ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಅರುಣ್ ಸಾಗರ್ ಗಳಿಸಿದ್ದು ಎಷ್ಟು ಗೊತ್ತಾ?

ಟ, ಕಲಾ ನಿರ್ದೇಶಕ ಮುಂತಾದ ಪ್ರತಿಭಾನ್ವಿತ ಅರುಣ್ ಸಾಗರ್ ಬಿಗ್ ಬಾಸ್ ಮನೆಯಿಂದ 13ನೇ ವಾರ ಹೊರಬಿದ್ದಿದ್ದಾರೆ.ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 14 ವಾರಗಳ ರಿಯಾಲಿಟಿ ಶೋ 13ನೇ ವಾರ ಪೂರೈಸಿದ್ದು ಫಿನಾಲೆಗೆ ಕಾಲಿಟ್ಟಿದೆ.ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮೇಟ್ ಆಗಿದ್ದು, ಭಾನುವಾರ ನಡೆದ ಎಲಿಮಿನೇಷನ್ ಸುತ್ತಿನಲ್ಲಿ ಅರುಣ್ ಸಾಗರ್ ಹೊರಬಿದ್ದಿದ್ದಾರೆ.ಕಲಾವಿದ ಅರುಣ್ ಸಾಗರ್ ಮತ್ತು ಅಮೂಲ್ಯ 13ನೇ ವಾರ ಒಂದು ದಿನದ ಅಂತರದಲ್ಲಿ ಹೊರಬಿದ್ದಿದ್ದಾರೆ. ಅಮೂಲ್ಯ ಗೌಡ ಶನಿವಾರ ಹೊರಬಿದ್ದರೆ, ಮೊದಲ ಆವೃತ್ತಿಯ ಫೈನಲಿಸ್ಟ್ ಅರುಣ್ ಸಾಗರ್ ಹೊರಬಿದ್ದಿದ್ದಾರೆ. ಈ ಮೂಲಕ ಫೈನಲ್ ತಲುಪುವ ಅವರ ಪ್ರಯತ್ನ ಕೊನೆಯ ಮೆಟ್ಟಿಲಲ್ಲಿ ಎಡವಿದ್ದಾರೆ.ಮನೆಯವರೆಲ್ಲರ ಪ್ರೀತಿ ಪಾತ್ರರಾಗಿದ್ದ ಅರುಣ್ ಸಾಗರ್ ಪ್ರತಿ ವಾರ 3ರಿಂದ 4 ಲಕ್ಷ ರೂ. ಸಂಭಾವನೆ ಪಡೆದಿದ್ದು, 13 ವಾರ ಬಿಗ್ ಬಾಸ್ ಮನೆಯಲ್ಲಿದ್ದ ಅಮೂಲ್ಯ ಒಟ್ಟಾರೆ 35 ಲಕ್ಷ ರೂ. ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹೈ ಎಂಡ್ ಕಾರಗಳನ್ನ ಖರೀದಿ ನೆಪದಲ್ಲಿ ಪಡೆದು ವಂಚಿಸುತ್ತಿದ್ದ ಆರೋಪಿ ಬಂಧನ!

Mon Dec 26 , 2022
ಕಬ್ಬನ್ ಪಾರ್ಕ್ ಪೊಲೀಸರಿಂದ ಸೈಯಾದ್ ಜಿಮ್ರಾನ್ ಎಂಬಾತನ ಬಂಧನ. ಬಂಧಿತನಿಂದ 10 ಕೋಟಿ ಮೌಲ್ಯದ 9 ಹೈ ಎಂಡ್ ಕಾರಗಳು ವಶಕ್ಕೆ. ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಆರೋಪಿ‌ ಬಂಧನ ಉದ್ಯಮಿಗಳನ್ನ‌ ಪರಿಚಯ ಮಾಡಿಕೊಂಡು ಹೈ ಎಂಡ್ ಕಾರುಗಳನ್ನು ಪಡೆಯುತ್ತಿದ್ದ ಆರೋಪಿ. ಕಾರುಗಳನ್ನ ಒಳ್ಳೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳುತ್ತಿದ್ದ ಆರೋಪಿ. ಉದ್ಯಮಿಗಳು, ವ್ಯಾಪಾರಸ್ಥರ ಬಳಿ ಕಾರುಗಳನ್ನು ಪಡೆದು ವಂಚನೆ. ಆಡಿ, ಬೆನ್ಜ್, ಮಹೀಂದ್ರ ಥಾರ್, ರೇಂಜ್ […]

Advertisement

Wordpress Social Share Plugin powered by Ultimatelysocial