ಬರ್ತ್‌ಡೇಗೆ ಬಂದ ಮಾಜಿ ಪ್ರೇಯಸಿ ಸಂಗೀತಾ ಹಣೆಗೆ ಸಿಹಿಮುತ್ತು ನೀಡಿದ ಬಾಲಿವುಡ್‌ ಬ್ಯಾಚುಲರ್‌

 

57ನೇ ವಸಂತಕ್ಕೆ ಕಾಲಿಟ್ಟಿರುವ ಸಲ್ಮಾನ್‌ ಖಾನ್‌ ಹುಟ್ಟುಹಬ್ಬವನ್ನು ಈ ಬಾರಿ ಅವರ ಸಹೋದರಿ ಅರ್ಪಿತಾ ಖಾನ್  ನಿವಾಸದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಶಾರುಖ್ ಖಾನ್  ಜಾನ್ವಿ ಕಪೂರ್, ಪೂಜಾ ಹೆಗ್ಡೆ, ಟಬು, ಸುನೀಲ್ ಶೆಟ್ಟಿ, ರಿತೇಶ್, ಜೆನಿಲಿಯಾ, ಸೋನಾಕ್ಷಿ ಸಿನ್ಹಾ, ಕಾರ್ತಿಕ್ ಆರ್ಯನ್ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.ಸಲ್ಮಾನ್‌ ಖಾನ್‌ ಬಾಲಿವುಡ್‌ನಲ್ಲಿ ಮೋಸ್ಟ್‌ ಎಲಿಜಬಲ್‌ ಬ್ಯಾಚುಲರ್‌ ಎಂದೇ ಹೆಸರಾಗಿದ್ದಾರೆ. ತಮ್ಮ ಮದುವೆ ವಿಚಾರಕ್ಕೆ ಸಲ್ಮಾನ್‌ ಹಲವಾರು ಬಾರಿ ಟ್ರೋಲ್‌ ಆಗಿದ್ದಾರೆ. ನಿಮಗಿಂತ ಕಿರಿಯ, ನಿಮ್ಮ ಸಮಕಾಲೀನ ನಟರಿಗೆ ಈಗಾಗಲೇ ಮದುವೆಯಾಗಿ ದೊಡ್ಡ ಮಕ್ಕಳಿದ್ದಾರೆ ಆದರೂ ನೀವ್ಯಾಕೆ ಇನ್ನೂ ಮದುವೆಯಾಗಿಲ್ಲ ಎಂದು ಫ್ಯಾನ್ಸ್‌ ಕೂಡಾ ಕೇಳುತ್ತಲೇ ಇದ್ದಾರೆ. ಈ ನಡುವೆ ಸಲ್ಮಾನ್‌, ತಮ್ಮ ಮಾಜಿ ಗೆಳತಿ ಸಂಗೀತಾಗೆ ಮುತ್ತು ನೀಡಿ ಸುದ್ದಿಯಾಗಿದ್ದಾರೆ.ಎರಡು ದಿನಗಳ ಹಿಂದಷ್ಟೇ ಸಲ್ಮಾನ್‌ ಖಾನ್‌ ತಮ್ಮ 57ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಲ್ಲು, ಪ್ರತಿ ಬಾರಿಯಂತೆ ಈ ಬಾರಿ ಕೂಡಾ ತಮ್ಮ ಆತ್ಮೀಯರನ್ನು ಬರ್ತ್‌ಡೇ ಪಾರ್ಟಿಗೆ ಆಹ್ವಾನಿಸಿದ್ದರು. ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ಈ ಪಾರ್ಟಿಗೆ ಆಗಮಿಸಿದ್ದರು. ಅದರಲ್ಲಿ ಸಂಗೀತ ಬಿಜಲಾನಿ ಕೂಡಾ ಒಬ್ಬರು. ಸಲ್ಮಾನ್ ಖಾನ್ 80ರ ದಶಕದಲ್ಲಿ ಸಂಗೀತಾ ಬಿಜಲಾನಿ ಅವರನ್ನು ಪ್ರೀತಿಸುತ್ತಿದ್ದರು. ಸುಮಾರು 10 ವರ್ಷಗಳ ಕಾಲ್‌ ರಿಲೇಷನ್‍ಶಿಪ್‌ನಲ್ಲಿದ್ದ ಈ ಜೋಡಿ ನಂತರ ಕಾರಣಾಂತರಳಿಂದ ದೂರಾದರು. ನಂತರ ಸಂಗೀತಾ ಕ್ರಿಕೆಟಿಗ ಮೊಹ್ಮದ್‌ ಅಜರುದ್ದೀನ್‌ ಅವರನ್ನು ಮದುವೆಯಾದರು. ಆದರೆ ಈ ಜೋಡಿ 2010ರಲ್ಲಿ ದೂರಾಗಿದ್ದರು.ಈ ಬಾರಿ ಸಲ್ಮಾನ್‌ ಖಾನ್‌, ತಮ್ಮ ಹುಟ್ಟುಹಬ್ಬಕ್ಕೆ ಮಾಜಿ ಪ್ರೇಯಸಿಗೂ ಆಹ್ವಾನ ನೀಡಿದ್ದರು. ಸಲ್ಲು ಆಹ್ವಾನವನ್ನು ಸ್ವೀಕರಿಸಿ ಪಾರ್ಟಿಗೆ ಬಂದಿದ್ದ ಸಂಗೀತಾ ಸಲ್ಲುಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ನೇರಳೆ ಬಣ್ಣದ ಹೊಳೆಯುವ ಔಟ್‌ಫಿಟ್‌ ಧರಿಸಿ ಬರ್ತ್‌ಡೇ ಪಾರ್ಟಿಗೆ ಬಂದಿದ್ದ ಸಂಗೀತಾ ಬಿಜಲಾನಿ ಬಹಳ ಸುಂದರವಾಗಿ ಕಾಣುತ್ತಿದ್ದರು. ಪಾರ್ಟಿ ನಂತರ ಮನೆಗೆ ಹೊರಟು ನಿಂತ ಮಾಜಿ ಪ್ರೇಯಸಿಗೆ ಸಲ್ಮಾನ್‌ ಖಾನ್‌, ಹಣೆಗೆ ಮುತ್ತು ನೀಡುವ ಮೂಲಕ ಬಿಟ್ಟುಕೊಟ್ಟಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಹಗ್‌ ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಬಗ್ಗೆ ನೆಟಿಜನ್ಸ್‌, ನಾನಾ ಕಮೆಂಟ್‌ ಮಾಡುತ್ತಿದ್ದಾರೆ. ಸಲ್ಮಾನ್‌ ಖಾನ್‌ ಇನ್ನೂ ಮದುವೆಯಾಗಿಲ್ಲ, ಸಂಗೀತ ಕೂಡಾ ಡೈವೋರ್ಸಿ, ಮೇಲಾಗಿ ಇಬ್ಬರೂ 10 ವರ್ಷಗಳ ಕಾಲ ಪ್ರೀತಿಯಲ್ಲಿದ್ದಿರಿ, ಈಗಲಾದರೂ ನೀವಿಬ್ಬರೂ ಒಂದಾಗಿ, ಆದಷ್ಟು ಬೇಗ ಮದುವೆ ಮಾಡಿಕೊಳ್ಳಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ರಾಜ್‌ ಕುಟುಂಬದ ಕುಡಿಗೆ ಜೋಡಿಯಾಗಲಿದ್ದಾಳೆ ಮಲಯಾಳಿ ಬ್ಯೂಟಿ

