ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಆಡಬೇಕಾಗಿದೆ;

ನವದೆಹಲಿ : ಟೀಂ ಇಂಡಿಯಾ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ.

ಜನವರಿ 19, 21 ಮತ್ತು 23 ರಂದು ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ. ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಆದರೆ ತಂಡ ಆಯ್ಕೆ ಮಾಡುವಲ್ಲಿ ಆಯ್ಕೆಗಾರರ ನಿರ್ಧಾರಡ ಕುರಿತಂತೆ ಇದೀಗ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ತಂಡದ ಆಯ್ಕೆ ಪ್ರಕ್ರಿಯೆಯಿಂದ ಟೀಂ ಇಂಡಿಯಾದ ಆಟಗಾರನೊಬ್ಬನಿಗ ಭಾರೀ ಅನ್ಯಾಯವಾಗಿದೆ. ಕೇವಲ ಒಂದೇ ಸರಣಿಯಲ್ಲಿ ಆಡಲು ಅವಕಾಶ ಮಾಡಿಕೊಟ್ಟು, ಇದೀಗ ಈ ಆಟಗಾರನನ್ನು ತಂಡದಿಂದಲೇ ಕೈ ಬಿಟ್ಟಿದೆ.

ಒಂದೇ ಸರಣಿಯ ಮೂಲಕ ತಂಡದಿಂದ ಹೊರಗಿಟ್ಟ ಆಯ್ಕೆ ಮಂಡಳಿ :

ವಾಸ್ತವವಾಗಿ, ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಪಾದಾರ್ಪಣೆ ಮಾಡಿದ ವೇಗದ ಬೌಲರ್ ಹರ್ಷಲ್ ಪಟೇಲ್  ಅವರನ್ನು ಟೀಮ್ ಇಂಡಿಯಾ ತಂಡದಿಂದ ಕೈ ಬಿಡಲಾಗಿದೆ. ಹರ್ಷಲ್ ಪಟೇಲ್, ಐಪಿಎಲ್ 2021 ರಲ್ಲಿ ಅತ್ಯಧಿಕ 32 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಹರ್ಷಲ್ ಪಟೇಲ್ ಆಘಾತಕಾರಿ ಬೌಲಿಂಗ್ ಆಧಾರದ ಮೇಲೆ, ಅವರನ್ನು ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಅವರನ್ನ ತಂಡದಿಂದ ಕೈ ಬಿಟ್ಟಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಒಂದೇ ಸರಣಿಯ ನಂತರ ತಂಡದಿಂದ ಹೊರಕ್ಕೆ :

ಹರ್ಷಲ್ ಪಟೇಲ್  ಅವರು ನವೆಂಬರ್ 19, 2021 ಮತ್ತು ನವೆಂಬರ್ 21, 2021 ರಂದು ನ್ಯೂಜಿಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ T20 ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದಿದ್ದರು. ಈ ಎರಡೂ ಟಿ20 ಪಂದ್ಯಗಳಲ್ಲಿ ಹರ್ಷಲ್ ಪಟೇಲ್ 4 ವಿಕೆಟ್ ಕಬಳಿಸಲು ಶಕ್ತರಾಗಿದ್ದರು. ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಹರ್ಷಲ್ ಪಟೇಲ್ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ, ಡಿಸೆಂಬರ್ 31 ರಂದು ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ತಂಡವನ್ನು ಘೋಷಿಸಲಾಗಿದೆ. ಆದರೆ ಘೋಷಣೆಯಾದ ತಂಡದಿಂದ ಹರ್ಷಲ್ ಪಟೇಲ್ ಅವರನ್ನು ಕೈ ಬಿಡಲಾಗಿದೆ.

ಟೀಮ್ ಇಂಡಿಯಾದಿಂದ ಕೈ ಬಿಟ್ಟಿರುವುದಕ್ಕೆ ಕಾರಣ ?

ಕೇವಲ ಒಂದೇ ಸರಣಿಗೆ ಅವಕಾಶ ನೀಡಿ, ಹರ್ಷಲ್ ಪಟೇಲ್ ಅವರನ್ನು ಟೀಂ ಇಂಡಿಯಾದಿಂದ ಕೈ ಬಿಡಲಾಗಿದೆ. ಹರ್ಷಲ್ ಪಟೇಲ್ ಅವರನ್ನು ಕಡೆಗಣಿಸಿ, ಕೆಟ್ಟ ಫಾರ್ಮ್‌ನಲ್ಲಿರುವ ಭುವನೇಶ್ವರ್ ಕುಮಾರ್‌ಗೆ ಆಯ್ಕೆದಾರರು ಅವಕಾಶ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ:

ಕೆಎಲ್ ರಾಹುಲ್  (ನಾಯಕ), ಶಿಖರ್ ಧವನ್, ರಿತುರಾಜ್ ಗಾಯಕ್ವಾಡ್ , ವಿರಾಟ್ ಕೊಹ್ಲಿ , ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್ , ವೆಂಕಟೇಶ್ ಅಯ್ಯರ್, ರಿಷಬ್ ಪಂತ್ , ಇಶಾನ್ ಕಿಶನ್ , ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ವಾಷಿಂಗ್ಟನ್ ಸುಂದರ್ , ಜಸ್ಪ್ರೀತ್ ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Ramanagaraದಲ್ಲಿ ಸಿಎಂ ಮುಂದೆನೇ ಡಿ.ಕೆ.ಸುರೇಶ್​, ಸಚಿವ ಅಶ್ವತ್ಥ್ ನಾರಾಯಣ ವಾಗ್ವಾದ | CmBommai | DkSuresh | SNK

Mon Jan 3 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial