ಜೆಡಿಎಸ್‌, ಕಾಂಗ್ರೆಸ್‌ ಭದ್ರಕೋಟೆ ಮೇಲೆ ಬಿಜೆಪಿ ಕಣ್ಣು ನೆಟ್ಟಿದೆ.

ಜೆಡಿಎಸ್‌, ಕಾಂಗ್ರೆಸ್‌ ಭದ್ರಕೋಟೆ ಮೇಲೆ ಬಿಜೆಪಿ ಕಣ್ಣು ನೆಟ್ಟಿದೆ. ಫೆಬ್ರವರಿ 20ಕ್ಕೆ ಮಂಡ್ಯದಲ್ಲಿ ಯುವ ಮೋರ್ಚಾ ಸಮಾವೇಶಕ್ಕೆ ಸಿದ್ಧತೆ ಆರಂಭವಾಗಿದೆ.. ಹಳೇ ಮೈಸೂರು ಭಾಗವನ್ನೇ ಕೇಂದ್ರೀಕರಿಸಿ ಈ ದಾಳ ಉರುಳಿಸಲಾಗಿದೆ.. ಈ ಮೋರ್ಚಾಗಳ ಸಮಾವೇಶಕ್ಕೆ ವಿಜಯೇಂದ್ರ ಇನ್​ಚಾರ್ಜ್​ ಆಗಿದ್ದಾರೆ.

ಕರ್ನಾಟಕ ಕುರುಕ್ಷೇತ್ರ ಅಖಾಡದಲ್ಲಿ ಎಲ್ಲಾ ಪಕ್ಷಗಳು ತಮ್ಮದೇ ಆದ ಅಸ್ತ್ರಗಳ ಮೂಲಕ ಮತ ರಣಬೇಟೆಗೆ ಇಳಿದಿವೆ. ಕರ್ನಾಟಕ ಗೆಲ್ಲಲು ಎಲ್ಲಾ ರೀತಿಯ ತಂತ್ರ-ಪ್ರತಿತಂತ್ರ ರಣತಂತ್ರಗಳನ್ನ ಬಿಜೆಪಿ ಹೊಸೆಯುತ್ತಿದೆ.. ದಕ್ಷಿಣದ ಹೆಬ್ಬಾಗಿಲು ಉಳಿಸಿಕೊಳ್ಳಲು ಕೇಸರಿ ಪಡೆ ತನ್ನ ಶಸ್ತ್ರಗಾರದಲ್ಲಿದ್ದ ಈ ಅಸ್ತ್ರವನ್ನ ಅಂತಿಮವಾಗಿ ಬಳಕೆಗೆ ಬಿಟ್ಟಿದೆ. ಅದುವೇ ರಾಜ್ಯ ಕೇಸರಿ ಸೇನೆ ಭೀಷ್ಮ ನಾಯಕ ಬಿಎಸ್​​ವೈ ಪುತ್ರ ವಿಜಯೇಂದ್ರ.

ಹೈವೋಲ್ಟೇಜ್ ವಾರ್​ಗೆ ಅಬ್ಬರಿಸಲಿದ್ದಾರೆ ಶಿಕಾರಿವೀರನ ಪುತ್ರ
ಹೌದು, ಐದು ದಶಕಗಳ ಕಾಲ ರಾಜ್ಯದಲ್ಲಿ ಪಕ್ಷ ಕಟ್ಟಿ, ನಾಲ್ಕು ಬಾರಿ ಸಿಎಂ ಸಿಂಹಾಸನಕ್ಕೆ ಏರಿದ ಬಿಎಸ್​​ವೈ ಪಾಲಿಗೆ ಇದು ಮಹಾ ಸಂಗ್ರಾಮ.. ರಾಜ್ಯದಲ್ಲಿ ಮತ್ತೊಮ್ಮೆ ಕೇಸರಿ ಪತಾಕೆ ಹಾರಿಸಬೇಕು ಅಂತ ಡೆಲ್ಲಿಯಿಂದ ಅಪ್ಪಣೆ ಆಗಿದೆ.. ವಿಧಾನಸಭಾ ಚುನಾವಣೆಗೆ ಒಂದೊಂದೇ ಅಸ್ತ್ರಗಳನ್ನ ಪ್ರಯೋಗಿಸಲು ಬಿಜೆಪಿ ರೆಡಿಯಾಗ್ತಿದೆ.. ಇದೀಗ ಕೇಸರಿ ಪಡೆ ಬತ್ತಳಿಕೆಯಿಂದ ಇನ್ನೊಂದ್ಕಡೆ ಕೇಸರಿ ಸೇನೆಯಿಂದ ವಿಜಯಾಸ್ತ್ರ ಪ್ರಯೋಗ ಆಗಿದೆ.

