ಅಕ್ರಮ ಭೂ ಕಬಳಿಕೆ ಆರೋಪ ನಿರಾಕರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ

ಬೆಳಗಾವಿ ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜುರವರು ಭೂಕಬಳಿಕೆಯ ವಿಚಾರ ಜೋರು ಸದ್ದು ಮಾಡ್ತಿದೆ.. ಸಚಿವರ ರಾಜೀನಾಮೆಗೂ ಒತ್ತಾಯಿಸುತ್ತಿದ್ದಾರೆ.. ಆದ್ರೆ ಸಚಿವ ಬೈರತಿ ಬಸವರಾಜು ನ್ಯಾಯಯುತವಾಗಿ ವ್ಯವಹಾರ ನಡೆದಿದೆ ಎನ್ನುತ್ತಿದ್ದಾರೆ..ನಗರರಾಭಿವೃದ್ಧಿ ಸಚಿವ ಬೈರತ ಬಸವರಾಜುಗೆ ಭೂಉರುಳು ಸುತ್ತಿಕೊಂಡಿದೆ.. 18 ವರ್ಷಗಳ ಹಳೇಯ ಕೇಸಿಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೇಸ್ ರಾಜೀನಾಮೆಗೆ ಒತ್ತಾಯಿಸುತ್ತಿದೆ.. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಕ್ಕೆ ಬುದ್ದಿಕಲಿಸಲು ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ.. ಆದ್ರೆ ಬೈರತಿ ಬಸವರಾಜು ಭೂಹಗರಣದ ಬಗ್ಗೆ ಮಾತನಾಡಿದ್ದು ರಾಮಮೂರ್ತಿನಗರ ವಾರ್ಡ್ ನ ಎನ್ ಆರ್ ಐ ಬಡಾವಣೆಯಲ್ಲಿ 35 ಎಕರೆ ಖಾಸಗಿ ಭೂಮಿಯಾಗಿದೆ.. ನನ್ನ ಮೇಲಿನ ಆರೋಪ ಸುಳ್ಳು ಸತ್ಯಕ್ಕೆ ದೂರವಾದ್ದು.. ನಾನು ಯಾವುದೇ ತಪ್ಪು‌ಮಾಡಿಲ್ಲ ರಾಜೀನಾಮೆ ಪ್ರಶ್ನೆಯೇ ಇಲ್ಲ.. 2013 ರಲ್ಲೇ ಎಕರೆಗೆ 18 ಲಕ್ಷ ನೀಡಿ ಖರೀದಿ ಮಾಡಿದ್ದೇನೆ.. ಈ ವಿಚಾರ ಜಮೀನು‌ಮಾಲೀಕರ ಸಮ್ಮುಖ ಮತ್ತು ಕಲ್ಕೆರೆ ನಿವಾಸಿಗಳ ಸಮ್ಮುಖದಲ್ಲೇ ನಡೆಯಲಿ ಸತ್ಯಾಂಶ‌ ತಿಳಿಯಲಿದೆ‌.. ನಾನು‌ ನ್ಯಾಯಾಲಯಕ್ಕೆ ತಲೆ ಬಾಗುತ್ತೇನೆ ಯಾರಿಗೂ‌ಮೋಸ ಮಾಡಿಲ್ಲ‌ ಎಂಬುದನ್ನು ಸಮರ್ಥಿಸಿಕೊಂಡರು.

