ಎರಡು ಲಕ್ಷ ಕುಟುಂಬಕ್ಕೆ ಬೊಮ್ಮಾಯಿ ಸರ್ಕಾರ ಶುಭ ಸುದ್ದಿ ನೀಡಿದೆ.

ಬೆಂಗಳೂರು: ಬಹಳ ವರ್ಷಗಳ ಹಿಂದೆ ವಸತಿ ಯೋಜನೆಯ ಫಲಾನುಭವಿಯಾಗಿ, ವಿವಿಧ ಕಾರಣಕ್ಕೆ ಮನೆಯನ್ನೂ ಪೂರ್ತಿ ಮಾಡಿಕೊಳ್ಳಲಾಗದೆ, ಹೊಸ ಯೋಜನೆಗೂ ಫಲಾನುಭವಿಯಾಗಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ಎರಡು ಲಕ್ಷ ಕುಟುಂಬಕ್ಕೆ ಬೊಮ್ಮಾಯಿ ಸರ್ಕಾರ ಶುಭ ಸುದ್ದಿ ನೀಡಿದೆ.

ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, ತ್ರಿಶಂಕುವಾಗಿದ್ದ ಫಲಾನುಭವಿಗಳಿಗೆ ಸಂಕಷ್ಟದಿಂದ ಮುಕ್ತಿ ನೀಡಲು ನಿರ್ಣಯಿಸಲಾಯಿತು. ಈ ಹಿಂದೆ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಯಾಗಿ, ಸರ್ಕಾರದಿಂದ ಮನೆ ಹಂಚಿಕೆಯಾಗಿದ್ದರೂ ಎರಡು ಲಕ್ಷದಷ್ಟು ಫಲಾನುಭವಿಗಳು ಪೋರ್ಟಲ್​ನಲ್ಲಿ ಸೂಕ್ತ ಮಾಹಿತಿ ಅಪ್​ಲೋಡ್ ಮಾಡದೆ ಅನುದಾನ ಪಡೆದಿರಲಿಲ್ಲ. ಇನ್ನು ಕೆಲವರು ಮನೆಗಳನ್ನೇ ಆರಂಭಿಸದೆ ಯೋಜನೆ ಲಾಭ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಅಂತಹವರ ಫಲಾನುಭವಿತ್ವವನ್ನು ರದ್ದು ಮಾಡಿ, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ನಿಶ್ಚಯಿಸಲಾಗಿದೆ. ಈ ರೀತಿ ತ್ರಿಶಂಕು ಸ್ಥಿತಿಯಲ್ಲಿದ್ದ 2 ಲಕ್ಷ ಕುಟುಂಬಕ್ಕೆ ಈವರೆಗೆ ಹೊಸ ವಸತಿ ಯೋಜನೆಗಳಿಗೆ ಪುನಾ ಅರ್ಜಿ ಸಲ್ಲಿಸಲು ಅವಕಾಶವೇ ಇರಲಿಲ್ಲ.

ಒಂದೇ ಪ್ರಕರಣಕ್ಕೆ ಒಂದೇ ಕೇಸ್:ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕವನ್ನು ಶಾಸನಸಭೆ ಯಲ್ಲಿ ಮಂಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಕೆಲವು ಪ್ರಕರಣಗಳಲ್ಲಿ 5-6, ಅದಕ್ಕಿಂತ ಎಫ್​ಐಆರ್ ಆಗುತ್ತಿತ್ತು, ಅದನ್ನೆಲ್ಲ ಸೇರಿಸಿ ಒಂದೇ ಕೇಸ್ ನಡೆಸಲು ಕಾನೂನು ತಿದ್ದುಪಡಿ ಅವಶ್ಯಕತೆ ಇದೆ. ಹಣಕಾಸು ವಿಷಯದಲ್ಲಿ ಒಂದೇ ಪ್ರಕರಣದಲ್ಲಿ ಬೇರೆ ಬೇರೆ ಎಫ್​ಐಆರ್ ದಾಖಲಾಗಿದ್ದರೆ, ಅದನ್ನೆಲ್ಲ ಸೇರಿಸಿ ಒಂದೇ ಕ್ರೖೆಮ್ ನಂಬರ್​ನಡಿ ನಡೆಸುವ ಉದ್ದೇಶದಿಂದ ಕಾಯ್ದೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.

