ನನ್ನ ಗೆಳೆಯ ಥ್ರೀಸಮ್‌ಗೆ ಒತ್ತಾಯಿಸ್ತಾನೆ, ಏನು ಮಾಡಲಿ?

ನಾನು ಮತ್ತು ಗೆಳೆಯ ಲಿವಿಂಗ್ ಟುಗೆದರ್. ಆತನಿಗೆ ಹೋಮೋಸೆಕ್ಸ್ ಕೂಡ ಇಷ್ಟ. ಅವನ ಗೆಳೆಯರನ್ನು ಕರೆದು ಮೂವರೂ ಜೊತೆಯಾಗಿ ಸೆಕ್ಸ್ ಮಾಡೋಣವೇ ಎನ್ನುತ್ತಾನೆ. ನನಗೆ ಇಷ್ಟವಿಲ್ಲ. ಏನು ಮಾಡಲಿ?

ನನ್ನ ವಯಸ್ಸು ಇಪ್ಪತ್ತಾರು. ಕಾಲೇಜು ಮುಗಿಸಿದ ಬಳಿಕ ನಗರದಲ್ಲಿ ಒಂದು ಕಾಲೇಜಿನಲ್ಲಿ ಲೆಕ್ಷರರ್ (Lecturer) ಆಗಿದ್ದೇನೆ. ಕಳೆದ ಹಲವಾರು ವರ್ಷಗಳಿಂದ ಮೂವರು ಯುವಕರ ಜೊತೆ ಲಿವಿಂಗ್ ಟುಗೆದರ್ (live In relatinship) ಟ್ರೈ ಮಾಡಿದ್ದೇನೆ. ಆದರೆ ಪ್ರತಿಬಾರಿಯೂ ಏನಾದರೂ ಒಂದು ಸಮಸ್ಯೆ ಬಂದು ಬೇರೆ ಬೇರೆಯಾಗಿದ್ದೇವೆ. ನನಗೆ ಮದುವೆ(wedding)ಯ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲ. ನಮ್ಮ ಮನೆಯಲ್ಲೂ ನೀನು ಮದುವೆ ಮಾಡಿಕೋ ಎಂದು ಫೋರ್ಸ್ ಮಾಡುವುದಿಲ್ಲ. ಆದರೆ ನನಗೇ ನನ್ನ ಸಂಗಾತಿ (Partner) ಹೇಗಿರಬೇಕು ಎಂಬ ಬಗ್ಗೆ ಕೆಲವು ಚೆನ್ನಾದ ಕಲ್ಪನೆಗಳಿವೆ. ನನ್ನ ಮೊದಲ ಬಾಯ್‌ಫ್ರೆಂಡ್‌ (Boyfriend) ನನಗಿಂತ ಹತ್ತು ವರ್ಷ ದೊಡ್ಡವನು. ಅವನು ನನ್ನ ಕಡೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಆರಂಭದ ಕೆಲವು ತಿಂಗಳಲ್ಲಿ ನಮ್ಮ ಸೆಕ್ಸ್ (Sex) ಚೆನ್ನಾಗಿತ್ತು. ಬಳಿಕ ನಾವಿಬ್ಬರೂ ಪರಸ್ಪರರಲ್ಲಿ ಆಸಕ್ತಿ ಕಳೆದುಕೊಂಡೆವು. ಬೇರೆ ಬೇರೆಯಾದೆವು. ನನ್ನ ಎರಡನೇ ಬಾಯ್‌ಫ್ರೆಂಡ್‌ ನನಗಿಂತ ಒಂದೆರಡು ವರ್ಷ ಸಣ್ಣವನು. ಅವನಿಗೂ ನನಗೂ ಸೆಕ್ಸ್ ವಿಷಯದಲ್ಲಿ ಒಂದು ಸಾಮರಸ್ಯವಿತ್ತು. ನಾವು ಹೆಚ್ಚುಕಡಿಮೆ ಪ್ರತಿದಿನ ಸೆಕ್ಸ್ ಮಾಡುತ್ತಿದ್ದೆವು. ಆದರೆ ಒಂದು ದಿನ ಅವನು ಆತನ ಕೊಲೀಗ್ ಜೊತೆಗೆ ಸೆಕ್ಸ್ ಮಾಡುತ್ತಾ ನನಗೆ ಸಿಕ್ಕಿಬಿದ್ದ. ಅವನನ್ನೂ ಬಿಟ್ಟು ಬಿಟ್ಟೆ. ಇದೀಗ ಮೂರನೇ ಬಾಯ್‌ಫ್ರೆಂಡ್ (Boy Friend) ಜೊತೆಗೆ ಇದ್ದೇನೆ. ನಮ್ಮಿಬ್ಬರ ಸೆಕ್ಸ್ ಸಾಮಾನ್ಯವಾಗಿದೆ. ಇದರ ಜೊತೆಗೆ, ಅವನು ಹೋಮೋಸೆಕ್ಷುಯಲ್‌ (Homosexual) ಕೂಡ ಇರಬಹುದು ಎನ್ನುವ ಆತಂಕ ಶುರುವಾಗಿದೆ. ಯಾಕೆಂದರೆ ಚಂದದ ಯುವಕರನ್ನು ಕಂಡರೆ ನನಗೆ ಆದಂತೆಯೇ ಅವನಿಗೂ ಉದ್ರೇಕ ಆಗುತ್ತದೆ. ಅವರನ್ನು ಸೆಕ್ಸ್‌ಗೆ ಕರೆಯೋಣವೇ ಎಂದು ಕೇಳುತ್ತಾನೆ. ಆದರೆ ಮೂವರು ಜತೆಯಾಗಿ ಸೆಕ್ಸ್ ಮಾಡುವುದು (threesome)‌ ನನಗೆ ಇಷ್ಟವಿಲ್ಲ. ಆದರೆ ಬಾಯ್‌ಫ್ರೆಂಡ್ ಒತ್ತಾಯಿಸುತ್ತಿದ್ದಾನೆ. ಈತನ ಸಂಬಂಧವೂ ಕಡಿದುಹೋಗಬಹುದು ಎಂಬ ಆತಂಕ. ಏನು ಮಾಡಲಿ?

