ಬೆಳಗಾವಿ ಅಧಿವೇಶನದಲ್ಲೇ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ವನ್ನು ಕಾನೂನು ಮಾಡುವ ಎಲ್ಲಾ ಭರವಸೆಯನ್ನು ಸರಕಾರ ನೀಡಿದ್ದು ಶೀಘ್ರವೇ ಈ ಕಾನೂನು ರಚನೆ ಆಗುವುದು ಎಂಬ ನಂಬಿಕೆ ಇದೆ ಎಂದ ನಾಡೋಜ ಡಾ.ಮಹೇಶ್ ಜೋಶಿ

  • ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ವಿಧೇಯಕದ ಮಹತ್ವವನ್ನು ತಿಳಿಸಲಾಗಿದೆ
  • ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನಮ್ಮ ಬೇಡಿಕೆಯನ್ನು ಪಕ್ಷಾತೀತವಾಗಿ ಇದು ಕನ್ನಡ ತಾಯಿಯ ಕೆಲಸ ಎಂದು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ
ಬೆಂಗಳೂರು:ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ವನ್ನು ಕಾನೂನು ಮಾಡುವ ಎಲ್ಲಾ ಭರವಸೆಯನ್ನು ಸರಕಾರ ನೀಡಿದ್ದು ಶೀಘ್ರವೇ ಈ ಕಾನೂನು ರಚನೆ ಆಗುವುದು ಎಂಬ ನಂಬಿಕೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡದ ಬೆಳವಣಿಗೆಗೆ ಅಸ್ತ್ರವಾಗಿರುವ ಕಾನೂನು ಬರಲಿದೆ ಎನ್ನುವ ಭರವಸೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ವಿಧೇಯಕದ ಮಹತ್ವವನ್ನು ತಿಳಿಸಲಾಗಿದೆ ಎಂದು ಹೇಳಿದ್ದಾರೆ.
Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕಕ್ಕೂ ನಿಮಗೂ ಸಂಬಂಧ ಏನು?:

Wed Dec 21 , 2022
ಬೆಂಗಳೂರು: ‘ಕರ್ನಾಟಕಕ್ಕೂ ನಿನಗೂ ಏನ್‌ ಸಂಬಂಧ? ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು? ಪ್ರಧಾನಿ ಬಳಿ ಕೇಳಿ, ನಮ್ಮ ಕುಟುಂಬದ ಏನು ಅಂತ.’ – ಇದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ ಪರಿ.ಮಾಜಿ ಪ್ರಧಾನಿ ಎಚ್‌.ಡಿ. ದೇವೆಗೌಡರ ಕುಟುಂಬ, ಜಾತ್ಯತೀತ ಜನತಾದಳ ಹಾಗೂ ಪಂಚರತ್ನ ಯೋಜನೆಗಳನ್ನು ಟೀಕಿಸಿರುವ ಬಿ.ಎಲ್‌. ಸಂತೋಷ್‌ ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ಏಕವಚನದಲ್ಲಿಯೇ ತಿರುಗೇಟು ನೀಡಿದರು.ಪಕ್ಷದ […]

Advertisement

Wordpress Social Share Plugin powered by Ultimatelysocial