Flipkart Year End Sale ನಲ್ಲಿ ಐಫೋನ್ ಮೇಲೆ ಭಾರೀ ಡಿಸ್ಕೌಂಟ್, ಬೆಲೆಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ

ಮೊದ ಮೊದಲು ಮೊಬೈಲ್ ಫೋನ್ (Mobile Phone) ಭಾರತದಲ್ಲಿ ಆಗಷ್ಟೆ ಪರಿಚಯವಾದಾಗ ಅದರ ಬೆಲೆಗಳು ಗಗನದೆತ್ತರಕ್ಕಿದ್ದವು. ನಂತರ ಮೊಬೈಲ್ ಫೋನುಗಳ, ಡೇಟಾ ಪ್ಯಾಕುಗಳ ಕ್ರಾಂತಿಯೇ ಉಂಟಾಗಿದ್ದು ಈಗ ಇತಿಹಾಸ. ಇಂದು ಎಂತಹ ಸ್ಮಾರ್ಟ್‌ಫೋನ್‌ಗಳೇ (Smartphone) ಆಗಲಿ ಕೈಗೆಟುಕುವ ದರಗಳಲ್ಲಿ ಲಭ್ಯ.
ಆದಾಗ್ಯೂ ಇಂದು ಕೆಲವು ವಿಶೇಷ ಬ್ರ್ಯಾಂಡುಗಳಿದ್ದು ಆ ಬ್ರ್ಯಾಂಡುಗಳ ಫೋನುಗಳನ್ನು ಇಟ್ಟುಕೊಳ್ಳುವುದೇ ಒಂದು ಪ್ರತಿಷ್ಠೆಯ ವಿಷಯದಂತಾಗಿದೆ.ಅದರೆ, ಗಮನಿಸಿ ಈ ಬ್ರ್ಯಾಂಡ್ (Brand) ಫೋನ್‌ಗಳ ಬೆಲೆ ನೀವಂದುಕೊಂಡಷ್ಟು ಕಡಿಮೆಯಂತೂ ಖಂಡಿತ ಇರುವುದಿಲ್ಲ. ಅಂತಹ ಫೋನ್‌ಗಳಲ್ಲಿ ಮಂಚೂಣಿಯಲ್ಲಿದೆ ಐ ಫೋನ್ ಬ್ರ್ಯಾಂಡ್‌ನ ಫೋನ್ (iPhone). ಈ ಬ್ರ್ಯಾಂಡಿನ ಫೋನ್‌ಗಳ ಬೆಲೆ ತುಂಬಾ ದುಬಾರಿ, ಹಾಗಾಗಿ ಬಹಳಷ್ಟು ಜನರಿಗೆ ಈ ಫೋನನ್ನು ಕೊಂಡುಕೊಳ್ಳುವುದು ಅಷ್ಟೊಂದು ಸುಲಭವಾದ ಮಾತಾಗಿಲ್ಲ.

ಆದರೆ, ಈಗ ಆ ಚಿಂತೆಯನ್ನು ಬಿಡಿ. ಏಕೆಂದರೆ ಫ್ಲಿಪ್ ಕಾರ್ಟ್ ನ ವರ್ಷದ ಕೊನೆಯ ಸೇಲ್ ಉತ್ಸವದಲ್ಲಿ ಈಗ ಐಫೋನ್‌ಗಳು ಕಡಿಮೆ ಬೆಲೆಗಳಿಗೆ ದೊರೆಯುತ್ತಿದೆ. ಹೌದು, ಐ ಫೋನ್ 12 ಮಿನಿ ಫೋನ್‌ಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿಗಳನ್ನು ಇಲ್ಲಿ ಪಡೆಯಬಹುದಾಗಿದೆ. ಫ್ಲಿಪ್‌ಕಾರ್ಟ್‌ನ ಸ್ಮಾರ್ಟ್‌ಫೋನ್ ಇಯರ್ ಎಂಡ್ ಸೇಲ್‌ನಲ್ಲಿ ಐಫೋನ್ 12 ಮಿನಿ ರೂ. 41,999ಕ್ಕೆ ಲಭ್ಯವಿದೆ. ಅಲ್ಲದೆ, ಇಲ್ಲಿ ನೀವು ನೋ ಕಾಸ್ಟ್ ಇಎಂಐ ಪೇಮೆಂಟ್ ಆಯ್ಕೆ, ಎಕ್ಸ್ಚೆಂಜ್ ಕೊಡುಗೆ, ಸ್ಮಾರ್ಟ್ ಫೋನ್ ಅಪ್ಗ್ರೇಡ್ ಪ್ರೊಗ್ರ್ಯಾಮ್ ಹಾಗೂ ಸ್ಕ್ರೀನ್ ಪ್ರೊಟೆಕ್ಷನ್ ಕವರ್ ಮೇಲೆ ಅದ್ಭುತವಾದ ರಿಯಾಯಿತಿಗಳನ್ನು ಪಡೆಯಬಹುದಾಗಿದೆ.

ಕ್ರೆಡಿಟ್ ಕಾರ್ಡ್ ಇದ್ದವರಿಗೆ ಆಫರ್ ಇನ್ನೂ ಹೆಚ್ಚು:
ಇನ್ನು, ಐಫೋನ್ 12 ಮಿನಿಯ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ದರ ಪಡೆಯಲು ಗ್ರಾಹಕರು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಬಹುದಾಗಿದೆ. ಸದ್ಯ ಈ ಸೇಲ್ ನಲ್ಲಿ 64 ಜಿಬಿ ಸಾಮರ್ಥ್ಯದ ಕಪ್ಪು, ನೀಲಿ ಮತ್ತು ಬಿಳಿ ಬಣ್ಣದ ಐಫೋನ್ 12 ಮಿನಿ ಫೋನ್‌ಗಳು ಖರೀದಿಸಲು ಲಭ್ಯವಿದೆ.

 ಫೋಲ್ಡೆಬಲ್ ಐಫೋನ್​ಗೆ ಕಾಯುತ್ತಿದ್ದೀರಾ? ಹಾಗಿದ್ರೆ ಮುಂದಿನ ವರ್ಷ ಬರುತ್ತೆ ಅನ್ನೋ ಆಸೆಯನ್ನ ಬಿಟ್ಟುಬಿಡಿ:
128 ಜಿಬಿ ಸಾಮರ್ಥ್ಯದ ಐಫೋನ್ 12 ಮಿನಿಯ ಎಂಆರ್ಪಿ ಬೆಲೆ 64,900 ಇದ್ದು ಭಾರಿ ರಿಯಾಯಿತಿಯೊಂದಿಗೆ ಅದು ರೂ. 55,199 ದೊರೆಯುತ್ತಿದೆ. ಅದರಂತೆ 256 ಜಿಬಿ ಸಾಮರ್ಥ್ಯದ ಐಫೋನ್ 12 ಮಿನಿ ಮಾರುಕಟ್ಟೆ ಬೆಲೆ
ರೂ. 74,900 ಆಗಿದ್ದರೆ ಫ್ಲಿಪ್ ಕಾರ್ಟ್ ಇಯರ್ ಎಂಡ್ ನಲ್ಲಿ ಅದು ರೂ. 65,199 ಕ್ಕೆ ಸಿಗುತ್ತಿದೆ. ರೆಗ್ಯೂಲರ್ ಐಫೋನ್ ಗಳಿಗೂ ಸಹ ಇಲ್ಲಿ ವಿನಾಯಿತಿ ನೀಡಲಾಗುತ್ತಿದೆ ಎಂಬುದು ವಿಶೇಷ. 64 ಜಿಬಿ ಸಾಮರ್ಥ್ಯದ ರೆಗ್ಯೂಲರ್ ಐಫೋನ್ ಬೆಲೆ 54,199 ಆದರೆ 128 ಜಿಬಿ ಸಾಮರ್ಥ್ಯದ ಐಫೋನ್ ರೂ. 65,199 ಗೆ ಲಭ್ಯವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಆಧಾರ್‌ ಕಾರ್ಡ್‌ ಬಳಸಿ ಆದಾಯ ತೆರಿಗೆ ರಿಟರ್ನ್ಸ್ (ITR) ಪರಿಶೀಲಿಸುವುದು ಹೇಗೆ?

Mon Dec 27 , 2021
ಇಂದಿನ ದಿನಗಳಲ್ಲಿ ಆಧಾರ್‌ ಕಾರ್ಡ್‌ ಪ್ರಮುಖವಾದ ದಾಖಲೆಗಳಲ್ಲಿ ಒಂದಾಗಿದೆ. ಇನ್ನು ಸಾರ್ಕರದ ಯಾವುದೇ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕೂ ಆಧಾರ್‌ ಕಾರ್ಡ್‌ ಪ್ರಮುಖವಾಗಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಆಧಾರ್‌ ಕಾರ್ಡ್‌ ಹೊಂದುವುದು ಅತ್ಯಗತ್ಯವಾಗಿದೆ. ಆದರಿಂದ ಆಧಾರ್‌ ಕಾರ್ಡ್‌ ಅನ್ನು ಹಲವು ಸೇವೆಗಳಿಗೆ ಲಿಂಕ್‌ ಮಾಡುವ ಪ್ರಯತ್ನ ಕೂಡ ಸರ್ಕಾರದ ಕಡೆಯಿಂದ ನಡೆಯುತ್ತಿದೆ. ಈಗಾಗಲೇ ಪ್ಯಾನ್‌ ಕಾರ್ಡ್‌ ಜೊತೆಗೆ ಆಧಾರ್‌ ಲಿಂಕ್‌ ಮಾಡಿರುವ ಸರ್ಕಾರ ವೋಟರ್‌ ಐಡಿಗೂ ಲಿಂಕ್‌ ಮಾಡುವ ಪ್ಲಾನ್‌ ಮಾಡಿದೆ. […]

Advertisement

Wordpress Social Share Plugin powered by Ultimatelysocial