ಈವರೆಗೆ ಕೇಸರಿ ಪಕ್ಷದಲ್ಲಿ ಸೈಡ್​ಲೈನ್​ ಆಗಿದ್ದ ಬಿಜೆಪಿ ಯುವನಾಯಕ ವಿಜಯೇಂದ್ರ, ಎದುರಾಳಿ ಪಡೆಯಿಂದ ತೂರಿಬರುವ ಅಸ್ತ್ರಗಳಿಗೆ ಸೈಡ್​​ ಹೊಡೆಯಲಿದ್ದಾರೆ.. ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಮಲ್ಲಯುದ್ಧಕ್ಕೆ ಸಜ್ಜಾಗಿರುವ ವಿಜಯೇಂದ್ರ, ದಕ್ಷಿಣದಿಂದಲೇ ದಂಡಯಾತ್ರೆಗೆ ಅಣಿ ಆಗ್ತಿದ್ದಾರೆ.. ಅದರಲ್ಲೂ ತಂದೆ ಯಡಿಯೂರಪ್ಪ ಹುಟ್ಟೂರು ಮಂಡ್ಯದಿಂದ ಎಲೆಕ್ಷನ್​ ತಂತ್ರಗಳ ಮದ್ದಾನೆ ಮಣಿಸಲಿದ್ದಾರೆ ವಿಜಯೇಂದ್ರ.

ಎಲ್ಲಾ ಮೋರ್ಚಾಗಳ ಸಮಾವೇಶಕ್ಕೆ ವಿಜಯೇಂದ್ರ ಇನ್​ಚಾರ್ಜ್
ಡಬಲ್​ ಎಂಜಿನ್​ ಸರ್ಕಾರದ ಕಾರ್ಯಕ್ರಮ, ಯೋಜನೆಗಳನ್ನ ಮನೆ ಮನೆಗೆ ತಲುಪಿಸಬೇಕು ಅನ್ನೋ ಟಾಸ್ಕ್​​ ಪಡೆದಿರುವ ವಿಜಯೇಂದ್ರಗೆ ದೊಡ್ಡ ಜವಾಬ್ದಾರಿಯೊಂದನ್ನ ಹೊರೆಸಿದೆ ಬಿಜೆಪಿ ಹೈಕಮಾಂಡ್​.. ಅಷ್ಟಕ್ಕೂ ಬಿಜೆಪಿ ಹೈಕಮಾಂಡ್​​ ಒಪ್ಪಿಸಿದ ಹೊಣೆ ಏನು? ವಿಜಯೇಂದ್ರ ಮುಂದಿರುವ ಸವಾಲುಗಳೇನು?

