ಶ್ರೀನಿವಾಸ್​ ಮಾನೆ ಆಧುನಿಕ ಶಕುನಿ ತರ ಇದ್ದಾನೆ :ಸಚಿವ ಬಿ.ಸಿ. ಪಾಟೀಲ್​​​

ಹಾನಗಲ್ಉಪಚುನಾವಣಾ ಕಣ ರಂಗೇರಿದೆ. ಹಾನಗಲ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಿಎಂ ಬೊಮ್ಮಾಯಿ ಪ್ರಚಾರ ಕಾರ್ಯಕ್ಕೆ ಸಾಥ್ನೀಡಿದ ಸಚಿವ ಬಿ.ಸಿ. ಪಾಟೀಲ್​​​ ಕಾಂಗ್ರೆಸ್ಅಭ್ಯರ್ಥಿ ಶ್ರೀನಿವಾಸ್ಮಾನೆ ವಿರುದ್ಧ ಆರೋಪಗಳ ಸುರಿಮಳೆಯನ್ನೇ  ಸುರಿಸಿದ್ದಾರೆ.

ಶ್ರೀನಿವಾಸ್ಮಾನೆ ಆಧುನಿಕ ಶಕುನಿ ತರ ಇದ್ದಾನೆ. ನಾನು ಕಾಂಗ್ರೆಸ್ನಲ್ಲಿದ್ದ ವೇಳೆ ಅವತಾರವನ್ನು ನೋಡಿದ್ದೇನೆ. ಮೊದಲೇ ಹಾವೇರಿಯ ಹಲವು ಕ್ಷೇತ್ರಗಳ ಮೇಲೆ ಆತ ಕಣ್ಣು ಹಾಕಿದ್ದ. ಬ್ಯಾಡಗಿಯಲ್ಲಿ ಶಿವಣ್ಣನವರ ಸೀಟು ತಪ್ಪಿಸಿದ್ರು. ಹಾನಗಲ್​​ನಲ್ಲಿ ಮನೋಹರ್ತಹಶೀಲ್ದಾರ್ಸೀಟು ತಪ್ಪಿಸಿದ್ರು. ಮಾನೆ ನಂಬಿಕೆಗೆ ಅರ್ಹನಾದ ವ್ಯಕ್ತಿಯೇ ಅಲ್ಲ ಎಂದು ಬಿ.ಸಿ. ಪಾಟೀಲ್ಹೇಳಿದರು.

ಇದೇ ವೇಳೆ ಬಸವರಾಜ ಬೊಮ್ಮಾಯಿ ವಿಚಾರವಾಗಿಯೂ ಮಾತನಾಡಿದ ಅವರು, ನಮಗೆ ಒಳ್ಳೆಯ ಆಕಳು ಸಿಕ್ಕಿದೆ. ನಮಗೆ ಎಷ್ಟು ಬೇಕೋ ಅಷ್ಟು ಹಾಲು ಹಿಂಡಿಕೊಳ್ಳೋಣ. ಹಾಲು ಅಂದರೆ ಅಭಿವೃದ್ಧಿ ಯೋಜನೆ ತಂದು ಕೆಲಸ ಮಾಡೋದು, ಮತ್ತೆ ಬೇರ ಏನೂ ಅಂದುಕೊಳ್ಳಬೇಡಿ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ಹೇಳಿದರು.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನ ಮಾಡ್ತೇವೆ : ಪ್ರಿಯಾಂಕ ಗಾಂಧಿ

Sat Oct 23 , 2021
 ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವು ಅಂಗೀಕರಿಸಿದ ವಿವಿಧ ನಿರ್ಣಯಗಳನ್ನು ಜನರಿಗೆ ತಲುಪಿಸಲು ಬಾರಾಬಂಕಿಯಿಂದ ಮೂರು ಪ್ರತಿಜ್ಞಾ ಯಾತ್ರೆಗಳನ್ನು ಆರಂಭಿಸಿದರು. ನಮ್ಮ ಪ್ರಣಾಳಿಕೆಯ ಕೆಲವು ಪ್ರಮುಖ ಭರವಸೆಗಳಲ್ಲಿ ಶಾಲಾ ಬಾಲಕಿಯರಿಗೆ ಉಚಿತ ಇ–ಸ್ಕೂಟಿ ಹಾಗೂ ಮೊಬೈಲ್ ಫೋನ್, ಕೃಷಿ ಸಾಲ ಮನ್ನಾ, ಬಡ ಕುಟುಂಬಗಳಿಗೆ ವರ್ಷಕ್ಕೆ […]

Advertisement

Wordpress Social Share Plugin powered by Ultimatelysocial