ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿರುವ ನಿರ್ಧಾರವನ್ನು ಖಂಡಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ,

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿರುವ ನಿರ್ಧಾರವನ್ನು ಖಂಡಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಇದು ಕೆಳಮಟ್ಟಕ್ಕೆ ಹೋಗುವ ರಾಜಕಾರಣ ಎಂದು ಕಿಡಿಕಾರಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಸದನದಲ್ಲಿ ಚರ್ಚಿಸಲು ಬೇಕಾದಷ್ಟು ವಿಷಯಗಳಿವೆ. ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ಆದರೆ ಕಾಂಗ್ರೆಸ್ ಸದಸ್ಯರು ಇದಾವುದಕ್ಕೂ ಅವಕಾಶ ನೀಡದೇ ಕಲಾಪದ ವೇಳೆ ಪ್ರತಿಭಟನೆ ನಡೆಸಿದ್ದಾರೆ. ಈಗ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದಾರೆ. ಕಾಂಗ್ರೆಸ್ ನವರಿಗೆ ರಾಜ್ಯದ ಜನತೆ ಹಿತಾಸಕ್ತಿಗಿಂತ ರಾಜಕಾರಣವೆ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಾಂತಿ-ಸೌಹಾರ್ದತೆ ಕಾಪಾಡುವುದು ನಮ್ಮ ಜವಾಬ್ದಾರಿ. ಸಂಧಾನ ಸಭೆ ನಡೆಸಿ ಧರಣಿ ವಾಪಸ್ ಪಡೆಯುವಂತೆ ಮನವೊಲಿಕೆ ಮಾಡಿದರೂ ಯಾವುದಕ್ಕೂ ಒಪ್ಪುತ್ತಿಲ್ಲ. ಕೇವಲ ರಾಜಕೀಯಕ್ಕಾಗಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಇದು ನಿಜಕ್ಕೂ ಕೆಳಮಟ್ಟಕ್ಕೆ ಹೋಗುವ ರಾಜಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

ತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 
Please follow and like us:

Leave a Reply

Your email address will not be published. Required fields are marked *

Next Post

WIPRO:ವಿಪ್ರೋ ಜಸ್ಜಿತ್ ಸಿಂಗ್ ಕಾಂಗ್ ಅವರನ್ನು ಡಿಜಿಟಲ್ ಕಾರ್ಯಾಚರಣೆಗಳ ಮುಖ್ಯಸ್ಥರನ್ನಾಗಿ ನೇಮಿಸಿದೆ;

Thu Feb 17 , 2022
ವಿಪ್ರೊ ಲಿಮಿಟೆಡ್ ಇಂದು ಜಸ್ಜಿತ್ ಸಿಂಗ್ ಕಾಂಗ್ ಅವರನ್ನು ವಿಪ್ರೊದ iCORE (ಇಂಟಿಗ್ರೇಟೆಡ್ ಕ್ಲೌಡ್ ಇನ್ಫ್ರಾಸ್ಟ್ರಕ್ಚರ್, ಡಿಜಿಟಲ್ ಕಾರ್ಯಾಚರಣೆಗಳು, ಅಪಾಯ ಮತ್ತು ಎಂಟರ್‌ಪ್ರೈಸ್ ಸೈಬರ್ ಭದ್ರತಾ ಸೇವೆಗಳು) ವ್ಯವಹಾರದ ಡಿಜಿಟಲ್ ಕಾರ್ಯಾಚರಣೆ ಮತ್ತು ಪ್ಲಾಟ್‌ಫಾರ್ಮ್‌ಗಳ (ಡಿಒಪಿ) ಹೊಸ ಮುಖ್ಯಸ್ಥರನ್ನಾಗಿ ಘೋಷಿಸಿದೆ. ಕಾಂಗ್ 2018 ರಲ್ಲಿ ಅಲೈಟ್ ಸ್ವಾಧೀನದ ಭಾಗವಾಗಿ ವಿಪ್ರೋಗೆ ಸೇರಿದರು ಮತ್ತು ವ್ಯಾಪಾರವನ್ನು ಏಕೀಕರಿಸುವಲ್ಲಿ ಮತ್ತು ಏಷ್ಯಾ ಪೆಸಿಫಿಕ್ ಕಾರ್ಯಾಚರಣೆಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 28 ವರ್ಷಗಳ […]

Advertisement

Wordpress Social Share Plugin powered by Ultimatelysocial