ನಟ ರಕ್ಷಿತ್‌ ಶೆಟ್ಟಿ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘777 ಚಾರ್ಲಿ’

 

 

ವಿಶ್ವದಾದ್ಯಂತ ಜೂನ್‌ 10ಕ್ಕೆ ಬಿಡುಗಡೆಯಾಗಲಿದ್ದು, ಚಿತ್ರದ ಹಿಂದಿ ಅವತರಣಿಕೆಯನ್ನು ಯುಎಫ್‌ಒ ಸಂಸ್ಥೆ ವಿತರಣೆ ಮಾಡಲಿದೆ.

ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಮಾಹಿತಿಯನ್ನು ರಕ್ಷಿತ್‌ ಶೆಟ್ಟಿ ಹಂಚಿಕೊಂಡಿದ್ದಾರೆ.

ಈಗಾಗಲೇ ಚಿತ್ರದ ಕನ್ನಡ ಆವೃತ್ತಿಯ ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ಪ್ರಸಾರದ ಹಕ್ಕನ್ನು ಕಲರ್ಸ್‌ ಕನ್ನಡ ಹಾಗೂ ವೂಟ್‌ ಪಡೆದುಕೊಂಡಿದೆ.

ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ. ಚಿತ್ರದ ತೆಲುಗು ಅವತರಣಿಕೆಯನ್ನು ನಟ, ನಿರ್ಮಾಪಕ ರಾಣಾ ದಗ್ಗುಬಾಟಿ ಅವರು ತಮ್ಮ ಸುರೇಶ್‌ ಪ್ರೊಡಕ್ಷನ್ಸ್‌ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಮಲಯಾಳಂನಲ್ಲಿ ನಟ, ನಿರ್ಮಾಪಕ ಪೃಥ್ವಿರಾಜ್‌ ಸುಕುಮಾರನ್‌, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜ್‌ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

‘777 ಚಾರ್ಲಿ’ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರಕಿದೆ. ಸಂಗೀತಾ ಶೃಂಗೇರಿ ಚಿತ್ರದ ನಾಯಕಿ. ಚಿತ್ರದಲ್ಲಿ ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಡ್ಯಾನಿಶ್‌ ಸೇಠ್‌ ತಾರಾಗಣದಲ್ಲಿದ್ದಾರೆ. ಜಿ.ಎಸ್‌.ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ಈ ಚಿತ್ರದ ನಿರ್ಮಾಪಕ.

777 ಚಾರ್ಲಿ, ಮನುಷ್ಯ ಮತ್ತು ನಾಯಿಮರಿಯ ನಡುವಿನ ವಿಶೇಷ ಬಾಂಧವ್ಯವನ್ನು ಆಧರಿಸಿದ ಕಥೆಯಾಗಿದ್ದು ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಕಿರಣ್‌ರಾಜ್ ಕಥೆ ಬರೆದಿರುವ ಈ ಚಿತ್ರಕ್ಕೆ ನೋಬಿನ್ ಪೌಲ್ ಹಿನ್ನೆಲೆ ಸಂಗೀತವಿದೆ. ಅರವಿಂದ್ ಎಸ್ ಕಶ್ಯಪ್ ಸಿನಿಮಾಟೋಗ್ರಫಿ ನಿರ್ವಹಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

.''ನಾನು ಮತ್ತು ಗುಂಡ'' ಖ್ಯಾತಿಯ ನಾಯಿ ಸಿಂಬು ಇನ್ನಿಲ್ಲ!

Tue May 10 , 2022
  ದಕ್ಷಿಣದ ಯಾವುದೇ ಸಿನಿಮಾದಲ್ಲಿ ನಾಯಿ ಕಾಣಿಸಿಕೊಳ್ಳಲಿ ಅಲ್ಲಿ ಸಿಂಬು ಇರಲೇಬೇಕಿತ್ತು. ಅಷ್ಟರ ಮಟ್ಟಿಗೆ ಈ ಸಿಂಬು ಫೇಮಸ್ ಆಗಿದ್ದ. ಅದರಲ್ಲೂ ಶಿವರಾಜ್ ಕೆ.ಆರ್ ಪೇಟೆ ನಟನೆಯ ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಹೈಲೈಟ್ ಆಗಿದ್ದು ಇದೇ ಸಿಂಬು ಎಂಬ ನಾಯಿ. ಈ ಸಿನಿಮಾದಿಂದ ಸಿಂಬುಗೆ ಮತ್ತಷ್ಟು ಬೇಡಿಕೆ ಬಂತು. ಇದೀಗ ಆ ಸಿಂಬು ಇಹಲೋಕ ತ್ಯಜಿಸಿರುವ ಸುದ್ದಿ ಬಂದಿದೆ. ತಮ್ಮೊಟ್ಟಿಗೆ ನಟಿಸಿದ್ದ ಸಿಂಬುನನ್ನು ಕಳೆದುಕೊಂಡಿರುವ ವಿಷಯವನ್ನು ನಟ ಶಿವರಾಜ್ […]

Advertisement

Wordpress Social Share Plugin powered by Ultimatelysocial