ಈ ವಿಚಾರದಲ್ಲಿ ನಿಮ್ಮ ಮಿತ್ರನೂ ಶತ್ರುವೂ ನೀವೇ ಆಗಿದ್ದೀರಿ. ನನಗೆ ಅನ್ನಿಸುವಂತೆ, ನಿಮಗೆ ದೈಹಿಕ ಸಾಂಗತ್ಯವೂ (Physical Relatinship) ಬೇಕು, ಮಾನಸಿಕ ಸಾಂಗತ್ಯವೂ (Emotional Attachment) ಬೇಕು. ಅವೆರಡರಲ್ಲಿ ಯಾವುದು ಮುಖ್ಯವಾಗಿ ಬೇಕು ಎಂದು ನಿರ್ಧರಿಸಿಕೊಳ್ಳುವ ಕಾಲ ಬಂದಿದೆ.
ಇನ್ನು ಸೆಕ್ಸ್ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಈ ಹಿಂದಿನ ಎರಡು ಸಂಗಾತಿಗಳ ಜೊತೆಗೆ ನೀವು ಏನು ಮಾಡಿದ್ದೀರೋ, ಏನು ಬಿಟ್ಟಿದ್ದೀರೋ, ಅವರು ನಿಮಗೆ ಏನು ಮಾಡಿದ್ದರೋ ಇಲ್ಲವೋ, ಅದನ್ನು ಗತಕಾಲಕ್ಕೆ ಬಿಡೋಣ. ಅದನ್ನು ಚಿಂತಿಸುವುದು ಹಾಗೂ ವರ್ತಮಾನಕ್ಕೆ ಎಳೆದು ತರುವುದರಿಂದ ಏನೂ ಪ್ರಯೋಜನವಿಲ್ಲ. ಈಗಿನ ಬಾಯ್‌ಫ್ರೆಂಡ್ ಜೊತೆಗೆ ನಿಮ್ಮ ವರ್ತನೆ ಹೇಗಿರಬೇಕು ಎಂಬುದನ್ನಷ್ಟೇ ಗಮನಿಸೋಣ.
ನಿಮ್ಮ ಗೆಳೆಯ ನಿಮ್ಮತ್ರ ತ್ರೀಸಮ್‌ಗೆ ಒತ್ತಾಯಿಸುತ್ತಿದ್ದಾನೆ ಎಂದಿರಲ್ಲವೇ? ಆದರೆ ನಿಮಗೆ ಅದು ಇಷ್ಟವಿಲ್ಲ. ಇಷ್ಟವಿಲ್ಲ ಎಂದರೆ ಗೆಳೆಯ ನಿಮ್ಮ ಕೈಬಿಡಬಹುದು ಎಂಬ ಆತಂಕ ನಿಮ್ಮದು. ನೀವು ನಿಮ್ಮ ಒಲವು ಏನು ಎಂಬುದನ್ನು ಆತನಿಗೆ ಸ್ಪಷ್ಟವಾಗಿ ಹೇಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೂವತ್ತರ ನಂತರ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏನೇನಾಗುತ್ತೆ? ಗೊತ್ತೇ?

Wed Dec 22 , 2021
ಈಗಿನ ಯುವಜನತೆ ಇಪ್ಪತ್ತರ ಹರೆಯದಿಂದಲೇ ತಮ್ಮ ಸೆಕ್ಸ್ ಲೈಫ್ ಆರಂಭಿಸುತ್ತಾರೆ. ಹೀಗಾಗಿ ಮೂವತ್ತರ ಹೊತ್ತಿಗೆ ಅವರ ಸೆಕ್ಸ್ ಲೈಫ್‌ನಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸಿರುತ್ತವೆ. ಬನ್ನಿ, ಮೂವತ್ತರ ನಂತರ ಸೆಕ್ಸ್ ನಿಮ್ಮ ಬಾಡಿಗೆ ಏನು ಮಾಡುತ್ತೆ ತಿಳಿಯೋಣ. ನೀವು ಇಪ್ಪತ್ತರ ಹರೆಯದಲ್ಲಿ ಸೆಕ್ಸ್ ಅನುಭವ ಹೊಂದಿದ್ದವರಾಗಿದ್ದರೆ, ಆ ವೇಳೆ ನೀವು ಅನುಭವಿಸುವ ತೀವ್ರ ಉದ್ರೇಕ, ಉತ್ಸಾಹ, ಸುಖಗಳು ನಿಮ್ಮ ಅರಿವಿಗೆ ಬಂದಿರುತ್ತವೆ. ವಯಸ್ಸು ಮೂವತ್ತು ಆದ ಬಳಿಕ ಈ ತೀವ್ರೋದ್ರೇಕಗಳು ಇಳಿಯುತ್ತವೆ. […]

Advertisement

Wordpress Social Share Plugin powered by Ultimatelysocial