“ಕಿಚನ್, ಡೈನಿಂಗ್ ಟೇಬಲ್ ಮೇಲೆ ಕೂತ್ಕೊಂಡು ಅಭ್ಯರ್ಥಿ ಘೋಷಣೆ ಮಾಡೋ ಪಕ್ಷ ನಮ್ಮದಲ್ಲ”

 

ನಮ್ಮದು ಪ್ರಜಾಪ್ರಭುತ್ವ ಪಕ್ಷ. ನನ್ನನ್ನು ನಾನೇ ಕ್ಯಾಂಡಿಡೇಟ್ ಅಂತ ಹೇಳಿಕೊಳ್ಳುವುದಕ್ಕೆ ನಾನು ದೊಡ್ಡ ಕುಟುಂಬದವನಲ್ಲ. ಕಿಚನ್, ಡೈನಿಂಗ್ ಟೇಬಲ್ ಮೇಲೆ ಕೂತ್ಕೊಂಡು ಅಭ್ಯರ್ಥಿ ಘೋಷಣೆ ಮಾಡುವ ಪಕ್ಷ ನಮ್ಮದಲ್ಲ. ಪ್ರಭುತ್ವವನ್ನು ಬಿಟ್ಟು ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ರಾಜಕಾರಣ ಮಾಡುವುದಕ್ಕೆ ನಮ್ಮಲ್ಲಿ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಹಾಸನ ಶಾಸಕ ಬಿಜೆಪಿಯ, ಪ್ರೀತಂ ಜೆ ಗೌಡ ಮತ್ತೊಮ್ಮೆ ಜೆಡಿಎಸ್ ಪಕ್ಷದ “ಕುಟುಂಬ ರಾಜಕಾರಣ”ವನ್ನು ಪರೋಕ್ಷವಾಗಿಯೇ ಮಾತಿನ ಮೂಲಕ ಕುಟುಕಿದರು.ಹಾಸನದಲ್ಲಿ ಮಾತನಾಡಿದ ಅವರು, ಪ್ರೀತಮ್ ಆವತ್ತು ಹೇಳಿದ್ದ ಆ ಮಾತಿಗೆ ಯಾವತ್ತು ಹಿಂದೆ ಸರಿಯೋದಿಲ್ಲ. ಮೊದಲು ಯಾರು ಅಭ್ಯರ್ಥಿ ಎಂದು ಅವರು ತೀರ್ಮಾನ ಮಾಡಿಕೊಳ್ಳಲಿ. ನಂತರ ನಾನು ಅವರ ಪ್ರತಿಸ್ಪರ್ಧಿಯಾಗಿ ನಿಲ್ಲವುದು ಬಿಡದು ನಮ್ಮ ಹೈಕಮಾಂಡ್‌ಗೆ ಬಿಟ್ಟಿದ್ದು. ಅವರ ಹಾಗೆ ನಮ್ಮಲ್ಲಿ ನಾನೇ ಅಭ್ಯರ್ಥಿ ಅಂತ ಹೇಳಿಕೊಳ್ಳೋದಕ್ಕೆ ಸ್ವಾತಂತ್ರ್ಯ ಇಲ್ಲ ಅಂತ ಮತ್ತೊಮ್ಮೆ ಪುನರುಚ್ಚಾರ ಮಾಡಿದ್ರು.ಹಾಸನದಲ್ಲಿ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಇರುತ್ತೇನೆ. ಚುನಾವಣೆ ಘೋಷಣೆಯಾಗುವ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು. ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾನು ಕೂಡ ಹಾಸನ ಕ್ಷೇತ್ರದ ಪ್ರಬಲ ಆಕಾಂಕ್ಷಿ. ಹಾಸನದಿಂದ ಶಾಸಕನಾಗಿ ಕಳೆದ ನಾಲ್ಕುವರೆ ವರ್ಷದಲ್ಲಿ ಏನೇನು ಕೆಲಸ ಮಾಡಿದ್ದಾನೆ ಅನ್ನೋದನ್ನ ನಮ್ಮ ಪಕ್ಷ ರಿಪೋರ್ಟ್ ತೆಗೆದುಕೊಳ್ಳಲಿದೆ. ಅದರ ಆಧಾರದ ಮೇಲೆ ಸಮೀಕ್ಷೆ ಆಗುತ್ತದೆ. ಸಮೀಕ್ಷೆ ಮಾಡಿದ ನಂತರ ಯಾರಿಗೆ ಟಿಕೆಟ್ ಕೊಡಬೇಕು ಅಂತ ಅವರು ಡಿಸೈಡ್ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತಾರೆ. ಆದರೆ ಬೇರೆ ಪಕ್ಷದ ರೀತಿ ನಮ್ಮ ಪಕ್ಷದಲ್ಲಿ ಇಲ್ಲ. ನಮ್ಮದು ಶಿಸ್ತು ಬದ್ಧ ಪಕ್ಷ. ನನ್ನ ಮಾರ್ಕ್ಸ್ ಕಾರ್ಡ್ ಚೆನ್ನಾಗಿದೆ ಅಂತ ನನಗೆ ಅನಿಸ್ತಿದೆ. ಹಾಗಾಗಿ ಈ ಬಾರಿಯೂ ನನಗೆ ಸಿಗಬಹುದು ಎಂಬ ಭರವಸೆಯಿದೆ ಎಂದರು.ರೇವಣ್ಣ ಹಾಸನದಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೋಡಿ ಕಾಂಕ್ರೀಟ್ ಹಾಕಿ ಫೈನಲ್ ಆದ್ಮೇಲೆ ನಾನ್ ಮಾತಾಡ್ತೀನಿ. ಪ್ರತಿದಿನ ಅದನ್ನೇ ಯಾಕೆ ಕೇಳ್ತೀರಿ? ಅಲ್ಲಿ ನಿಂತ್ರು ಯಾರ್ ನಿಲ್ಲಬಹುದು ನಮಣ್ಣ ರೇವಣ್ಣ ಅಥವಾ ಅಕ್ಕ ಭವಾನಿ ರೇವಣ್ಣ ಅಥವಾ ತಮ್ಮ ಸ್ವರೂಪ ನಿಲ್ಲಬಹುದು ಅಥವಾ ಕಾಂಗ್ರೆಸ್ ನಿಂದ ಮಂಜೇಗೌಡ್ರು, ಬನವಾಸಿ ರಂಗಸ್ವಾಮಿ ಇನ್ನು ಬೇರೆ ಬೇರೆ ಪಕ್ಷದಿಂದ ಯಾರೇ ನಿಂತರೂ ನಾನು ಅವರಿಗೆ ಪ್ರತಿಸ್ಪರ್ಧೆ ಮಾಡಬೇಕು ಅನ್ನೋದನ್ನ, ಪಕ್ಷ ನನಗೆ ಟಿಕೆಟ್ ನೀಡಿದ ಮೇಲೆ ನಾನು ಉತ್ತರ ಕೊಡುತ್ತೇನೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿ.ರೂಪ ಹೇಳಿಕೆ..

Mon Feb 20 , 2023
ನಾನು ಇವಾಗ ಸಿ.ಎಸ್ ರವರಿಗೆ ದೂರು ನೀಡಲು ಹೋಗುತ್ತಿದ್ದೆನೆ.. ವಿಧಾನ ಸೌಧದಲ್ಲಿ ಸಿ.ಎಸ್ ರನ್ನು ಭೇಟಿ ನೀಡುತ್ತೇನೆ.. ದೂರಿನಲ್ಲಿ ಪ್ರಮುಖ 7 ಭ್ರಷ್ಟಾಚಾರ ಆರೋಪಗಳನ್ನು ಉಲ್ಲೇಖ ಮಾಡುತ್ತೇನೆ.. ಅವರು ನನ್ನ ಮೇಲೆ ದೂರು ಕೊಟ್ಟಿರೋದು ಎಫ್ಐಆರ್ ಆಗಿಲ್ಲ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial