ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನ ಮಾಡ್ತೇವೆ : ಪ್ರಿಯಾಂಕ ಗಾಂಧಿ

 ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವು ಅಂಗೀಕರಿಸಿದ ವಿವಿಧ ನಿರ್ಣಯಗಳನ್ನು ಜನರಿಗೆ ತಲುಪಿಸಲು ಬಾರಾಬಂಕಿಯಿಂದ ಮೂರು ಪ್ರತಿಜ್ಞಾ ಯಾತ್ರೆಗಳನ್ನು ಆರಂಭಿಸಿದರು.

ನಮ್ಮ ಪ್ರಣಾಳಿಕೆಯ ಕೆಲವು ಪ್ರಮುಖ ಭರವಸೆಗಳಲ್ಲಿ ಶಾಲಾ ಬಾಲಕಿಯರಿಗೆ ಉಚಿತ ಸ್ಕೂಟಿ ಹಾಗೂ ಮೊಬೈಲ್ ಫೋನ್, ಕೃಷಿ ಸಾಲ ಮನ್ನಾ, ಬಡ ಕುಟುಂಬಗಳಿಗೆ ವರ್ಷಕ್ಕೆ ರೂ. 25,000, ಎಲ್ಲರಿಗೂ ಅರ್ಧದಷ್ಟು ವಿದ್ಯುತ್ ಬಿಲ್ ಹಾಗೂ ಕೋವಿಡ್ ಅವಧಿಯ ಬಾಕಿ ಉಳಿದಿರುವ ವಿದ್ಯುತ್ ಬಿಲ್ಗಳ ಸಂಪೂರ್ಣ ಮನ್ನಾ ಒಳಗೊಂಡಿರುತ್ತದೆಎಂದು ಯಾತ್ರೆಗೆ ಚಾಲನೆ ನೀಡುವಾಗ ಕಾಂಗ್ರೆಸ್ ನಾಯಕಿ ಹೇಳಿದರು.

 

ಮೂರು ಯಾತ್ರೆಗಳು ಬರಾಬಂಕಿಯಿಂದ ಬುಂದೇಲ್ಖಂಡ್, ಸಹರಾನ್ಪುರದಿಂದ ಮಥುರಾ ಹಾಗೂ ವಾರಣಾಸಿಯಿಂದ ರಾಯ್ ಬರೇಲಿಯವರೆಗೆ ನವೆಂಬರ್ 1 ರವರೆಗೆ ನಡೆಯಲಿದೆ. ಮಾಜಿ ಸಂಸದ ಪ್ರಮೋದ್ ತಿವಾರಿ ಅವರು ವಾರಣಾಸಿಯಿಂದ ರಾಯ್ ಬರೇಲಿ ಮಾರ್ಗವಾಗಿ ಅವಧ್ ಪ್ರದೇಶವನ್ನು ತೆರಳುವ ರ್ಯಾಲಿಯ ನೇತೃತ್ವವಹಿಸಲಿದ್ದಾರೆ. ಬಾರಾಬಂಕಿಬುಂದೇಲ್ಖಂಡ್ ಮಾರ್ಗವನ್ನು ಪಿ.ಎಲ್. ಪುನಿಯಾ ಹಾಗೂ ಕೇಂದ್ರದ ಮಾಜಿ ರಾಜ್ಯ ಸಚಿವ ಪ್ರದೀಪ್ ಜೈನ್ ಆದಿತ್ಯ ಮುನ್ನಡೆಸಲಿದ್ದಾರೆ.

ವೆಸ್ಟರ್ನ್ ಫ್ರಂಟ್ ಸಹರಾನ್ಪುರಮಥುರಾ ಮಾರ್ಗವನ್ನು ಒಳಗೊಂಡಿದ್ದು, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹಾಗೂ ಪಕ್ಷದ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ನೇತೃತ್ವ ವಹಿಸಲಿದ್ದಾರೆ. ಯಾತ್ರೆಯು 12,000 ಕಿಲೋಮೀಟರ್ಗಳನ್ನು ಕ್ರಮಿಸಲಿದೆ. ಯಾತ್ರೆಯಲ್ಲಿ ವಿವಿಧ ಪತ್ರಿಕಾಗೋಷ್ಠಿಗಳು, ನುಕ್ಕಡ್ ಸಭೆಗಳು ದೇವಸ್ಥಾನ ಭೇಟಿಗಳು, ರೋಡ್ಶೋಗಳು, ಜನ ಸಭೆಗಳು ಇತ್ಯಾದಿಗಳನ್ನು ನಡೆಸಲಾಗುತ್ತದೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

 ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗಲ್ಲ : ಸಿಎಂ ಬೊಮ್ಮಾಯಿ

Sat Oct 23 , 2021
ನಮ್ಮದು ಕೇವಲ ಮಾತುಗಳಲ್ಲ. ಕೆಲಸ ಮಾಡುತ್ತಿದ್ದೇವೆ. ಮಾತಿನಿಂದ ಹೊಟ್ಟೆ ತುಂಬುವುದಿಲ್ಲ ಎನ್ನುವುದು ಗೊತ್ತಿದೆ. ತಳಮಟ್ಟದಲ್ಲಿ ಮಾತಾಡಿದರೆ ದೊಡ್ಡವರಾಗಲ್ಲ. ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಹಾನಗಲ್ಲ ಕ್ಷೇತ್ರದ ಚಿಕ್ಕೌಶಿ– ಹೊಸೂರು ಗ್ರಾಮದಲ್ಲಿ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರನ್ನಾದರೂ ಆಯ್ಕೆ ಮಾಡಬೇಕಾದರೆ ಜನರು ತುಲನಾತ್ಮಕವಾಗಿ ನೋಡುತ್ತಾರೆ. ಉದಾಸಿ ಆರು ಬಾರಿ ಆಯ್ಕೆಯಾಗಿದ್ದರು ಎಂದರೆ ನಿಮ್ಮ ಹೃದಯದಲ್ಲಿ […]

Advertisement

Wordpress Social Share Plugin powered by Ultimatelysocial