ಯೋಗ ಮತ್ತು ಕ್ರೀಡೆಯ ಸಮ್ಮಿಲನ ಅದ್ಭುತ ಯೋಚನೆ: ಸಿಎಂ ಬೊಮ್ಮಾಯಿ‌!

 

ಯೋಗಾಸನ ಮತ್ತು ಕ್ರೀಡೆಯ ಸಮ್ಮಿನಲದಿಂದ ಹೊಸ ಆಯಾಮ ದೊರಕಿದೆ. ಯುವಕರಿಗೆ ಕ್ರೀಡೆ ಆಸ್ಕತಿದಾಯಕ ವಿಷಯ. ಅದರ ಜತೆ ಯೋಗ ಸೇರಿದರೆ ಸಾಧನೆಯ ಮಟ್ಟವನ್ನು ಅತ್ಯುತ್ತಮಗೊಳಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.

ಯೋಗ ಅಂದರೆ ದೈಹಿಕ ವ್ಯಾಯಾಮ ಅಥವಾ ದೈಹಿಕ ಶಿಸ್ತು ಅಂದುಕೊಂಡಿದ್ದೇವೆ.

ಆದರೆ ಯೋಗದಲ್ಲಿ ಹಲವು ಆಯಾಮಗಳಿವೆ. ಒಂದೊಂದಕ್ಕೂ ಅದರದ್ದೇ ಆದ ಉದ್ದೇಶಗಳಿವೆ. ಕೆಲವು ವ್ಯಾಯಾಮಗಳು ಸಾಮಾನ್ಯ ಉದ್ದೇಶದವುಗಳು. ಆದರೆ ಯೋಗದ ಪ್ರತಿಯೊಂದು ಆಸನ ಸ್ಪಷ್ಟ ಉದ್ದೇಶಗಳಿಗಾಗಿ ಅನ್ವೇಷಣೆ ಮಾಡಲಾಗಿದೆ. ಇದೇ ಯೋಗದ ಸೌಂದರ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಾನವ ದೇಹವು ದೇವರ ಅತ್ಯದ್ಬುತ ಸೃಷ್ಟಿ. ಹೊರಪ್ರಪಂಚದಲ್ಲಿರುವುದಕ್ಕಿಂತ ಹೆಚ್ಚು ನಮ್ಮ ದೇಹದೊಳಗಿದೆ. ಬಯೋಲಜಿ, ಕೆಮಿಸ್ಟ್ರಿ, ಫಿಸಿಯೋಲಜಿ, ಎಲೆಕ್ಟ್ರಿಕಲ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಎಲ್ಲವೂ ಮಾನವನ ದೇಹದಲ್ಲಿದೆ. ಭೂಮಿಯ ಬೇರೆಲ್ಲಾ ಜೀವಿಗಿಂತ ಮಾನವನಿಗೆ ಹೆಚ್ಚು ಸಾಮರ್ಥ್ಯವಿದೆ ಜತೆಗೆ ಯಾವುದೇ ಹವಾಗುಣಕ್ಕೂ ಹೊಂದಿಕೊಳ್ಳುವ ಗುಣವಿದೆ. ಇದು ನಮ್ಮ ದೇಹದ ಆಂತರಿಕ ಸಾಮರ್ಥ್ಯದಿಂದ ಆಗಿದೆ. ಮಾನವನ ದೇಹದ ಸಂಪೂರ್ಣ ಸಾಮರ್ಥ್ಯವನ್ನು ಇದುವರೆಗೂ ಅಳೆಯಲು ಸಾಧ್ಯವಾಗಿಲ್ಲ. ಯೋಗ ಒಂದು ವಿಜ್ಞಾನವಾಗಿದ್ದು ಇದು ಮನುಷ್ಯನ ಸಾಮರ್ಥ್ಯವನ್ನು ಅಳೆಯುವ ಒಂದು ಸಾಧನವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಯೋಗ ಒಂದು ವಿಜ್ಞಾನ

ಇಲ್ಲಿ ಯೋಗ ಮಾಡಿದವರು ತಮ್ಮ ಮೂಳೆಗಳನ್ನು ಸ್ಪ್ರಿಂಗ್ ಮಾಡಿಕೊಂಡಿದ್ದಾರೆ. ಅದೂ ಒಂದು ವಿಜ್ಞಾನ. ನಮ್ಮ ದೇಹದಲ್ಲಿರುವ ಮಾಂಸಖಂಡಗಳನ್ನು ಸಹ ಕೃಷಿಮಾಡಿಕೊಂಡು ಬಂದಿದ್ದಾರೆ. ಇದೂ ಸಹ ಒಂದು ವಿಜ್ಞಾನ. ಇದನ್ನು ಜೀವಂತವಾಗಿಡಲು ರಕ್ತ ಸದಾ ಪರಿಚಲನೆಯಲ್ಲಿರುತ್ತದೆ. ಈ ಮೂಲಕ ನಮ್ಮ ಮೆದುಳಿನ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಅತ್ಯುತ್ತಮ ಐಕ್ಯೂ ಹೊಂದಿರುವ ಮನುಷ್ಯ ಅತಿಹೆಚ್ಚು ಅಂದರೆ ಶೇ 20% ಸಾಮರ್ಥ್ಯವನ್ನು ಮಾತ್ರ ಉಪಯೋಗ ಮಾಡಿಕೊಳ್ಳುತ್ತಾನೆ. 75% ಸಾಮರ್ಥ್ಯ ಇನ್ನೂ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಆವಿಷ್ಕಾರಗಳನ್ನು ವಿಶ್ವದಲ್ಲಿ ನೋಡಬಹುದಾಗಿದೆ. ಇದು ಯೋಗದ ಮೂಲಕ ಸಾಧ್ಯವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಆಧ್ಯಾತ್ಮ – ವಿಜ್ಞಾನ ಒಂದೇ ನ್ಯಾಣದ ಎರಡು ಮುಖಗಳು

ಯೋಗ ಮಾನವನ ಸಾಮರ್ಥ್ಯವನ್ನು ಅಭಿವೃದ್ಧಿ ಮಾಡುತ್ತಿದೆ. ಈ ವಿಜ್ಞಾನಕ್ಕೆ ಆಧ್ಯಾತ್ಮ ಸ್ಪೂರ್ತಿಯಾಗಿದೆ. ಆಧ್ಯಾತ್ಮ – ವಿಜ್ಞಾನ ಒಂದೇ ನ್ಯಾಣದ ಎರಡು ಮುಖಗಳು. ಈ ಮೂಲಕ ವಿಜ್ಞಾನವು ಆಧ್ಯಾತ್ಮದ ಶಕ್ತಿಯನ್ನು ತೋರಿಸುತ್ತದೆ. ಇದೇ ಈ ವ್ಯಾಸ ವಿಶ್ವವಿದ್ಯಾಲಯದಲ್ಲಿ ಜರುಗುತ್ತಿದೆ. ವಿಜ್ಞಾನ ಮತ್ತು ಆಧ್ಯಾತ್ಮ ಒಂದಾಗಿ ಯೋಗ ವಿಜ್ಞಾನವಾಗಿ ಹೊರಹೊಮ್ಮಿದೆ. ಈ ಸಂಬಂಧವಾಗಿ ಅನೇಕ ಪ್ರಯೋಗಗಳು ಆಗುತ್ತಿದೆ. ಆದ್ದರಿಂದ ಯೋಗವನ್ನು ಬೇರೆ ಆಯಾಮಗಳಲ್ಲಿ ಕಲಿಯುವವರಿಗೆ ವ್ಯಾಸ ವಿಶ್ವವಿದ್ಯಾಲಯ ಸೂಕ್ತ ಸ್ಥಳವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಯೋಗದಲ್ಲಿ ಸೋಲಿಲ್ಲ, ಎಲ್ಲಾ ಗೆಲುವುಗಳೇ

ಕ್ರೀಡೆಯಲ್ಲಿ ಗೆಲುವು ಸೋಲು ಎರಡೂ ಇದೆ. ಆದರೆ ಯೋಗದಲ್ಲಿ ಸದಾ ಗೆಲುವೇ ಸಿಗುತ್ತದೆ. ಯೋಗವನ್ನು ಶ್ರದ್ಧೆಯಿಂದ ಮಾಡುವವರಿಗೆ ಅನೇಕ ಉಪಯೋಗಗಳು ಆಗುತ್ತದೆ. ಅವರು ಜೀವನದಲ್ಲಿ ಯಶಸ್ಸನ್ನೂ ಕಾಣುತ್ತಾರೆ. ಕ್ರೀಡೆಯಲ್ಲಿ ಯೋಗ ಸೇರಿಸುವುದರ ಮೂಲಕ ತಮ್ಮ ಸಾಧನೆಯ ಮಟ್ಟವನ್ನು ಹೆಚ್ಚು ಮಾಡಿಕೊಳ್ಳಲು ಸಹಾಯಕಾರಿಯಾಗುತ್ತದೆ. ತಳಮಟ್ಟದ ಯೋಗ ಮಾಡಿದಾಗ ನಮ್ಮ ಶಕ್ತಿ ವೃದ್ಧಿಯಾಗುತ್ತದೆ. ಅದೇ ರೀತಿ ಕ್ರೀಡೆಯೊಂದಿಗೆ ಯೋಗ ಮಾಡಿದಾಗ ನಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಇಲ್ಲಿನವರು ಮಾಡಿದ ಯೋಗ ನೋಡಿದಾಗ ನಾನೂ ಸಹ ಏನಾದರೂ ಮಾಡಬಹುದು ಎಂಬ ಪ್ರೇರಣೆ ನೀಡಿದೆ ಎಂದು ತಿಳಿಸಿದ್ದಾರೆ.

ನಮ್ಮ ಪ್ರಧಾನಿಗಳಿಂದ ಯೋಗ ವಿಶ್ವಮಟ್ಟಕ್ಕೆ ಹೋಗಿದೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಯೋಗವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಯೋಗ ದಿನವನ್ನು ವಿಶ್ವದ ಎಲ್ಲ ದೇಶಗಳೂ ಆಚರಣೆ ಮಾಡುತ್ತವೆ. ಇದಕ್ಕಾಗಿ ನಮ್ಮ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳು. ಕಳೆದ ಬಾರಿ ಅವರು ಯೋಗವನ್ನು ನಮ್ಮ ಮೈಸೂರಿನಲ್ಲಿ ಆಚರಣೆ ಮಾಡಿ ಯೋಗ ವಿಶ್ವಕ್ಕಾಗಿ ಎಂಬ ಸಂದೇಶ ಸಾರಿದರು. ನಮ್ಮ ಪ್ರಧಾನಿಗಳಿಂದ ಮುಂದಿನ ಒಲಿಂಪಿಕ್ಸ್ನಲ್ಲಿ ಯೋಗವನ್ನು ಕ್ರೀಡೆಯಾಗಿ ಸೇರಿಸುವುದಕ್ಕೆ ಸಾಧ್ಯವಾಗಬಹುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಎಸ್.ವ್ಯಾಸ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಭಾರತದಲ್ಲಿ ವಿಶ್ವ ಯೋಗಾಸನ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆ ಮಾಡುತ್ತಿರುವ ಸುಮಾರು 18 ರಾಷ್ಟ್ರದ 148 ಕ್ಕೂ ಹೆಚ್ಚು ಪರಿಣತಿ ಹೊಂದಿದ ಯೋಗ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ‌ ಎಸ್. ವ್ಯಾಸ ವಿಶ್ವವಿದ್ಯಾಲಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಮೋಜಿ ಮಸ್ತಿ ಮಾಡಲು ಬಿಗ್ರೇಡ್ ರೋಡ್ ತೆರಳಿದ್ದ ಟೆಕ್ಕಿ ಕಿಡ್ನಾಪ್ !

Sun Dec 4 , 2022
  ಕಿಡ್ನಾಪ್ ಮಾಡಿ 10 ಲಕ್ಷದಷ್ಟು ಹಣ ಚಿನ್ನಭಾರಣ ದೋಚಿದ ಗ್ಯಾಂಗ್ ಬಂಧನ ಅಶೋಕ್ ನಗರ ಪೊಲೀಸರಿಂದ ನಾಲ್ವರು ಕಿಡ್ನಾಪರ್ಸ್ ಬಂಧನ ಕಲಾಣ್ಯನಗರದ ರಾಹುಲ್ ವೈರಾಧ್ಯ ಕಿಡ್ನಾಪ್ ಆದ ಟೆಕ್ಕಿ ಮೋಜಿಗಾಗಿ ಬ್ರಿಗೇಡ್ ರೋಡ್ ಗೆ ಆಟೋ ದಲ್ಲಿ ಪ್ರಯಾಣ ಬೆಳೆಸಿದ ಟೆಕ್ಕಿ ರಾಹುಲ್ ಮಧ್ಯರಾತ್ರಿ 3 ಗಂಟೆ ವೇಳೆ ಬಿಗ್ರೇಢ್ ನಲ್ಲಿ ಅಪರಿಚಿತ ವ್ಯಕ್ತಿಯ ಪರಿಚಯ ಮೋಜು ಮಸ್ತಿ ಮಾಡಲು ಯುವತಿಯರು ಇದ್ದಾರೆ ಎಂದು ಟೆಕ್ಕಿಗೆ ತೋರಿಸಿದ ಅಪರಿಚಿ […]

Advertisement

Wordpress Social Share Plugin powered by Ultimatelysocial