ಲೋಹದ ಹಕ್ಕಿಗಳ ಆರ್ಭಟ.

 

ನಭೋಮಂಡಲದಲ್ಲಿ ಲೋಹದ ಹಕ್ಕಿಗಳ ಚಿತ್ತಾಕರ್ಷಕ ಪ್ರದರ್ಶನ ಏರೋ ಇಂಡಿಯಾ-೨೦೨೩ ವೈಮಾನಿಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ನಾಳೆಯಿಂದ ಫೆ. ೧೭ರ ವರೆಗೆ ಯಲಹಂಕದ ವಾಯುನೆಲೆಯ ಬಾನಂಗಳದಲ್ಲಿ ಲೋಹದ ಹಕ್ಕಿಗಳದ್ದೇ ಕಾರುಬಾರು.ನಾಳೆಯಿಂದ ವಾಯು ಪಡೆಯ ಹೆಮ್ಮೆಯ ಸೂರ್ಯ ಕಿರಣ್, ಎಂಐ-೧೭, ತೇಜಸ್ ಯುದ್ಧ ವಿಮಾನ, ಹಾಕ್, ಸುಖೋಯ್, ಮಿಗ್, ಜಾಗ್ವಾರ್, ರೆಫೆಲ್ ವಿಮಾನಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ. ಇದರ ಜತೆಗೆ ಸೂಪರ್ ಸಾನಿಕ್ ಜೆಟ್ ವಿಮಾನ ಸಹ ನೀಲಾಕಾಶದಲ್ಲಿ ಪ್ರದರ್ಶನ ನೀಡಲಿದೆ.೨ನೇ ಮಹಾಯುದ್ಧದಲ್ಲಿ ಬಳಕೆಯಾದ ೭೪ ವರ್ಷ ಹಳೆಯದಾದ ಡಕೋಟಾ ಯುದ್ಧ ವಿಮಾನದ ಹಾರಾಟವೂ ಪ್ರದರ್ಶನದಲ್ಲಿ ಇರಲಿದೆ.ರಕ್ಷಣಾ ಇಲಾಖೆ ಪ್ರತಿ ೨ ವರ್ಷಕ್ಕೊಮ್ಮೆ ಆಯೋಜಿಸುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಆಯೋಜಿಸುತ್ತಿದ್ದು, ಕೊರೊನಾ ಕಾರಣದಿಂದ ಕಳೆದ ವೈಮಾನಿಕ ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಅವಕಾಶವಿರಲಿಲ್ಲ. ಈ ಬಾರಿ ಫೆ. ೧೬ ಮತ್ತು ೧೭ ರಂದು ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಈ ವೈಮಾನಿಕ ಪ್ರದರ್ಶನ ಜಗತ್ತಿನ ಹಲವು ದೇಶಗಳು ಭಾಗಿಯಾಗಲಿದ್ದು, ದೇಶ-ವಿದೇಶಗಳ ಹಲವು ವಿಮಾನ ತಯಾರಿಕಾ ಕಂಪನಿಗಳು ಪಾಲ್ಗೊಳ್ಳಲಿವೆ. ಈ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ರಕ್ಷಣಾ ಕ್ಷೇತ್ರದ ವಸ್ತುಪ್ರದರ್ಶನ ಆಯೋಜಿಸಲಾಗಿದ್ದು, ಈ ವಸ್ತು ಪ್ರದರ್ಶನ ಮಾರಾಟದಲ್ಲಿ ಜಗತ್ತಿನ ನಾನಾ ದೇಶಗಳ ಕಂಪನಿಗಳು ಪಾಲ್ಗೊಳ್ಳಲಿವೆ.ನಾಳೆ ಬೆಳಿಗ್ಗೆ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸಿದ ನಂತರ ಲೋಹದ ಹಕ್ಕಿಗಳ ಆಕರ್ಷಕ ಪ್ರದರ್ಶನ ನಡೆಯಲಿದೆ.ಜತೆಗೆ ಫೆ. ೧೭ರವರೆಗೂ ನಿತ್ಯವೂ ವಿಚಾರ ಸಂಕಿರಣ, ವಿಮಾನ ಖರೀದಿ, ಮಾರಾಟ, ಒಪ್ಪಂದಗಳ ಸಭೆ-ಸಮಾಲೋಚನೆಗಳು ಈ ವೈಮಾನಿಕ ಪ್ರದರ್ಶನದಲ್ಲಿ ನಡೆಯಲಿವೆ.
ಈ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾದವರಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನೂ ಮಾಡಲಾಗಿದ್ದು, ಯಲಹಂಕ ವಾಯುನೆಲೆಯಲ್ಲಿ ಫುಡ್‌ಕೋರ್ಟ್‌ಗಳನ್ನು ಆಋಂಭಿಸಲಾಗಿದೆ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯನ್ನೂ ಮಾಡಲಾಗಿದೆ.ವೈಮಾನಿಕ ಪ್ರದರ್ಶನಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪೊಲೀಸರ ಜತೆಗೆ ಕೈಗಾರಿಕಾ ಭದ್ರತಾ ಪಡೆ ಹಾಗೂ ವಾಯು ಸೇನೆಯ ರಕ್ಷಣಾ ಸಿಬ್ಬಂದಿಯು ಭದ್ರತಾ ಕಾರ್ಯಗಳನ್ನು ನೋಡಿಕೊಳ್ಳುವರು.
ತಾಲೀಮು ನೋಡಲು ಮುಗಿ ಬಿದ್ದ ಜನನಾಳಿನ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ನಿನ್ನೆ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ತಾಲೀಮು ನಡೆದಿದ್ದು, ಈ ತಾಲೀಮನ್ನು ನೋಡಲು ಜನ ಮುಗಿ ಬಿದ್ದರು.
ನಿನ್ನೆ ಸೂರ್ಯ ಕಿರಣ್, ಸಾರಂಗ್, ತೇಜಸ್ ಯುದ್ಧ ವಿಮಾನ, ಸುಖೋಯ್ ಸೇರಿದಂತೆ ಹಲವು ಯುದ್ಧ ವಿಮಾನಗಳು, ಯುದ್ಧ ಹೆಲಿಕಾಪ್ಟರ್‌ಗಳು ಬಾನಿನಲ್ಲಿ ತಾಲೀಮಿನ ಕಸರತ್ತು ನಡೆಸಿದವು. ನೀಲಾಕಾಶದಲ್ಲಿ ನಡೆದ ಈ ತಾಲೀಮು ನೆರೆದಿದ್ದವರಲ್ಲಿ ರೋಮಾಂಚನ ಮೂಡಿಸಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಚಾರ ಉಲ್ಲಂಘನೆ 85.83 ಕೋಟಿ ದಾಟಿದ ದಂಡ ಸಂಗ್ರಹ.

