.”ನಾನು ಮತ್ತು ಗುಂಡ” ಖ್ಯಾತಿಯ ನಾಯಿ ಸಿಂಬು ಇನ್ನಿಲ್ಲ!

 

ದಕ್ಷಿಣದ ಯಾವುದೇ ಸಿನಿಮಾದಲ್ಲಿ ನಾಯಿ ಕಾಣಿಸಿಕೊಳ್ಳಲಿ ಅಲ್ಲಿ ಸಿಂಬು ಇರಲೇಬೇಕಿತ್ತು. ಅಷ್ಟರ ಮಟ್ಟಿಗೆ ಈ ಸಿಂಬು ಫೇಮಸ್ ಆಗಿದ್ದ. ಅದರಲ್ಲೂ ಶಿವರಾಜ್ ಕೆ.ಆರ್ ಪೇಟೆ ನಟನೆಯ ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಹೈಲೈಟ್ ಆಗಿದ್ದು ಇದೇ ಸಿಂಬು ಎಂಬ ನಾಯಿ.

ಈ ಸಿನಿಮಾದಿಂದ ಸಿಂಬುಗೆ ಮತ್ತಷ್ಟು ಬೇಡಿಕೆ ಬಂತು. ಇದೀಗ ಆ ಸಿಂಬು ಇಹಲೋಕ ತ್ಯಜಿಸಿರುವ ಸುದ್ದಿ ಬಂದಿದೆ.

ತಮ್ಮೊಟ್ಟಿಗೆ ನಟಿಸಿದ್ದ ಸಿಂಬುನನ್ನು ಕಳೆದುಕೊಂಡಿರುವ ವಿಷಯವನ್ನು ನಟ ಶಿವರಾಜ್ ಕೆ.ಆರ್ ಪೇಟೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ನಮ್ಮೊಂದಿಗೆ ಸಿಂಬು ನಟಿಸಿರಲಿಲ್ಲ. ಅದರೊಂದಿಗೆ ನಾವು ನಟಿಸಿದ್ದೆವು. ಅದರೊಂದಿಗಿನ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಸಿಂಬು ಇದೀಗ ಇಲ್ಲ ಎನ್ನುವ ಸುದ್ದಿ ಕೇಳಿ ತುಂಬಾ ನೋವಾಯಿತು ಎಂದು ಬರೆದುಕೊಂಡಿದ್ದಾರೆ.

ನಾನು ಮತ್ತು ಗುಂಡ ಸಿನಿಮಾದಲ್ಲಿ ಸಿಂಬು ನಟಿಸುವಾಗ ಅದಕ್ಕೆ ಎಂಟು ವರ್ಷ. ಸಿಂಬು ಲ್ಯಾಬ್ರಡರ್ ತಳಿಯದ್ದಾಗಿದ್ದು, ಅದಕ್ಕೆ ಸಿನಿಮಾದಲ್ಲಿ ನಟಿಸಲು ಸ್ವಾಮಿ ಅನ್ನುವವರು ತರಬೇತಿ ಕೂಡ ಕೊಟ್ಟಿದ್ದಾರೆ. ಹೀಗಾಗಿಯೇ ಹಲವು ಸಿನಿಮಾಗಳಲ್ಲಿ ಈ ಸಿಂಬು ಕಾಣಿಸಿಕೊಂಡಿದ್ದೆ. ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ನಾನು ಮತ್ತು ಗುಂಡು ಸಿನಿಮಾದಲ್ಲಿ ಈ ನಾಯಿ ಡಬ್ಬಿಂಗ್ ಕೂಡ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಜೊತೆ ನಯನತಾರಾ ಮದುವೆ..

Tue May 10 , 2022
ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಲವು ತಿಂಗಳಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಖ್ಯಾತ ನಟಿ ನಯನತಾರಾ ಕೊನೆಗೂ ಮದುವೆ ಆಗುತ್ತಿದ್ದಾರೆ. ಅನೇಕ ದಿನಗಳಿಂದ ಈ ಜೋಡಿಯ ವಿವಾಹದ ಕುರಿತು ಹಲವು ಸುದ್ದಿಗಳು ಹರಿದಾಡುತ್ತಿದ್ದವು. ಮೂರ್ನಾಲ್ಕು ಬಾರಿ ಮದುವೆ ದಿನಾಂಕ ಕೂಡ ಬಹಿರಂಗವಾಗಿತ್ತು. ಆದರೆ, ಅದೆಲ್ಲವೂ ಸುಳ್ಳಾಗಿತ್ತು. ಇದೀಗ ಮತ್ತೊಂದು ದಿನಾಂಕ ನಿಗದಿಯಾಗಿದ್ದು, ಜೂನ್ 9 ಕ್ಕೆ ಈ ಜೋಡಿ ಹಸೆಮಣೆ ಏರಲಿದೆ ಎನ್ನುವುದು ಅವರ ಆಪ್ತರು ಖಚಿತ […]

Advertisement

Wordpress Social Share Plugin powered by Ultimatelysocial