ಎರಡು ಅವಧಿಯಿಂದ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿಬಿಜೆಪಿ.

ನವದೆಹಲಿ:ಎರಡು ಅವಧಿಯಿಂದ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿ(BJP), 2024ರ ಚುನಾವಣೆಯಲ್ಲಿ 400 ಲೋಕಸಭೆ ಕ್ಷೆತ್ರಗಳನ್ನು ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ.

2019ರ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾಪನಗಳನ್ನು ಗೆದ್ದುಕೊಂಡಿತ್ತು. 2024ರ ಚುನಾವಣೆಯಲ್ಲಿ 400 ಸ್ಥಾನಗಳ್ನು ಗೆಲ್ಲುವುದಕ್ಕಾಗಿ ಬಿಜೆಪಿಯು (Lok Sabha Election 2024) ಈಗನಿಂದಲೇ ಎಲ್ಲ ತಯಾರಿಯನ್ನು ಮಾಡಿಕೊಂಡಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿವೆ.

400 ಸ್ಥಾನಗಳನ್ನು ಗೆಲ್ಲುವುದು ಅವಾಸ್ತವಿಕ ಅಲ್ಲ. ಇದು ಸಾಧಿಸಬಹುದಾದ ಟಾರ್ಗೆಟ್ ಆಗಿದೆ. 2014ರಲ್ಲಿ ಬಿಜೆಪಿ 273 ಪ್ಲಸ್ ಮಿಷನ್‌ನೊಂದಿಗೆ ಕೆಲಸ ಮಾಡಿತ್ತು ಮತ್ತು ಆ ಗುರಿಯನ್ನು ಈಡೇರಿಸಿಕೊಂಡಿತ್ತು. ಅದೇ ರೀತಿ, ಬಿಜೆಪಿ ಈ ಬಾರಿ 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಹೇಳಿದ್ದಾರೆ.

2019ರಲ್ಲಿ ಪಕ್ಷದ ನಾಯಕತ್ವವು 300 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದ್ದರು. ಪ್ರಧಾನಿ ಮೋದಿ ಅವರಂತೂ ಅಬ್‌ ಕಿ ಬಾರ್ 300 ಪಾರ್ ಎಂದು ಘೋಷಣೆ ಮೊಳಗಿಸಿದ್ದರು. ಪಕ್ಷವು 303 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಪಕ್ಷದ ತಂತ್ರಗಾರರು 2024ರಲ್ಲಿ 400 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ನೀಡಿದ್ದಾರೆ. ಆ ಮೂಲಕ ಮೂರನೇ ಬಾರಿಗೆ ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡುವ ತಯಾರಿ ಈಗಿನಿಂದಲೇ ಶುರುವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೂತ್ರ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು ಬ್ರೈನ್ ಟ್ಯೂಮರ್:

Sun Feb 5 , 2023
ವಿಜ್ಞಾನಿಗಳು ಮಾನವನ ಮೂತ್ರದಲ್ಲಿನ ಪ್ರಮುಖ ಪೊರೆಯ ಪ್ರೋಟೀನ್ ಅನ್ನು ಗುರುತಿಸಲು ಬಹಳ ವಿಶೇಷವಾದ ಮತ್ತು ಹೊಸ ಸಾಧನವನ್ನು ಬಳಸಿದ್ದಾರೆ. ಅದು ರೋಗಿಯ ಮೆದುಳಿನಲ್ಲಿ ಗೆಡ್ಡೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಬಲ್ಲದು.ಮೆಂಬರೇನ್ ಪ್ರೊಟೀನ್‌ಗಳು, ಬಯೋಮೆಂಬರೇನ್‌ಗಳನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುವ ಪ್ರೋಟೀನ್‌ಗಳಾಗಿವೆ. ಮೆದುಳಿನ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಬಳಸಲಾಗುವ ಪ್ರೊಟೀನ್ ಗೆಡ್ಡೆಗಳನ್ನು ಕಂಡುಹಿಡಿಯಲು ಆಕ್ರಮಣಕಾರಿ ಪರೀಕ್ಷೆಗಳ ಅಗತ್ಯವನ್ನು ಈ ಹೊಸ ಆವಿಷ್ಕಾರ ಕಡಿಮೆ ಮಾಡುತ್ತದೆ. ಆರಂಭಿಕ ಹಂತದಲ್ಲಿ ಗೆಡ್ಡೆಗಳನ್ನು ಪತ್ತೆ […]

Advertisement

Wordpress Social Share Plugin powered by Ultimatelysocial