ಬೆಳಗಾವಿ 144 ಕಲಂ ನಿಷೇಧಾಜ್ಞೆ ಮಧ್ಯೆಯೂ ಶಿವಾಜಿ ಮಹಾರಾಜರ ಮೂರ್ತಿಗೆ ಹಾಲಿನ ಅಭಿಷೇಕ

ಶಿವಾಜಿ ಮಹಾರಾಜರ ಮೂರ್ತಿಗೆ ಕಪ್ಪು ಮಸಿ ಬಳಿದಿರುವುದನ್ನು ಖಂಡಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕಿಯರು, ಬಿಜೆಪಿ ಮುಖಂಡ‌ ಕಿರಣ ಜಾಧವ ಸೇರಿದಂತೆ ಅನೇಕರು ಶನಿವಾರ ಬೆಳಗ್ಗೆ ಶಹಾಪುರದ ಛತ್ರಪತಿ ಶಿವಾಜಿ‌ ಮಹಾರಾಜರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದ್ದಾರೆ.144 ಕಲಂ ನಿಷೇಧಾಜ್ಞೆ ಮಧ್ಯೆಯೂ ಶಿವಾಜಿ ಮಹಾರಾಜರ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದರು. ಹಾಲಿನ ಅಭಿಷೇಕ, ಪೂಜೆ ಮಡುವ ನೆಪ ಮಾಡಿ ಗುಂಪು‌ ಕಟ್ಟಿಕೊಂಡು ಬಂದು ಶಾಂತಿ ಕದಡಿಸಲು ಯತ್ನಿಸುತ್ತಿದ್ದಾರೆ.ಎಂಇಎಸ್ ನಾಯಕಿಯರಾದ ಮಾಜಿ ಮೇಯರ್ ಸರಿತಾ ಪಾಟೀಲ, ಮಾಜಿ ಉಪಮೇಯರ್ ರೇಣು ಕಿಲ್ಲೇಕರ, ಮಧುಶ್ರೀ ಪೂಜಾರಿ, ಸುಧಾ ಭಾತಖಾಂಡೆ ಸೇರಿದಂತೆ ಎಂಇಎಸ್ ಕಾರ್ಯಕರ್ತೆಯರು ಭಾಗವಹಿಸಿದ್ದರು. ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತ ಅಮಾಯಕ ಯುವಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.ಶಿವಾಜಿ ಮಹಾರಾಜರ ಉದ್ಯಾನವನ ಬಳಿ ಸೇರಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಚದುರಿಸಿ ವಾಪಸ್ ಕಳುಹಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಾವೇ ಕನ್ನಡ ಧ್ರೋಹಿಗಳಿಗೆ ತಕ್ಕ ಪಾಠ ಕಲಿಸ್ತಿವಿ:ಎಂಇಎಸ್ ವಿರುದ್ಧ ಪ್ರವೀಣ್ ಶೆಟ್ಟಿ ಗುಡುಗು 

Sat Dec 18 , 2021
ಬೆಳಗಾವಿಯಲ್ಲಿ ಕಳೆದ ರಾತ್ರಿ ಪುಂಡರು ಪೊಲೀಸ್‌ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವ ಘಟನೆಯನ್ನ ಖಂಡನೀಯ ಕರ್ನಾಟಕ ಬಂದ್ ಮಾಡೋ ಬಗ್ಗೆ ತೀರ್ಮಾನ ಮಾಡ್ತಿವಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ  ಹೇಳಿದ್ದಾರೆ…ಎಲ್ಲಾ ಸಂಘಟನೆ ಒಂದಾಗ್ತಿವಿ, ಈ ಸರ್ಕಾರ ಕನ್ನಡ ಪರವಾಗಿಲ್ಲ,ನಾವೇ ಕನ್ನಡ ಧ್ರೋಹಿಗಳಿಗೆ ತಕ್ಕ ಪಾಠ ಕಲಿಸ್ತಿವಿ.ಕರ್ನಾಟಕದಲ್ಲಿ ಕನ್ನಡಪರವಾದ ಸರ್ಕಾರವಿದೆಯೋ ಅಥವಾ ಬೇರೆ ಸರ್ಕಾರ ಇದ್ರೋ ಗೊತ್ತಾಗ್ತಿಲ್ಲ.ನಮ್ಮ ಕನ್ನಡ ಸಂಘಟನೆಗಳ ಕಾರ್ಯಕರ್ತರು ಮಸಿ ಬಳಿದ್ರೇ 307 ಕೇಸ್ ಹಾಕ್ತಾರೆ.ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial