ನಟಿ ಮೇಘನಾ ಮನೆಯಲ್ಲಿ ಕ್ರಿಸ್ಮಸ್ ಗೆ ಭರ್ಜರಿ ತಯಾರಿ

ನಟಿ ಮೇಘನಾ ಮನೆಯಲ್ಲಿ ಕ್ರಿಸ್ಮಸ್ ಗೆ ಭರ್ಜರಿ ತಯಾರಿ

ಕ್ರಿಸ್‍ಮಸ್ ಹಬ್ಬಕ್ಕೆ ಈ ಬಾರಿ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮನೆಯಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಸಿಂಗಾರಗೊಂಡಿರುವ ಮನೆಯಲ್ಲಿ ಮೇಘನಾ ಪ್ರೀತಿಯ ಮಗನೊಂದಿಗೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸದ್ಯ ಕ್ರಿಸ್‍ಮಸ್ ಹಬ್ಬಕ್ಕೆ ಇನ್ನೇನು 4 ದಿನಗಳಷ್ಟೇ ಬಾಕಿ ಇದೆ. ಈ ಬಾರಿ ಹಬ್ಬಕ್ಕೆ ಮೇಘನಾ ರಾಜ್ ಮನೆಯನ್ನು ಸಖತ್ ಕಲರ್ ಫುಲ್ ಆಗಿ ಸಿಂಗರಿಸಲಾಗಿದೆ. ಇನ್ನೂ ಈ ಫೋಟೋವನ್ನು ಮೇಘನಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಲೈಟ್ ಹಾಗೂ ಸ್ಟಾರ್ಸ್‍ಗಳಿಂದ ಅಲಂಕಾರಗೊಳಿಸಲಾಗಿರುವ ಮನೆಯ ಮಧ್ಯ ಭಾಗದಲ್ಲಿ ಮೇಘನಾ ರಾಯನ್‍ನ್ನು ಎತ್ತಿಕೊಂಡಿದ್ದಾರೆ. ಫೋಟೋದಲ್ಲಿ ರಾಯನ್ ಮಂಕಿ ಕ್ಯಾಪ್ ಧರಿಸಿ ಕಲರ್ ಫುಲ್ ಆಗಿರುವ ಲೈಟಿಂಗ್ಸ್‍ನನ್ನೇ ಅಚ್ಚರಿಯಿಂದ ನೋಡುತ್ತಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ಜೊತೆಗೆ ಲವ್, ಲೈಫ್ ಮತ್ತು ಅದ್ಭುತವಾದ ಕ್ರಿಸ್‍ಮಸ್ ತಿಂಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಯಾಪ್ಟನ್ ಆಗಿ ಏನ್ ಮಾಡ್ತಿದ್ದೀಯಾ

Tue Dec 21 , 2021
ಕ್ಯಾಪ್ಟನ್ ಆಗಿ ಏನ್ ಮಾಡ್ತಿದ್ದೀಯಾ : ರೂಟ್ ಗೆ ಪಾಂಟಿಂಗ್ ಕ್ಯಾಪ್ಟನ್ಸಿ ಕ್ಲಾಸ್ Ponting saaksha tv ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಬರೋಬ್ಬರಿ ಒಂದು ದಶಕಕ್ಕೂ ಹೆಚ್ಚು ಕಾಲ ಆಸ್ಟ್ರೇಲಿಯಾ ತಂಡವನ್ನು ವಿಶ್ವ ಕ್ರಿಕೆಟ್ ನ ಕಿಂಗ್ ಆಗಿ ಮೆರೆಸಿದ್ದು, ರಿಕಿ ಪಾಂಟಿಂಗ್ ನಾಯಕತ್ವ. ಆಸ್ಟ್ರೇಲಿಯಾ ತಂಡಕ್ಕೆ ಹ್ಯಾಟಿಕ್ ವಿಶ್ವಕಪ್ ತಂದುಕೊಟ್ಟಿದ್ದು, ಎರಡೆರಡು ವಿಶ್ವಕಪ್ ಗಳಿಗೆ ಮುತ್ತಿಟ್ಟಿದ್ದು, ಐಸಿಸಿ […]

Advertisement

Wordpress Social Share Plugin powered by Ultimatelysocial