ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಯುವರಾಜ್ ನಟನೆಯ ಚೊಚ್ಚಲ ಚಿತ್ರದ ಬಿಗ್ ಅಪ್‌ಡೇಟ್!

ಡಾ. ರಾಜ್‌ಕುಮಾರ್ ಮೊಮ್ಮಗ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ತೆರೆಮರೆಯಲ್ಲಿ ಸಕಲ ತಯಾರಿ ನಡೆಯುತ್ತಿದೆ. ಆದರೆ ಯುವ ಚೊಚ್ಚಲ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಸಿಗದೇ ಫ್ಯಾನ್ಸ್ ನಿರಾಶರಾಗಿದ್ದಾರೆ. ಈ ನಡುವೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

ಅಪ್ಪು ಹುಟ್ಟುಹಬ್ಬದಂದು ಯುವರಾಜ್ ಕುಮಾರ್ ಸಿನಿಮಾ ಕುರಿತು ಬಿಗ್ ಅಪ್‌ಡೇಟ್ ಸಿಗಲಿದೆ.

ಅಪ್ಪು ನಿಧನದ ನಂತರ ಯುವ ರಾಜ್‌ಕುಮಾರ್ ಅವರ ಚೊಚ್ಚಲ ಸಿನಿಮಾದ ಮೇಲೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯುವ ರಾಜ್‌ಕುಮಾರ್ ಅವರಲ್ಲಿ ಪುನೀತ್‌ ಅವರನ್ನ ಅಭಿಮಾನಿಗಳು ಕಾಣುತ್ತಿದ್ದಾರೆ. ಕಳೆದ ವರ್ಷ ಫೋಟೋಶೂಟ್ ಮೂಲಕ ಹೊಂಬಾಳೆ ಸಂಸ್ಥೆ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾ ಬಗ್ಗೆ ಅನೌನ್ಸ್ ಮಾಡಿದ್ದರು. ಇದೀಗ ಯುವ ಮೊದಲ ಚಿತ್ರದ ಬಗ್ಗೆ ಹೊಸ ಸುಳಿವು ಸಿಕ್ಕಿದೆ.

ಯುವರಾಜ್‌ಕುಮಾರ್ ಚೊಚ್ಚಲ ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಆದರೆ ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ. ತಾಜಾ ಸಮಾಚಾರ ಏನಪ್ಪಾ ಅಂದ್ರೆ, ಸದ್ದಿಲ್ಲದೇ ಚಿತ್ರದ ಟೀಸರ್ ಶೂಟಿಂಗ್ ನಡೀತಿದೆ ಎನ್ನಲಾಗ್ತಿದೆ. ಸ್ಪೆಷಲ್ ಟೀಸರ್ ರಿಲೀಸ್ ಮಾಡಿ ಯುವ ಚೊಚ್ಚಲ ಚಿತ್ರಕ್ಕೆ ಚಾಲನೆ ನೀಡುವ ಪ್ರಯತ್ನದಲ್ಲಿದೆಯಂತೆ ಚಿತ್ರತಂಡ.

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಅದೇ ದಿನ ಟೀಸರ್ ಕೂಡ ರಿಲೀಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಹೊಂಬಾಳೆ ಸಂಸ್ಥೆ ಮೂಲಕ ರಾಜಕುಮಾರ, ಯುವರತ್ನ, ರಾಘವೇಂದ್ರ ಸ್ಟೋರ್ಸ್ ಚಿತ್ರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವನ ಚೊಚ್ಚಲ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಣ್​ಬೀರ್ ಕೊಟ್ರು ದುಬಾರಿ ಬೆಲೆಯ ಅರ್ಧ ಬಾಟಲಿ ರಮ್​​; ಮದ್ಯ ಸೇವನೆ ಬಗ್ಗೆ ಬಾಯ್ಬಿಟ್ಟ ಖ್ಯಾತ ನಿರ್ದೇಶಕ

Tue Feb 21 , 2023
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಹೀಗಂತ ಮದ್ಯ ಬಾಟಲಿ ಮೇಲೆ ಅಚ್ಚೊತ್ತಿದ್ದರು ಕುಡಿಯುವವರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಅದರಲ್ಲೂ ಕೆಲವರು ಕದ್ದು ಮುಚ್ಚಿ ಸುರಪಾನ ಮಾಡುತ್ತಾರೆ. ಇನ್ನು ಕೆಲವರು ಬಹಿರಂಗವಾಗಿಯೇ ಮದ್ಯ ಸೇವನೆ ಮಾಡುತ್ತಾರೆ ಮತ್ತು ಡ್ರಿಂಕ್ಸ್​ ಮಾಡುವ ಬಗ್ಗೆ ಹೇಳಿಕೊಳ್ಳುತ್ತಾರೆ. ಅದರಂತೆಯೇ ಇದೀಗ ಬಾಲಿವುಡ್​ನ ಖ್ಯಾತ ನಿರ್ದೇಶಕ ಸೌರಭ್​​ ಶುಕ್ಲಾ ದುಬಾರಿ ಬೆಲೆಯ ರಮ್​ ಕುಡಿದ ಬಗ್ಗೆ ಹೇಳಿಕೊಂಡಿದ್ದಾರೆ. ಅದನ್ನ ಯಾರು ಕೊಟ್ರು ಗೊತ್ತಾ? ಸೌರಭ್​​ ಶುಕ್ಲಾ ಬಾಲಿವುಡ್​ನ ರಣ್​ಬೀರ್​ […]

Advertisement

Wordpress Social Share Plugin powered by Ultimatelysocial