ಸಂಸದ ಪ್ರಜ್ವಲ್ ರೇವಣ್ಣ ಆನೆಯನ್ನು ಕೊಂದು ದಂತ ಮಾರಾಟ ಮಾಡುವಾಗ ಸಿಕ್ಕಿಬಿದ್ದ

ಸಂಸದ ಪ್ರಜ್ವಲ್ ರೇವಣ್ಣ ಆನೆಯನ್ನು ಕೊಂದು ದಂತ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಆರೋಪಿಯನ್ನು ರಕ್ಷಿಸಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೇಕಾ ಗಾಂಧಿ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ತಕ್ಷಣ ಮಧ್ಯಪ್ರವೇಶ ಮಾಡಿ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಡೆಸಲು ಒತ್ತಾಯಿಸಿದ್ಧಾರೆ. ವೀರಾಪುರ ಗ್ರಾಮದಲ್ಲಿ ಚಂದ್ರೆಗೌಡ ಎಂಬ ವ್ಯಕ್ತಿ ಆನೆಯನ್ನ ಕೊಂದಿದ್ದ. ಬಳಿಕ ಮಾರ್ಚ್ 19 ರಂದು ದಂತ ಮಾರಾಟ ಮಾಡುವ ವೇಳೆ ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ಇನ್ನು ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪಿಸಿರುವ ಮನೇಕಾ ಗಾಂಧಿ, ಆರೋಪಿಗಳ ರಕ್ಷಣೆಗೆ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಬಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ಧಾರೆ. ಕೇಸ್​ನಲ್ಲಿ ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್ಎಫ್ಓ ಪ್ರಯತ್ನ ಮಾಡಿದ್ದಾರೆ. ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಒತ್ತಡ ಹಾಕಿದ್ದಾರೆ. ಆರೋಪಿಗಳು ತಮ್ಮ ಪಾರ್ಟಿಯ ಬೆಂಬಲಿಗರು ಎನ್ನುವ ಕಾರಣಕ್ಕೆ ಅವರ ಪರವಾಗಿ ಸಂಸದ ಪ್ರಜ್ವಲ್ ರೇವಣ್ಣ ಒತ್ತಡ ಹಾಕುತ್ತಿದ್ದಾರೆ ಎಂದು ಮನೇಕಾ ಗಾಂಧಿ ದೂರು ನೀಡಿದ್ದಾರೆ. ಹಾಗೇ ತಕ್ಷಣ ಸಿಎಂ ಮಧ್ಯ ಪ್ರವೇಶಿಸಿ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಮೇಜಿನ ಬಳಿ ಸುಲಭವಾಗಿ ಮಾಡಬಹುದಾದ 10 ಯೋಗ ಆಸನಗಳು

Tue Jul 19 , 2022
ದಿನಕ್ಕೆ 8-9 ಗಂಟೆಗಳ ಕಾಲ ಮೇಜಿನ ಮೇಲೆ ಕುಳಿತುಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಆಶ್ಚರ್ಯಪಡಬೇಕಾಗಿಲ್ಲ. ನಿಮ್ಮ ಮೇಜಿನ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ನಿಮ್ಮ ಸೊಂಟದ ಬೆನ್ನುಮೂಳೆಯ ಮೇಲೆ ಸಾಕಷ್ಟು ಒತ್ತಡ ಮತ್ತು ಒತ್ತಡವನ್ನು ಉಂಟುಮಾಡಬಹುದು, ನಿಮ್ಮ ಸೊಂಟ ಮತ್ತು ಎದೆಯನ್ನು ಕಡಿಮೆಗೊಳಿಸಬಹುದು ಮತ್ತು ನಿಮ್ಮ ಮೇಲಿನಿಂದ ಮಧ್ಯದ ಬೆನ್ನಿನಿಂದ ವಿಸ್ತರಿಸಬಹುದು, ಇದರ ಪರಿಣಾಮವಾಗಿ ಭುಜ, ಕೆಳ ಬೆನ್ನು ಮತ್ತು ಕುತ್ತಿಗೆ ನೋವು ಉಂಟಾಗುತ್ತದೆ. ಆದಾಗ್ಯೂ, ನೀವು ಯೋಗ ತರಗತಿಗೆ […]

Advertisement

Wordpress Social Share Plugin powered by Ultimatelysocial