Sun Feb 12 , 2023
ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ. 50 ರಿಯಾಯಿತಿ ಲಾಭ ಪಡೆದಿರುವ ವಾಹನಗಳ ಮಾಲೀಕರು ಕಳೆದ 8 ದಿನಗಳಿಂದ 85.83 ಕೋಟಿಗೂ ಹೆಚ್ಚಿನ ದಂಡ ಪಾವತಿಸಿದ್ದು ಇಂದು ದಾಖಲೆ ಪ್ರಮಾಣದ 17.61ಕೋಟಿ ದಂಡ ಸಂಗ್ರಹ ಮಾಡಲಾಗಿದೆ.ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ಸಂಬಂಧ ಇಲ್ಲಿಯವರೆಗೆ 85.83 ಕೋಟಿಗೂ ಹೆಚ್ಚು ದಂಡ ಸಂಗ್ರಹಗೊಂಡಿದೆ ಒಟ್ಟಾರೆ 31,11,546 ಪ್ರಕರಣಗಳು ಇತ್ಯರ್ಥಗೊಂಡು 85.83,07,541 ರೂಗಳ ದಂಡ ಸಂಗ್ರಹವಾಗಿದೆ ‌ಕಳೆದ ಫೆ.8ರಂದು 9,06,94,800 ರೂ ನಿನ್ನೆ […]

Advertisement

Wordpress Social Share Plugin powered by Ultimatelysocial