ಇನ್ನು ಬೈರತಿ ಬಸವರಾಜು ಜಮೀನನ್ನು ಖರೀದಿಸಿರೋದು ದಿ.ಆದೂರು ಅಣ್ಣಯ್ಯಪ್ಪರವರ ಅವಿಭಕ್ತ ಕುಟುಂಬದಿಂದಾಗಿದೆ.. ಐದು ಜನ ಸಹೋದರರು ಒಟ್ಟಾರೆಯಾಗಿ ಸೇರಿಕೊಂಡು ಬೈರತಿಯವರಿಗೆ ಜಿಪಿಎ‌ ಮಾಡಿಕೊಟ್ಟಿದ್ದು ಆ ಮೂಲಕ ಜಮೀನು‌ಮಾರಾಟ ಮಾಡಿದ್ದಾರೆ.. ಇದನ್ನು ಅಣ್ಣಯ್ಯಪ್ಪರವರ ಕುಟುಂಬ ಸುದ್ಧಿಗೋಷ್ಟಿ ನಡೆಸಿ ನಮಗೆ ಬೈರತಿ ಬಸವರಾಜು ಯಾವುದೇ‌ ಮೋಸ‌ಮಾಡಿಲ್ಲ.. ಸುಮ್ಮನೆ ಆರೋಪ ಮಾಡಲಾಗುತ್ತಿದೆ.. ನಾವೆಲ್ಲ ಸಹೋದರರು 2003 ರಲ್ಲಿ ವಿಭಾಗೀಯ ಪತ್ರ ಮಾಡಿಕೊಂಡೆವು 2013 ರಲ್ಲಿ ಜಮೀನು‌ಮಾರಾಟ ಮಾಡಿದ್ದೇವೆ ನಮ್ಮ ಕುಟುಂಬದಲ್ಲಿ‌ ಎಲ್ಲರೂ ಒಗ್ಗಟ್ಟಾಗಿದ್ದೇವೆ.. ಎ. ಮಾದಪ್ಪ‌ಮಾತ್ರವೇ ತಕರಾರು‌ಮಾಡಿದ್ದು ಇದಕ್ಕೂ‌ನಮಗೂ‌ ಸಂಬಂಧವಿಲ್ಲ.. ಬೈರತಿ ಬಸವರಾಜು ಅನ್ಯಾಯ ಮಾಡಿಲ್ಲ ನಾವು ಎಲ್ಲಿ ಬೇಕಾದ್ರು ಇದನ್ನು ಹೇಳುತ್ತೇವೆ ಎಂದು ಕಲ್ಕೆರೆ ಗ್ರಾಮದ ಮಾದಪ್ಪ‌ ಸ್ಪಷ್ಟಪಡಿಸಿದ್ರು..

ಸದ್ಯ ಬೈರತಿ ಬಸವರಾಜು ಪರ ವಿರೋಧ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿಯೇ ಕೇಳುತ್ತಿದೆ.. ಆದ್ರೆ ಬೈರತಿ ಬಸವರಾಜು ಪರ ಜಮೀನು‌ಮಾಲೀಕರ ಕುಟುಂಬದ 60ಕ್ಕೂ ಹೆಚ್ಚು ಸದಸ್ಯರು ನಿಂತಿದ್ದಾರೆ.. ರಾಜಕೀಯದಲ್ಲಿ‌ ಯಾವಾಗ ಏನಾಗುತ್ತೋ ಕಾದುನೋಡಬೇಕಿದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರನೇ ದಿನಕ್ಕೆ ಕಾಲಿಟ್ಟ ಚಿಕ್ಕೋಡಿ ಜಿಲ್ಲಾ ಹೋರಾಟ ಕ್ಯಾರೆ ಎನ್ನದ ಸಚಿವರು

Sun Dec 19 , 2021
ಚಿಕ್ಕೋಡಿ ಜಿಲ್ಲಾ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ, ಇದೂವರೆಗೆ ಯಾರೊಬ್ಬ ಜನಪ್ರತಿನಿಧಿಯು ಇತ್ತಕಡೆಗೆ ಹಾದಿಲ್ಲ, ರೊಚ್ಚಿಗೆದ್ದ ಹೋರಾಟಗಾರರು ಚಿಕ್ಕೋಡಿ ಉಪವಿಭಾಗದ ಸಂಸಧ-ಶಾಸಕರ ಭಾವಚಿತ್ರಗಳನ್ನು ಧಹನ ಮಾಡಿ ಅಕ್ರೋಶ ವ್ಯಕ್ತ ಪಡಿಸಿದರು, ಈ ಸಂಧರ್ಭದಲ್ಲಿ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಕಾಶೀನಾಥ ಕುರಣಿ ಮಾತನಾಡಿ, ಎಷ್ಟೊಂದು ದುರ್ದೈವ ನೋಡಿ, ಆರೋಗ್ಯ ಸಚಿವರು ಕಾರಿನಿಂದ ಕೆಳಗಿಳಿಯಲಿಲ್ಲ, ಈ ಸಚಿವರ ಕಾರಿನಲ್ಲಿ ನಮ್ಮ ಭಾಗದ ಶಾಸಕ ಗಣೇಶ ಹುಕ್ಕೇರಿ ಇವರೂ ಸಹ ಇದ್ದರು, […]

Advertisement

Wordpress Social Share Plugin powered by Ultimatelysocial