ್ ಬಣ್ಣದ ಆಯ್ಕೆ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಅಮೆಜಾನ್ ಮೂಲಕ ಖರೀದಿಗೆ ಆಭ್ಯ ಆಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

JIO RECHARGE PLAN:ರಿಲಯನ್ಸ್ ಜಿಯೋನ 1 ರೂಪಾಯಿಯ ರಿಚಾರ್ಜ್ ಪ್ಲಾನ್ ಸ್ಥಗಿತ! ಹೊಸ ವರ್ಷದ ಆಫರ್ ನೋಡಿ;

Thu Dec 30 , 2021
ಭಾರತದಲ್ಲಿನ ಬಹುತೇಕ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತಮ್ಮ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ರಿಲಯನ್ಸ್ ಜಿಯೋ ಅವುಗಳಲ್ಲಿ ಒಂದಾಗಿದ್ದು ಅದರ ಅಗ್ಗದ ರೀಚಾರ್ಜ್ ಯೋಜನೆಯನ್ನು ಪರಿಚಯಿಸುವುದರೊಂದಿಗೆ ತನ್ನ ಗ್ರಾಹಕರನ್ನು (ರೀತಿಯ) ಸಂತೋಷಪಡಿಸಿತು. ಇದು ಕೇವಲ 1 ರೂ. ದೀರ್ಘಕಾಲದವರೆಗೆ ಟೆಲ್ಕೊ ಪ್ರಯೋಜನಗಳನ್ನು ಬದಲಿಸಿದಂತೆ ಗ್ರಾಹಕರು ರೀ 1 ರೀಚಾರ್ಜ್ ಯೋಜನೆಯೊಂದಿಗೆ ಸಂಭಾವ್ಯವಾಗಿ ಪಡೆಯಬಹುದು. ಅದನ್ನು ಟೋನ್ ಮಾಡಿದ ನಂತರವೂ ಗ್ರಾಹಕರಿಗೆ ಇದು ಇನ್ನೂ ಉತ್ತಮ ವ್ಯವಹಾರದಂತೆ […]

Advertisement

Wordpress Social Share Plugin powered by Ultimatelysocial