ಕ್ಯಾಪ್ಟನ್ ಆಗಿ ಏನ್ ಮಾಡ್ತಿದ್ದೀಯಾ

ಕ್ಯಾಪ್ಟನ್ ಆಗಿ ಏನ್ ಮಾಡ್ತಿದ್ದೀಯಾ : ರೂಟ್ ಗೆ ಪಾಂಟಿಂಗ್ ಕ್ಯಾಪ್ಟನ್ಸಿ ಕ್ಲಾಸ್

ಕ್ಯಾಪ್ಟನ್ ಆಗಿ ಏನ್ ಮಾಡ್ತಿದ್ದೀಯಾ : ರೂಟ್ ಗೆ ಪಾಂಟಿಂಗ್ ಕ್ಯಾಪ್ಟನ್ಸಿ ಕ್ಲಾಸ್ Ponting saaksha tv

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಬರೋಬ್ಬರಿ ಒಂದು ದಶಕಕ್ಕೂ ಹೆಚ್ಚು ಕಾಲ ಆಸ್ಟ್ರೇಲಿಯಾ ತಂಡವನ್ನು ವಿಶ್ವ ಕ್ರಿಕೆಟ್ ನ ಕಿಂಗ್ ಆಗಿ ಮೆರೆಸಿದ್ದು, ರಿಕಿ ಪಾಂಟಿಂಗ್ ನಾಯಕತ್ವ.

ಆಸ್ಟ್ರೇಲಿಯಾ ತಂಡಕ್ಕೆ ಹ್ಯಾಟಿಕ್ ವಿಶ್ವಕಪ್ ತಂದುಕೊಟ್ಟಿದ್ದು, ಎರಡೆರಡು ವಿಶ್ವಕಪ್ ಗಳಿಗೆ ಮುತ್ತಿಟ್ಟಿದ್ದು, ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನುಗೆದ್ದುಕೊಂಡಿದ್ದು ಒನ್ ಅಂಡ್ ಓನ್ಲಿ ರಿಕಿ ಪಾಂಟಿಂಗ್.

ಆಕ್ರಮಣಕಾರಿ ಪ್ರೌರುತ್ತಿರುವ ಪಾಂಟಿಂಗ್, ಟೀಂ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದ ರೀತಿ ನಃ ಭೂತೋ ನಃ ಭವಿಷ್ಯತಿ. ಅದು ಸ್ವದೇಶಿ ಇರಲಿ, ವಿದೇಶವಿರಲಿ ರಿಕಿ ಪಾಂಟಿಂಗ್ ನಾಯಕತ್ವದ ವೈಖರಿಯಲ್ಲಿ ಯಾವುದೇ ಬದಲಾವಣೆ ಇರುತ್ತಿರಲಿಲ್ಲ. ಕೊನೆಯ ಬಾಲ್, ಕೊನೆಯ ವಿಕೆಟ್ ವರೆಗೂ ಕೇವಲ ಗೆಲುವಿಗಾಗಿ ಹೋರಾಡಬೇಕು ಅನ್ನೋದನ್ನ ಇತರರಿಗೆ ತೋರಿಸಿಕೊಟ್ಟವರು ಪಾಂಟಿಂಗ್.

ಇಂತಹ ಪಾಂಟಿಂಗ್ ಈಗ ಆಶಸ್ ಸರಣಿಯಲ್ಲಿ ಸೋತು ಸೋತು ಸುