ಗಾಂಧೀಜಿ ಕೊಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.

ಬೆಂಗಳೂರು: ಗಾಂಧೀಜಿ ಕೊಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಗೋಡ್ಸೆ ವಂಶಸ್ಥರು ಅಶ್ವತ್ಥ ನಾರಾಯಣ ಎಂದು ಪ್ರತಿಪಕ್ಷದ ಉಪನಾಯಕ ಯು. ಟಿ ಖಾದರ್ ವಾಗ್ದಾಳಿ ನಡೆಸಿದರು.

ಟಿಪ್ಪು ರೀತಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು ಎಂಬ ಸಚಿವ ಅಶ್ವತ್ಥ ನಾರಾಯಣ ಹೇಳಿಕೆಗೆ ವಿಧಾನಸೌಧದಲ್ಲಿ ಗುರುವಾರ ತಿರುಗೇಟು ನೀಡಿದರು.

ನೇರಾ ನೇರವಾಗಿ ಹೋರಾಟ ಮಾಡುವ ಹಾಗೂ ಚರ್ಚೆ ಮಾಡುವ ಧೈರ್ಯ ಇವರಿಗೆ ಇಲ್ಲ. ಅಶ್ವತ್ಥ ನಾರಾಯಣ, ಬಿಜೆಪಿಯದ್ದು ಮೀರ್ ಸಾದಿಕ್ ವಂಶ. ಇವರು ಹೊಡೆದುಹಾಕಲು ನೋಡಿದರೆ ಕಾಂಗ್ರೆಸ್ ನಾಯಕರನ್ನು ಜನರೇ ಮೂರನೇ ಮಹಡಿಗೆ ತಂದು ಕೂರಿಸ್ತಾರೆ. ರಾಜ್ಯದ ಜನರೇ ಇವರಿಗೆ ಉತ್ತರವನ್ನೂ ಕೊಡ್ತಾರೆ ಎಂದರು.

ಇದೇ ವಿಚಾರವಾಗಿ ಕೆಪಿಪಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ರಣದೀಪ್ ಸಿಂಗ್ ಸುರ್ಜೆವಾಲ, ಬಿಜೆಪಿಯವರು ಮಹಾತ್ಮ ಗಾಂಧಿಯನ್ನೇ ಕೊಂದವರು. ಹಿಂಸೆ ಅನ್ನೋದು ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರನ್ನು ಬಿಟ್ಟಿಲ್ಲ. ಬಿಜೆಪಿ ಅಶಾಂತಿ ಹಾಗೂ ಹಿಂಸೆಯನ್ನು ಮುಂದುವರಿಸುವ ಧೋರಣೆಯನ್ನು ಹೊಂದಿದೆ ಎಂದು ಟೀಕಿಸಿದರು.

ಅಶ್ವಥ್ ನಾರಾಯಣ್ ನಳಿನ್ ಕುಮಾರ್ ಕಟೀಲು ಹಾಗೂ ಅವರ ಕಂಪನಿಗೆ ಆತಂಕ ಇದೆ. ರಾಜ್ಯದಲ್ಲಿ ಬಿಜೆಪಿ ಎದುರಿಸುತ್ತಿರುವ ಆತಂಕ ಈ ರೀತಿ ಅವರ ಬಾಯಲ್ಲಿ ಹೊರಬಂದಿದೆ. ನಾಯಕರ ಮಾತುಗಳಲ್ಲಿ ಆತಂಕ ಮೂಡಿಬರುತ್ತಿದೆ. ಮುಂದಿನ 50 ರಿಂದ 60 ದಿನಗಳಲ್ಲಿ ಎದುರಾಗುವ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಆತಂಕ ಇದೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಸರ್ಕಾರ ಜನರಿಗೆ ಶೇ.90ರ ರಷ್ಟು ವಚನ ವಂಚನೆ ಮಾಡಿದೆ.

Thu Feb 16 , 2023
ಮೈಸೂರು: ಬಿಜೆಪಿ ಸರ್ಕಾರ ಜನರಿಗೆ ಶೇ.90ರ ರಷ್ಟು ವಚನ ವಂಚನೆ ಮಾಡಿದೆ. ಜನರಿಗೆ ಕೊಟ್ಟ ಯಾವ ಕಾರ್ಯಕ್ರಮಗಳೂ ಜಾರಿಯಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದರು. ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಬೆಳಗ್ಗೆ ಬಜೆಟ್ ಘೋಷಣೆ ಮಾಡ್ತಾ ಇದ್ದಾರೆ. ಇದು ಬಿಜೆಪಿ ಕೊನೆಯ ಬಜೆಟ್. ಹಿಂದಿನ ಬಜೆಟ್ ಕೂಡ ಬರಿ ಘೋಷಣೆ, ಭರವಸೆಯ ಬಜೆಟ್ ಆಗಿತ್ತು. ನಾಳೆ ಮಂಡನೆ ಮಾಡುವ ಬಜೆಟ್ ಕೇವಲ ಭಾಷಣಕ್ಕಷ್ಟೇ […]

Related posts

Advertisement

Wordpress Social Share Plugin powered by Ultimatelysocial