ರಣ್​ಬೀರ್ ಕೊಟ್ರು ದುಬಾರಿ ಬೆಲೆಯ ಅರ್ಧ ಬಾಟಲಿ ರಮ್​​; ಮದ್ಯ ಸೇವನೆ ಬಗ್ಗೆ ಬಾಯ್ಬಿಟ್ಟ ಖ್ಯಾತ ನಿರ್ದೇಶಕ

ದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಹೀಗಂತ ಮದ್ಯ ಬಾಟಲಿ ಮೇಲೆ ಅಚ್ಚೊತ್ತಿದ್ದರು ಕುಡಿಯುವವರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಅದರಲ್ಲೂ ಕೆಲವರು ಕದ್ದು ಮುಚ್ಚಿ ಸುರಪಾನ ಮಾಡುತ್ತಾರೆ. ಇನ್ನು ಕೆಲವರು ಬಹಿರಂಗವಾಗಿಯೇ ಮದ್ಯ ಸೇವನೆ ಮಾಡುತ್ತಾರೆ ಮತ್ತು ಡ್ರಿಂಕ್ಸ್​ ಮಾಡುವ ಬಗ್ಗೆ ಹೇಳಿಕೊಳ್ಳುತ್ತಾರೆ.

ಅದರಂತೆಯೇ ಇದೀಗ ಬಾಲಿವುಡ್​ನ ಖ್ಯಾತ ನಿರ್ದೇಶಕ ಸೌರಭ್​​ ಶುಕ್ಲಾ ದುಬಾರಿ ಬೆಲೆಯ ರಮ್​ ಕುಡಿದ ಬಗ್ಗೆ ಹೇಳಿಕೊಂಡಿದ್ದಾರೆ. ಅದನ್ನ ಯಾರು ಕೊಟ್ರು ಗೊತ್ತಾ?

ಸೌರಭ್​​ ಶುಕ್ಲಾ ಬಾಲಿವುಡ್​ನ ರಣ್​ಬೀರ್​ ಕಪೂರ್​ ಮತ್ತು ಟಾಲಿವುಡ್​ನ ನಾಗಾರ್ಜುನ ಜೊತೆಗೆ ಕಳೆದ ಅದ್ಭುತ ಕ್ಷಣಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇವರಿಬ್ಬರೊಂದಿಗೆ ದುಬಾರಿ ಬೆಲೆಯ ರಮ್​ ಸೇವನೆ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಸೌರಭ್​​ ಮತ್ತು ರಣ್​ಬೀರ್​​ ಇಬ್ಬರು ಬರ್ಫಿ, ಜಗ್ಗಾ ಜಾಸೂಸ್​​ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಕಳೆದ ವರ್ಷ ಯಶ್​ ರಾಜ್​ ನಿರ್ಮಾಣದ ಶಂಶೇರಾ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಆದರೆ ರಣ್​ಬೀರ್​ ಮತ್ತು ನಾಗಾರ್ಜುನ ಮೊದಲ ಬಾರಿಗೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಕಳೆದ ವರ್ಷ ಬಿಡುಗಡೆಗೊಂಡಿದೆ.

ಸಮ್​ಡಿಶ್​​ ಎಪಿಸೋಡ್​ನಲ್ಲಿ, ಸೌರಭ್​​ ಶುಕ್ಲಾ ಮಾತನಾಡಿದ್ದು, ಎಲ್ಲಾ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ. ಜೊತೆಗೆ ಅವರ ಫೇವರೇಟ್​ ಡ್ರಿಂಕ್​ ಬಗ್ಗೆ ಮಾತನಾಡಿದ್ದಾರೆ. ಓಲ್ಡ್​ ಮಾಂಕ್​​ ಮತ್ತು ಕೋಕ್​ ಅನ್ನು ಕುಡಿಯುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಮದ್ಯಪಾನ ಸುಲಭವಾಗಿ ಮತ್ತು ಕಡಿಮೆ ಬೆಲೆಯಲ್ಲಿ ದೊರಕುತ್ತದೆ ಎಂದಿದ್ದಾರೆ.

