ಮತ್ತೆ ಬಿಡುಗಡೆ ಆಗುತ್ತಿದೆ ಅಣ್ಣಾವ್ರ ‘ಭಾಗ್ಯವಂತರು’

 

ಎವರ್ ಗ್ರೀನ್ ಸಿನಿಮಾಗಳ ಮರುಬಿಡುಗಡೆ ಹೊಸತೇನೂ ಅಲ್ಲ. ‘ಓಂ’ ಸೇರಿದಂತೆ ಹಲವಾರು ಸಿನಿಮಾಗಳು ಮರು ಬಿಡುಗಡೆಗೊಂಡು ಉತ್ತಮ ಪ್ರದರ್ಶನವನ್ನು ಕಂಡಿವೆ.

ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಸಾಕಷ್ಟು ಸಿನಿಮಾಗಳು ಸಹ ಮರು ಬಿಡುಗಡೆಗೊಂಡಿವೆ.

‘ಸತ್ಯ ಹರಿಶ್ಚಂದ್ರ’ ಹಾಗೂ ಇನ್ನಿತರೆ ಸಿನಿಮಾಗಳು ಹೊಸ ತಂತ್ರಜ್ಞಾನದೊಂದಿಗೆ ಬಣ್ಣ ತುಂಬಿಕೊಂಡು ಮರುಬಿಡುಗೆಯಾಗಿದ್ದವು. ಇದೀಗ ಡಾ ರಾಜ್‌ಕುಮಾರ್ ನಟನೆಯ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ‘ಭಾಗ್ಯವಂತರು’ ಮರು ಬಿಡುಗಡೆ ಆಗುತ್ತಿದೆ.

ಡಾ ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅಭಿನಯಸಿದ್ದ ಸೂಪರ್ ಹಿಟ್ “ಭಾಗ್ಯವಂತರು” ಚಿತ್ರವನ್ನು ಭಾರ್ಗವ ನಿರ್ದೇಶಿಸಿದ್ದರು. ದ್ವಾರಕೀಶ್ ಚಿತ್ರ ನಿರ್ಮಾಣ ಮಾಡಿತ್ತು. ಈಗ ನಲವತ್ತೈದು ವರ್ಷಗಳ ನಂತರ ಹೊಸ ತಂತ್ರಜ್ಞಾನದೊಂದಿಗೆ “ಭಾಗ್ಯವಂತರು” ಚಿತ್ರ ಮರು ಬಿಡುಗಡೆಯಾಗುತ್ತಿದೆ.‌ ಮುನಿರಾಜು.ಎಂ ಈ ಚಿತ್ರವನ್ನು ಈಗ ಬಿಡುಗಡೆ ಮಾಡುತ್ತಿದ್ದಾರೆ.

7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಜುಲೈ 8ರಂದು ರಾಜ್ಯಾದ್ಯಂತ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ಭಾಗ್ಯವಂತರು” ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಮುನಿರಾಜು ತಿಳಿಸಿದ್ದಾರೆ.

ಡಾ ರಾಜಕುಮಾರ್ ಅವರ ಅಪಟ್ಟ ಅಭಿಮಾನಿಯಾಗಿರುವ ಮುನಿರಾಜು, ಈ ಹಿಂದೆ “ಆಪರೇಷನ್ ಡೈಮೆಂಡ್ ರಾಕೇಟ್”, ” ನಾನೊಬ್ಬ ಕಳ್ಳ”, “ದಾರಿ ತಪ್ಪಿದ ಮಗ” ಸೇರಿದಂತೆ ಅಣ್ಣಾವ್ರ ಅಭಿನಯದ ಇನ್ನೂ ಕೆಲವು ಸಿನಿಮಾಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದಾರೆ. ಈಗ “ಭಾಗ್ಯವಂತರು” ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಇದರ ನಂತರ ಮುಂದೆ “ಹುಲಿ ಹಾಲಿನ ಮೇವು” ಸೇರಿದಂತೆ ಅಣ್ಣಾವ್ರ ಇನ್ನಷ್ಟು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

‘ಭಾಗ್ಯವಂತರು’ ಸಿನಿಮಾ ಮೊದಲಿಗೆ 1977 ರಂದು ಬಿಡುಗಡೆ ಆಗಿತ್ತು. ಸಿನಿಮಾ ಬಹುದೊಡ್ಡ ಹಿಟ್ ಎನಿಸಿಕೊಂಡಿತ್ತು. ಸಿನಿಮಾದ ಹಾಡುಗಳು ಇಂದಿಗೂ ಎವರ್‌ ಗ್ರೀನ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಲಾ ಶಿಕ್ಷಣ ಇಲಾಖೆ ಸಮಸ್ಯೆ ಪರಿಹರಿಸಲು ವಿಭಿನ್ನ ಪ್ರಯತ್ನ;

Tue Jun 28 , 2022
ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಈಗ ಶಿಕ್ಷಣ ಇಲಾಖೆ ಎಂದು ಬದಲಾಯಿಸಲಾಗಿದ್ದು, ಇದೀಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಮಸ್ಯೆಗಳು ಹಾಗೂ ದೂರುಗಳನ್ನು ಪರಿಹರಿಸಲು ವಿಭಿನ್ನ ಪ್ರಯತ್ನವೊಂದಕ್ಕೆ ಕೈ ಹಾಕಲಾಗಿದೆ. ಹೌದು, ವೆಬ್ ಸೈಟ್ ಒಂದನ್ನು ಆರಂಭಿಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಇದರಲ್ಲಿ ತೆರೆಯಲಾಗುವ ವಿಶೇಷ ಪುಟ ಒಂದರ ಮೂಲಕ ಯಾರು ಬೇಕಾದರೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಮಸ್ಯೆ ಮತ್ತು ದೂರುಗಳನ್ನು ಸಲ್ಲಿಸಬಹುದಾಗಿದೆ. ಇದು […]

Advertisement

Wordpress Social Share Plugin powered by Ultimatelysocial