ವಿಜಯೇಂದ್ರ ಹಾರಿಸ್ತಾರಾ ಪತಾಕೆ?
ಬಿಜೆಪಿಯ ಎಲ್ಲಾ ಮೋರ್ಚಾಗಳಿಗೆ ರಣೋತ್ಸಾಹ ತುಂಬುವ ಹೊಣೆ ವಿಜಯೇಂದ್ರರ ಹೆಗಲೇರಿದೆ.. ಈ ನಿಟ್ಟಿನಲ್ಲಿ ಎಸ್.ಸಿ ಎಸ್.ಟಿ, ಮಹಿಳಾ, ರೈತ, ಯುವ, ಹಿಂದುಳಿದ ಮೋರ್ಚಾದ ಸಮಾವೇಶಕ್ಕೆ ಸಿದ್ಧತೆ ನಡೆದಿದೆ.. ಈ ಎಲ್ಲಾ ಸಮಾವೇಶಗಳಿಗೂ ವಿಜಯೇಂದ್ರ ಇನ್​​ಚಾರ್ಜ್​​​ ಆಗಿ ನೇಮಕ ಆಗಿದ್ದಾರೆ.. ಎಲ್ಲಾ ಮೋರ್ಚಾಗಳು ಬಲಗೊಳಿಸಬೇಕು.. ಎಲ್ಲಾ ಮೋರ್ಚಾಗಳು ಎಲೆಕ್ಷನ್​​​ನಲ್ಲಿ ಪಾಲ್ಗೊಳ್ಳಬೇಕು ಅನ್ನೋ ಟಾಸ್ಕ್​​​ಅನ್ನ ವಿಜಯೇಂದ್ರ ಪಡೆದಿದ್ದಾರೆ.. ಫೆಬ್ರವರಿ 20ರಂದು ಮಂಡ್ಯ ಜಿಲ್ಲೆಯಲ್ಲಿ ಯುವ ಮೋರ್ಚಾ ಸಮಾವೇಶ ನಡೆಯಲಿದೆ.. ಅಷ್ಟೇ ಅಲ್ಲ ಮಾರ್ಚ್​​ 15ರ ಒಳಗೆ ಎಲ್ಲಾ ಮೋರ್ಚಾಗಳ ಸಮಾವೇಶ ನಡೆಯಲಿವೆ.. ಈ ಸಮಾವೇಶಗಳ ಮೂಲಕ 2 ಕೋಟಿ‌ ಮತದಾರರನ್ನ ತಲುಪುವ ಉದ್ದೇಶ ಬಿಜೆಪಿ ಹೊಂದಿದೆ.

ಒಟ್ಟಾರೆ, ಈ ಮೋರ್ಚಾಗಳ ಉಸ್ತುವಾರಿಯಿಂದ ವಿಜಯೇಂದ್ರಗೆ ಸವಾಲು ಹೆಚ್ಚಾಗಿದೆ.. ಶಿರಾ ಕೆ.ಆರ್ ಪೇಟೆ ರೀತಿ ಜಾದೂ ಮಾಡುವ ಜವಾಬ್ದಾರಿ ಇದೆ.. ಹಾಗಂತ ವಿಜಯೇಂದ್ರಗೆ ಎಲೆಕ್ಷನ್​​ ಇನ್​ಚಾರ್ಜ್​ ನೀಡಿಲ್ಲ.. ವಿವಿಧ ಮೋರ್ಚಾಗಳಲ್ಲಿರುವ ಕಾರ್ಯಕರ್ತರನ್ನ ಚುನಾವಣೆಗೆ ಅಣಿಗೊಳಿಸುವ ಹೊಣೆ ನೀಡಲಾಗಿದೆ.. ಮುನಿಸಿಕೊಂಡಿದ್ದ ಬಿಎಸ್​ವೈರ ಅಸಮಾಧಾನ ಶಮನಗೊಳಿಸುವ ಕೆಲಸಕ್ಕೆ ಬಿಜೆಪಿ ಈ ಮೂಲಕ ಕೈಹಾಕಿದೆ ಅನ್ನೋ ಮಾತು ಚರ್ಚೆ ಆಗ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಾಂಧೀಜಿ ಕೊಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.

Thu Feb 16 , 2023
ಬೆಂಗಳೂರು: ಗಾಂಧೀಜಿ ಕೊಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಗೋಡ್ಸೆ ವಂಶಸ್ಥರು ಅಶ್ವತ್ಥ ನಾರಾಯಣ ಎಂದು ಪ್ರತಿಪಕ್ಷದ ಉಪನಾಯಕ ಯು. ಟಿ ಖಾದರ್ ವಾಗ್ದಾಳಿ ನಡೆಸಿದರು. ಟಿಪ್ಪು ರೀತಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು ಎಂಬ ಸಚಿವ ಅಶ್ವತ್ಥ ನಾರಾಯಣ ಹೇಳಿಕೆಗೆ ವಿಧಾನಸೌಧದಲ್ಲಿ ಗುರುವಾರ ತಿರುಗೇಟು ನೀಡಿದರು. ನೇರಾ ನೇರವಾಗಿ ಹೋರಾಟ ಮಾಡುವ ಹಾಗೂ ಚರ್ಚೆ ಮಾಡುವ ಧೈರ್ಯ ಇವರಿಗೆ ಇಲ್ಲ. ಅಶ್ವತ್ಥ ನಾರಾಯಣ, ಬಿಜೆಪಿಯದ್ದು ಮೀರ್ ಸಾದಿಕ್ […]

Advertisement

Wordpress Social Share Plugin powered by Ultimatelysocial