ಸಿನಿಮಾ ಪ್ರಚಾರದ ವೇಳೆ ಗಿನ್ನಿಸ್ ದಾಖಲೆ ಬರೆದ ಬಾಲಿವುಡ್ ನಟ.!

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ‘ಸೆಲ್ಫಿ’ ಪ್ರಚಾರ ಕಾರ್ಯದ ಸಂದರ್ಭದಲ್ಲಿಯೇ ಗಿನ್ನಿಸ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮೂರು ನಿಮಿಷದ ಅವಧಿಯಲ್ಲಿ 184 ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.ಈ ಮೂಲಕ ಅಕ್ಷಯ್ ಕುಮಾರ್ ಹೊಸ ಗಿನ್ನಿಸ್ ದಾಖಲೆ ಬರೆದಿದ್ದು, ಈ ಮೊದಲು ಅಮೆರಿಕದ ಜೇಮ್ಸ್ ಸ್ಮಿತ್ ಎಂಬವರು ಮೂರು ನಿಮಿಷದಲ್ಲಿ 168 ಸೆಲ್ಫಿ ಹಾಗೂ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಇದಕ್ಕೂ ಮೊದಲು ಮೂರು ನಿಮಿಷದ ಅವಧಿಯಲ್ಲಿ 105 ಸೆಲ್ಫಿ ತೆಗೆದುಕೊಂಡಿದ್ದರು.ಈ ದಾಖಲೆಯನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದಿರುವ ಅಕ್ಷಯ್ ಕುಮಾರ್, ಇದೇ ಸಂದರ್ಭದಲ್ಲಿ ಮಾಧ್ಯಮ ಒಂದರ ಜೊತೆ ಮಾತನಾಡುವ ವೇಳೆ ಭಾರತವೇ ನನಗೆ ಸರ್ವಸ್ವವಾಗಿದ್ದು, ಕೆನಡಾ ಪೌರತ್ವ ತೊರೆಯುತ್ತಿದ್ದೇನೆ ಎಂದಿದ್ದಾರೆ. ಈಗಾಗಲೇ ಈ ಕುರಿತು ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ನಟಿ ಊಹಾ ಕುಟುಂಬಸ್ಥರ ಸಾಕ್ಷಿಯಾಗಿ ದೇವರ ಮುಂದೆ ಪ್ರೇಮ ನಿವೇದನೆ ಮಾಡಿದ್ದ ಗಂಗಾವತಿಯ ನಟ ಶ್ರೀಕಾಂತ್.

Fri Feb 24 , 2023
100 ತೆಲುಗು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿರುವ ಶ್ರೀಕಾಂತ್ ಅವರು ಇಂದು ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ವಿಭಿನ್ನ ರೀತಿಯ ಪಾತ್ರಗಳನ್ನು ಮಾಡುತ್ತಿದ್ದ ಶ್ರೀಕಾಂತ್ ಅವರು ಸಿನಿಮೀಯ ರೀತಿಯಲ್ಲಿ ಅವರ ಧರ್ಮಪತ್ನಿಗೆ ಪ್ರೇಮ ನಿವೇದನೆ ಮಾಡಿದ್ದರಂತೆ.ಶ್ರೀಕಾಂತ್, ಊಹಾ ಅವರು ಒಟ್ಟಾಗಿ ಸಿನಿಮಾಗಳನ್ನು ಮಾಡಿದ್ದಾರೆ. ಊಹಾ ಅವರಿಗೆ ಶಿವರಂಜಿನಿ ಎಂದೂ ಹೆಸರಿದೆ. ‘ಅಮೆ’, ‘ಕೂತುರು’, ‘ಆಯನ ಗಾರು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇವರಿಬ್ಬರ ಮಧ್ಯೆ […]

Advertisement

Wordpress Social Share Plugin powered by Ultimatelysocial