Wed Dec 28 , 2022
ಸಂತೋಷ್‌ ಆನಂದ್‌ ರಾಮ್‌ ಮತ್ತು ಯುವ ರಾಜ್‌ಕುಮಾರ್‌ ಕಾಂಬಿನೇಷನ್‌ನಲ್ಲಿ ಘೋಷಣೆ ಆಗಿದ್ದ ಸಿನಿಮಾಕ್ಕೆ ಇದೀಗ ನಾಯಕಿ ಆಯ್ಕೆ ಪ್ರಕ್ರಿಯೆ ಮುಗಿದಿದೆಯಂತೆ. ಕನ್ನಡದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಸದ್ಯ ಹತ್ತು ಹಲವು ಸಿನಿಮಾಗಳನ್ನು ನಿರ್ಮಿಸುತ್ತಿದೆ. ಅದರಲ್ಲಿ ಕೆಲವು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದರೆ, ಇನ್ನು ಕೆಲವು ಚಿತ್ರೀಕರಣದ ಹಂತದಲ್ಲಿವೆ. ಈ ನಡುವೆ ಹೊಸ ಸಿನಿಮಾ ಘೋಷಣೆಗಳೂ ಆಗುತ್ತಿವೆ. ಇತ್ತ ಕಲಾವಿದರ ಆಯ್ಕೆ ಪ್ರಕ್ರಿಯೆಯೂ ತೆರೆಮರೆಯಲ್ಲಿಯೇ ನಡೆಯುತ್ತಿದೆ. ಹೀಗಿರುವಾಗಲೇ ಹೊಂಬಾಳೆ […]

Advertisement

Wordpress Social Share Plugin powered by Ultimatelysocial