ಗೋವಿಂದರಾಜನಗರ ಅಮಾನವೀಯ ಪ್ರಕರಣ.

ಬೆಂಗಳೂರು : ಗೋವಿಂದರಾಜನಗರ ಅಮಾನವೀಯ ಪ್ರಕರಣವಾಗಿ ಆರೋಪಿ ಅರೆಸ್ಟ್ ಆಗಿ, FIR ದಾಖಲಾಗಿದೆ. ಇದೀಗ ಆರೋಪಿ ಸಾಹಿಲ್ ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿದ್ದಾನೆ.

ಈ ಬಗ್ಗೆ ಆರೋಪಿ ಸಾಹಿಲ್ ಮಾತನಾಡಿ, ಯಶವಂತಪುರ ಯುನೈಟೆಡ್ ಕಂಪೆನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡ್ತಿದ್ದೇನೆ, ಇವತ್ತು ಕೆಲಸ ಮುಗಿಸಿ ಗಂಗೊಂಡನಹಳ್ಳಿ ಮನೆಗೆ ತೆರಳಲು ಬೈಕ್ ಹತ್ತಿ ಬಂದಿದ್ದ.

ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿಯ ಅಂಡರ್ ಪಾಸ್ ಗೂ ಮುನ್ನ ಬೊಲೆರೋ ಕಾರು ನಿಂತಿತ್ತು, ಸ್ವಲ್ಪ ಬೈಕ್ ಸ್ವೀಡ್ ಇದ್ದಿದ್ದರಿಂದ ಹಾಗೂ ರಸ್ತೆ ಉಬ್ಬು ಇದ್ದಿದ್ದರಿಂದ ಬೈಕ್ ನಿಯಂತ್ರಣ ತಪ್ಪಿತ್ತು. ನಿಯಂತ್ರಣ ತಪ್ಪಿದ್ದರಿಂದ ಬೈಕ್ ಬೊಲೇರೋ ಕಾರಿಗೆ ಡಿಕ್ಕಿ ಹೊಡೆದಿದೆ‌. ತಕ್ಷಣ ಕಾರಿನಲ್ಲಿದ್ದ ಮುತ್ತಪ್ಪ ದಬಾಯಿಸಿ ಮಾತಾಡೋಕೆ ಹೋಗಿದ್ದಾರೆ. ಅಕ್ಕಪಕ್ಕದಲ್ಲಿ ಜನರೂ ಸೇರೋಕೆ ಶುರುಮಾಡಿದ್ದರು. ಅಲ್ಲೇ ನಿಂತ್ರೆ ಹಣ ಕೇಳಬಹುದು ಅಥವಾ ಹೊಡಿಯಬಹುದು ಅನ್ನೋ ಭಯದಲ್ಲಿ ಬೈಕ್ ಸ್ಟಾರ್ಟ್ ಮಾಡಿ ಕಾಲ್ಕೀಳೋಕೆ ಮುಂದಾಗಿದ್ದೆ. ಈ ವೇಳೆ ಬೈಕನ್ನ ಜೋರಾಗಿ ಮುತ್ತಪ್ಪ ಹಿಡಿದಿದ್ದರಿಂದ ಏನ್ ಮಾಡೋದು ಅಂತ ಗೊತ್ತಾಗದೆ, ಹೀಗೆ ಸ್ಪೀಡಾಗಿ ಹೋದ ತನ್ನನ್ನ ಆಟೋ ಚಾಲಕ ಹಾಗೂ ಕೆಲ ವ್ಯಕ್ತಿಗಳು ಹಿಡಿದ್ರು, ಭಯದಲ್ಲಿ ಅದೇನ್ ಮಾಡಿದ್ನೋ ಗೊತ್ತಿಲ್ಲ ಸರ್ ಎಂದು ಹೇಳಿದ್ದಾನೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆರೆಯಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವದ ಹಿಂದೆ ರೋಚಕ ಟ್ವಿಸ್ಟ್.

Wed Jan 18 , 2023
ಶವದ ಹಿಂದೆ ತನಿಖೆಗೆ ಬಿದ್ದ ಪೊಲೀಸರಿಗೆ ಸಿಕ್ತು ಲವ್ ಲಿಂಕ್ ಹೊಸಕೋಟೆ ಅಮಾನಿಕೆರೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿ ಶವ. ಜನವರಿ ಆರರಂದು ಪತ್ತೆಯಾಗಿದ್ದ 30 ವರ್ಷ ವಯಸ್ಸಿನ ಯುವಕನ ಶವ. ಶವ ಪತ್ತೆಯಾದ 24 ಗಂಟೆಯಲ್ಲಿ ಅಸಲಿಯತ್ತು ಪತ್ತೆ ಹಚ್ಚಿದ ಪೊಲೀಸರು. ಬೇರೆಡೆ ಕೊಲೆ ಮಾಡಿ ಕೆರೆಯಲ್ಲಿ ಶವ ಎಸೆದು ಹೋಗಿದ್ದ ಹಂತಕರು. ಅಪರಿಚಿತ ವ್ಯಕ್ತಿ ಶವದ ಸುಳಿವು ಕೊಟ್ಟ ಕೈಮೇಲಿನ ಹಚ್ಚೆ. ಹಚ್ಚೆ ಮೂಲಕ ಕೊಲೆಯಾದ ವ್ಯಕ್ತಿಯ ಗುರುತು […]

Advertisement

Wordpress Social Share Plugin powered by Ultimatelysocial