ಭಾರತದ ಮಾರುಕಟ್ಟೆಗೆ ಬಂತು ಮತ್ತೊಂದು ದುಬಾರಿ ಬೈಕ್.!

ಬ್ರಿಟಿಷ್ ಮೋಟರ್ ಸೈಕಲ್ ಕಂಪನಿಯಾಗಿರುವ ಟ್ರಯೆಂಪ್ `ಟೈಗರ್ 1200′ ಎಂಬ ಹೆಸರಿನ ಅಡ್ವೆಂಚರ್ ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೇಸ್ ವೇರಿಯೆಂಟ್ ಬೆಲೆ 19.19 ಲಕ್ಷ ರೂಪಾಯಿ(ಎಕ್ಸ್ ಶೋರೂಂ) ಮತ್ತು ಟಾಪ್ ವೇರಿಯೆಂಟ್ ಬೆಲೆ 21.69 ಲಕ್ಷ ರೂಪಾಯಿಗಳಾಗಿದೆ(ಎಕ್ಸ್ ಶೋರೂಂ).

ಈ ಹೊಸ ಟ್ರಯೆಂಪ್ ಟೈಗರ್ 1200 ಯನ್ನು 2021 ರ ಅಂತ್ಯದ ವೇಳೆಗೆ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.

ಜಿಟಿ ಪ್ರೊ, ರ್ಯಾಲಿ ಪ್ರೊ, ಜಿಟಿ ಎಕ್ಸ್ ಪ್ಲೋರರ್ ಮತ್ತು ರ್ಯಾಲಿ ಎಕ್ಸ್ ಪ್ಲೋರರ್ ಎಂಬ ನಾಲ್ಕು ಶ್ರೇಣಿಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಈ ಬೈಕ್ ಲಭ್ಯವಿದೆ. ಈ ಹೊಸ ಬೈಕ್ ಬಿಎಂಡಬ್ಲ್ಯೂ ಆರ್ 1250 ಜಿಎಸ್, ಹ್ಯಾರ್ಲೆ ಡೇವಿಡ್ಸನ್ ಪಾನ್ ಅಮೆರಿಕಾ ಮತ್ತು ಡುಕಾಟಿ ಮಲ್ಟಿಸ್ಟ್ರಾಡಗಳಿಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಭಾವಿಸಲಾಗಿದೆ.

ಈ ಹೊಸ ಟೈಗರ್ 1200 ಎಡಿವಿಯನ್ನು ಎರಡು ವರ್ಗಗಳನ್ನಾಗಿ ಮಾಡಲಾಗಿದೆ. ಅದರಲ್ಲಿ ಜಿಟಿ ದೂರದ ಪ್ರಯಾಣಕ್ಕೆ ಸೂಕ್ತವಾದ ರೀತಿಯಲ್ಲಿ ತಯಾರಿಸಲಾದ ಬೈಕ್ ಮತ್ತು ರ್ಯಾಲಿ ಹೆಸರಿನ ಬೈಕನ್ನು ಆಫ್ ರೋಡ್ ಪರಿಸ್ಥಿತಿಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಶ್ಮೀರದಲ್ಲಿ ಜೈಶ್-ಎ-ಮೊಹಮ್ಮದ್ ನ ಎಂಟು ಉಗ್ರ ಸಹಚರರ ಬಂಧನ

Wed May 25 , 2022
ಶ್ರೀನಗರ: ದಕ್ಷಿಣ ಕಾಶ್ಮೀರದ ಅವಂತಿಪೋರಾ ಪ್ರದೇಶದಲ್ಲಿ ಮಂಗಳವಾರ (ಮೇ 24) ಜೈಶ್-ಎ-ಮೊಹಮ್ಮದ್ ನ ಎಂಟು ಉಗ್ರ ಸಹಚರರನ್ನು ಬಂಧಿಸಿದ್ದಾರೆ. ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಹಲವಾರು ಶಂಕಿತರನ್ನು ಬಂಧಿಸಲಾಗಿ, ಹೆಚ್ಚಿನ ಸುಳಿವುಗಳನ್ನು ಗಮನಿಸಿದ ಬಳಿಕ ಆವಂತಿಪೋರಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಘಟಕವನ್ನು ಭೇದಿಸಲು ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಸಾಧ್ಯವಾಯಿತು. ಪೊಲೀಸ್ ವಕ್ತಾರರ ಮಾಹಿತಿ ಪ್ರಕಾರ ಬಂಧಿತರು ಮುಷ್ತಾಕ್ ಅಹ್ಮದ್ ದಾರ್, ಇಶ್ಫಾಕ್ ಅಹ್ಮದ್ ದಾರ್, ಮಂಜೂರ್ ಅಹ್ಮದ್ ದಾರ್ […]

Advertisement

Wordpress Social Share Plugin powered by Ultimatelysocial