ಸೌರಬ್​ ಶುಕ್ಲಾ ಅವರು ರಣ್​ಬೀರ್​ ಕಪೂರ್​ನೊಂದಿಗೆ ದುಬಾರಿ ಬೆಲೆ ರಮ್​ ಸೇವಿಸಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಶಂಶೇರಾ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸೇವಿಸುವುದಾಗಿ ಹೇಳಿದ್ದಾರೆ.

ನನಗೆ 30 ಸಾವಿರ ಬೆಲೆಯ ರಮ್​ ಬಾಟಲಿ ನೀಡಿದ ರಣ್​​ಬೀರ್​​ ಅವರು ಅದನ್ನು ಕುಡಿಯುವಂತೆ ಮಾಡಿದರು. ನಾಗಾರ್ಜುನ ಅವರು ರಣ್​ಬೀರ್​ ಅವರನ್ನು ಕುಡಿಯುವಂತೆ ಒತ್ತಾಯಿಸಿದ್ದರು. ಇದು ಫುಲ್​ ಬಾಟಲ್ ಆಗಿದೆ. ರಣ್​ಬೀರ್​ ಅದನ್ನು ನನಗೆ ನೀಡಿದಾಗ ಅದು ಕ್ವಾರ್ಟರ್​ಗೆ ಬಂದಿತ್ತು ಎಂದು ಹೇಳಿದ್ದಾರೆ.

ರಣ್​ಬೀರ್ ನನ್ನೊಂದಿಗೆ ಓಲ್ಡ್​ ಮಾಂಕ್​ ಶೇರ್​ ಮಾಡಿಕೊಂಡಿದ್ದಾರೆ. ನಾನು ಲೇಹ್​ನಲ್ಲಿದ್ದಾಗ ರಣ್​ಬೀರ್​ ನನ್ನ ಬಳಿ ಬಂದು ಸರ್ ಏನು ಕುಡಿತೀರಾ? ಎಂದು ಕೇಳಿದರು. ನಾನು ಓಲ್ಡ್​ ಮಾಂಕ್​ ಎಂದು ಹೇಳಿದೆ. ನಂತರ ದುಬಾರಿ ಬೆಲೆಯ ರಮ್​ ನನಗೆ ನೀಡಿದರು. ನಾವು ಬಹಳಷ್ಟು ಕುಡಿದಿದ್ದೇವೆ ಎಂದು ಅರ್ಧ ಬಾಟಲಿಯನ್ನ ನನಗೆ ಕೊಟ್ಟರು. ಬಳಿಕ ಸರ್​ ಇದು ನಿಮಗೆ ಸಾಕಾಗಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐಶ್ವರ್ಯಾ ರೈ ಮನೆಯಲ್ಲಿ ಅವರೊಬ್ಬರೇ ಸುಂದರಿ ಅಲ್ಲ!

Tue Feb 21 , 2023
ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಯಾರಿಗೆ ಗೊತ್ತಿಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಈ ಬ್ಯೂಟಿಗೆ ಅಭಿಮಾನಿಗಳಿದ್ದಾರೆ. ವಿಶ್ವ ಸುಂದರಿ ಪಟ್ಟ ಗೆದ್ದು ಭಾರತದ ಘನತೆ ಹೆಚ್ಚಿಸಿದ ಈ ಸುಂದರಿ ಸೌಂದರ್ಯಕ್ಕೆ ಮಾರು ಹೋದವರು ಅದೆಷ್ಟೋ ಮಂದಿ. ಇನ್ನೇನು 50ನೇ ವರ್ಷದ ಸನಿಹದಲ್ಲಿ ಇದ್ದರೂ, ಐಶ್ವರ್ಯಾ ಸೌಂದರ್ಯಕ್ಕೆ ಸರಿಸಾಟಿ ಯಾರು ಹೇಳಿ. ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ. ಹಾಗಂತ ಇವರ ಮನೆಯಲ್ಲಿ ಇವರೊಬ್ಬರೇ […]

Advertisement

Wordpress Social Share Plugin powered by Ultimatelysocial