ಇಂದಿರಾ ಕ್ಯಾಂಟೀನ್ ಶಿಫ್ಟ್:ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಕುರಿತು ಸಮಗ್ರ ಅಧ್ಯಯನ ನಡೆಸಿ, ಎಲ್ಲೆಲ್ಲಿ ಕ್ಯಾಂಟೀನ್ ಅಗತ್ಯ ಇಲ್ಲವೋ ಅದನ್ನು ಗುರುತಿಸಿ, ಜನನಿಬಿಡ ಪ್ರದೇಶಗಳಿಗೆ ವರ್ಗಾಯಿಸಲು ಸರ್ಕಾರ ಬಯಸಿದೆ. ಸ್ಥಳೀಯ ಸಂಸ್ಥೆಗಳು ಈ ಯೋಜನೆಗೆ ತಮ್ಮ ಪಾಲಿನ ಶೇ.30-40 ಅನುದಾನ ಕೊಡಲು ಶಕ್ತಿ ಇಲ್ಲ ಎಂದಿದ್ದವು. ಸರ್ಕಾರವೇ ಅನುದಾನ ಕೊಡಬೇಕೆಂದರೆ ಸ್ಥಳ ಬದಲಿಸಿ, ಹೆಚ್ಚಿನ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಮಾಡಿ ಎಂದು ಸೂಚಿಸಿದೆ.

ಮುಖ್ಯಾಂಶ

  • ರಾಜ್ಯಕ್ಕೊಂದು ದತ್ತಾಂಶ ನೀತಿ ಕೇಂದ್ರ ಸ್ಥಾಪನೆಗೆ ಅನುಮತಿ ನೀಡಿದ್ದು, ಎಲ್ಲರಿಗೂ ಡೇಟಾ ಸಂಗ್ರಹ, ಬಳಕೆಗೆ ಅನುಕೂಲವಾಗಲಿದೆ. ಇದಕ್ಕೆ 100 ಕೋಟಿ ರೂ.
  • ಪುತ್ತೂರಿನಲ್ಲಿ ಒಂದು ಪಶು ಕಾಲೇಜು ನಿರ್ವಿುಸುತ್ತಿದ್ದು, ಅದಕ್ಕೆ 136 ಕೋಟಿ ರೂ. ಅನುಮೋದನೆ.
  • ಶಿಗ್ಗಾವಿಯಲ್ಲಿ ಜವಳಿ ಪಾರ್ಕ್ ನಿರ್ವಿುಸಲು 25 ಕೋಟಿ ರೂ. ಅನುದಾನಕ್ಕೆ ಅನುಮೋದನೆ.
  • ಕೀಟ ನಿರ್ವಹಣಾ ಕೇಂದ್ರ (ಸಿಪಿಐಎಂಸಿ) ನೀಡಿದ್ದ ಜಮೀನು ಗುತ್ತಿಗೆ ಅವಧಿ ಮುಗಿದತ್ತು, ಈಗ 1.27ಎಕರೆೆ ಜಮೀನು ನೀಡಲು ಸಮ್ಮತಿ.
  • ಲೋಕಾಯುಕ್ತದಿಂದ ಇಬ್ಬರು ಇಂಜಿನಿಯರ್​ಗಳ ವಿರುದ್ಧ ನಡೆದಿರುವ ತನಿಖೆ ರದ್ದು.
  • ಎಲೆವೇಟೆಡ್ ಕಾರಿಡಾರ್ ಕೆಲಸವನ್ನು ಮಾಡದ ಸಿಂಪ್ಲೆಕ್ಸ್ ಇನ್ ಫ್ರಾನ ಗುತ್ತಿಗೆ ರದ್ದು, ಹೊಸದಾಗಿ ಟೆಂಡರ್ ಕರೆಯಲು ನಿರ್ಧಾರ
     
  • ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

    https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆದೃಷ್ಟ ಹಾಗೂ ಸಾಧನೆಯ ಬೆನ್ನೇರಿ ಹೊರಟಿರುವ ರಾಯಲ್‌ ಚಾಲೆಂಜರ್ ಬೆಂಗಳೂರು!

Tue Apr 19 , 2022
  ನವೀ ಮುಂಬಯಿ: ಆದೃಷ್ಟ ಹಾಗೂ ಸಾಧನೆಯ ಬೆನ್ನೇರಿ ಹೊರಟಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಮಂಗಳವಾರ ರಾತ್ರಿಯ ಐಪಿಎಲ್‌ ಕೌತುಕವನ್ನು ಹೆಚ್ಚಿಸಲು ಟೊಂಕ ಕಟ್ಟಿವೆ. ಈ ಎರಡೂ ತಂಡಗಳು 6 ಪಂದ್ಯಗಳಾನ್ನಾಡಿದ್ದು, ನಾಲ್ಕರಲ್ಲಿ ಜಯ ಸಾಧಿಸಿವೆ. ರನ್‌ರೇಟ್‌ನಲ್ಲಿ ಲಕ್ನೋ ತುಸು ಮೇಲಿದೆ. ಅಲ್ಲದೇ ಇತ್ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದ ಅತ್ಯುತ್ಸಾಹದಲ್ಲಿವೆ. ಲಕ್ನೋ ಮುಂಬೈಯನ್ನು, ಆರ್‌ಸಿಬಿ ಡೆಲ್ಲಿಯನ್ನು ಉರುಳಿಸಿದ್ದು, ಇದರ ಸಂಭ್ರಮ ಇನ್ನೂ […]

Advertisement

Wordpress Social Share Plugin powered by Ultimatelysocial