ಸಿಹಿಕಹಿ ಚಂದ್ರು ಸಾರಥ್ಯದ “ಬೊಂಬಾಟ್ ಭೋಜನ ಸೀಸನ್ 3”.ಆರಂಭ.

ನಟನಾಗಿ ಜನಮನಸೂರೆಗೊಂಡಿರುವ ಸಿಹಿಕಹಿ ಚಂದ್ರು, “ಬೊಂಬಾಟ್ ಭೋಜನ” ದ ಮೂಲಕ ರಚಿಕರ ಅಡುಗೆ ಮಾಡಿ ಎಲ್ಲರ ಮನವನ್ನು ಗೆದ್ದಿದ್ದಾರೆ. ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಎರಡು ಸೀಸನ್ ಪೂರ್ಣಗೊಳಿಸಿರುವ “ಬೊಂಬಾಟ್ ಭೋಜನ” ಕಾರ್ಯಕ್ರಮದ ಮೂರನೇ ಸೀಸನ್ ಈಗ ಆರಂಭವಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಹಿಕಹಿ ಚಂದ್ರು ಸೇರಿದಂತೆ ಅನೇಕರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ 2019 ರಲ್ಲಿ ಮೊದಲ ಸೀಸನ್ ಶುರು ಮಾಡಿದ್ದೆ. ಈಗ ಎರಡನೇ ಸೀಸನ್ ಕೂಡ ಮುಕ್ತಾಯವಾಗಿ, ಮೂರನೇ ಸೀಸನ್ ಆರಂಭವಾಗಿದೆ. ಈ ಸೀಸನ್ ನಲ್ಲಿ “ಬಯಲೂಟ”,
“ಸವಿಯೂಟ”, ” ಮನೆಊಟ”, “ಅಂದ ಚಂದ”, ” ಅಂಗೈ ಅಲ್ಲಿ ಆರೋಗ್ಯ” , “ಟಿಪ್ ಟಿಪ್ ಟಿಪ್” ಹಾಗೂ “ಅತಿಥಿ ದೇವೋಭವ” ಎಂಬ ಏಳು ಬಗೆಯ ವಿಶೇಷತೆಗಳಿದೆ. ಅದಕ್ಕೆ ಸಂಬಂಧಿಸಿದಂತೆ ಪರಿಣಿತರು ಮಾಹಿತಿ ನೀಡುತ್ತಾರೆ. ಇನ್ನೂ ವಿಶೇಷವೆಂದರೆ ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ||ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ದುಂಡಿರಾಜ್ ಅವರ ಹನಿಗವನ ಒಂದನ್ನು ಹೇಳುತ್ತೇನೆ. ಸೋಮವಾರದಿಂದ ಶನಿವಾರದ ತನಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನ 12ಗಂಟೆಗೆ “ಬೊಂಬಾಟ್ ಭೋಜನ ಸೀಸನ್ 3” ಪ್ರಸಾರವಾಗಲಿದೆ ಎಂದು ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿಯನ್ನು ಸಿಹಿಕಹಿ ಚಂದ್ರು ನೀಡಿದರು.

ಆರೋಗ್ಯಕ್ಕೆ ಸಂಬಂಧಿಸಿದ ಚಿಕ್ಕಚಿಕ್ಕ ವಿಷಯಗಳಿಗೆ ಆಸ್ಪತ್ರೆಗೆ ಹೋಗಬೇಡಿ. ಅದಕ್ಕೆ ಮನೆಯಲ್ಲೇ ಅನೇಕ ಮದ್ದುಗಳಿದೆ ಎಂದು ಡಾ|| ಗೌರಿ ಸುಬ್ರಹ್ಮಣ್ಯ ಹೇಳಿದರು.

ಸಾಹಿತಿ ದುಂಡಿರಾಜ್, ಸಿಹಕಹಿ ಗೀತಾ, ಖುಷಿ, ಶ್ರೀಪಾದ, ಪರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಲವು ವಸ್ತುಗಳನ್ನು ನೆನೆಸಿ ತಿನ್ನುವುದು ತುಂಬಾ ಪ್ರಯೋಜನಕಾರಿ.

Sun Jan 22 , 2023
ನವದೆಹಲಿ: ಜನರು ಆರೋಗ್ಯವಾಗಿರಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಾರೆ. ಅನೇಕ ಜನರು ತಮ್ಮ ಆಹಾರ ಮತ್ತು ಪಾನೀಯಕ್ಕೆ ಹೆಚ್ಚಿನ ಗಮನ ನೀಡುತ್ತಾರೆ. ಕೆಲವರು ದುಬಾರಿ ಡ್ರೈಫ್ರೂಟ್ಸ್ ತಿನ್ನುತ್ತಾರೆ. ಆದರೆ ಸರಿಯಾದ ಆಹಾರ ಕ್ರಮ ತಿಳಿಯುವವರೆಗೆ ಇವುಗಳನ್ನು ತಿನ್ನುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೆಲವು ವಸ್ತುಗಳನ್ನು ನೆನೆಸಿ ತಿನ್ನುವುದು ತುಂಬಾ ಪ್ರಯೋಜನಕಾರಿ. ನೀರಿನಲ್ಲಿ ನೆನೆಸುವುದರಿಂದ ಇಂತಹ ಆಹಾರ ಪದಾರ್ಥಗಳುಮೊಳಕೆಯೊಡೆಯಲು ಪ್ರಾರಂಭಿಸುತ್ತವೆ. ಹೀಗೆ ತಿನ್ನುವುದರಿಂದ ಪೌಷ್ಟಿಕಾಂಶ ಹೆಚ್ಚುತ್ತದೆ ಮತ್ತು ಸಾಕಷ್ಟು ಶಕ್ತಿಯೂ ಸಿಗುತ್ತದೆ. ಇಂತಹ ಮೊಳಕೆ […]

Advertisement

Wordpress Social Share Plugin powered by Ultimatelysocial