ಪದಾರ್ಪಣೆ ಮಾಡಿದ ಒಂದೇ ವರ್ಷದಲ್ಲಿ ಕ್ರಿಕೆಟ್‌ನಿಂದ ಮರೆಯಾದ 5 ಯುವ ಆಟಗಾರರು

 

2022 ಭಾರತೀಯ ಕ್ರಿಕೆಟ್‌ಗೆ ಅನೇಕ ಸಿಹಿ ಕಹಿಯನ್ನು ಕಂಡ ವರ್ಷವಾಗಿದೆ. ದ್ವಿಪಕ್ಷೀಯ ಸರಣಿಯಲ್ಲಿ ಅಮೋಘ ಸಾಧನೆ ಮಾಡಿದ ಭಾರತ ತಂಡ, ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗುವಲ್ಲಿ ವಿಫಲವಾಯಿತು.ಅನೇಕ ಭಾರತೀಯ ಕ್ರಿಕೆಟಿಗರಿಗೆ 2022 ಮರೆಯಲಾಗದ ಸ್ಮರಣೀಯ ವರ್ಷವಾಗಿದೆ.ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನಕ್ಕೆ ಏರಿದರು. ವಿರಾಟ್ ಕೊಹ್ಲಿ ಮೂರು ವರ್ಷಗಳ ತಮ್ಮ ಶತಕದ ಬರವನ್ನು 2022ರಲ್ಲಿ ನೀಗಿಸಿಕೊಂಡರು.ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡಕ್ಕೆ ನಾಯಕನಾಗಿ ಬಡ್ತಿ ಹೊಂದಿರು. ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್‌ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.ಇನ್ನೂ ಕೆಲವು ಉತ್ತಮ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. 2021ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರೂ, ಒಂದೇ ವರ್ಷದಲ್ಲಿ ಕ್ರಿಕೆಟ್‌ನಿಂದ ಮರೆಯಾದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಪ್ರಭಾವ ಬೀರುತ್ತಾರೆ ಎಂದು ನಿರೀಕ್ಷೆ ಮಾಡಿದ ಹೊರತಾಗಿಯೂ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಅಂತಹ ಐದು ಯುವ ಕ್ರಿಕೆಟಿಗರ ಬಗ್ಗೆ ಮಾಹಿತಿ.ಕೆಲವೇ ಪಂದ್ಯ ಆಡಿ ಮರೆಯಾದ ವೆಂಕಟೇಶ್ ಅಯ್ಯರ್2022ರ ಆರಂಭದಲ್ಲಿ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ತಂಡದಿಂದ ಹೊರುಗುಳಿದಿದ್ದರು. ಪಾಂಡ್ಯ ಬದಲಿಗೆ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹೆಪ್ಪುಗಟ್ಟಿದ ನಯಾಗರಾ ಜಲಪಾತ

Thu Dec 29 , 2022
ನಯಾಗರಾ ಫಾಲ್ಸ್‌ ಮೇಲಿನಿಂದ ಪ್ರತಿ ಸೆಕೆಂಡ್‌ಗೆ 3,160 ಟನ್‌ ನೀರು ಕೆಳಕ್ಕೆ ಬೀಳುತ್ತದೆ.ಆದರೆ ಇದೀಗ ಫಾಲ್ಸ್‌ ಹೆಪ್ಪುಗಟ್ಟಿದೆ. ನಯಾಗರಾ ಫಾಲ್ಸ್‌ನ ಒಳಹರಿವಿನಲ್ಲಿ ನೀರಿನ ಸಂಚಾರವಿದೆ. ಆದರೆ ಅದರ ಮೇಲ್ಮೈ ಸಂಪೂರ್ಣ ಮಂಜುಗಡ್ಡೆಯಾಗಿದೆ. ಹೆಪ್ಪುಗಟ್ಟಿದ ನಯಾಗರಾ ಫಾಲ್ಸ್‌ನ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಈ ಹಿಂದೆ 1964ರಲ್ಲಿ ನಯಾಗರಾ ಜಲಪಾತದ ನೀರು ತೀವ್ರ ಶೀತದಿಂದ ಮಂಜುಗಡ್ಡೆಯಾಗಿತ್ತು.ಇನ್ನೊಂದೆಡೆ ಬಾಂಬ್‌ ಚಂಡಮಾರುತದಿಂದ ಅಮೆರಿಕ ಮತ್ತು ಕೆನಡಾದಲ್ಲಿ ಜನಜೀವನ ಅಸ್ತವ್ಯವಸ್ತವಾಗಿದೆ. ಇದುವರೆಗೂ 65ಕ್ಕೂ […]

Advertisement

Wordpress Social Share Plugin powered by Ultimatelysocial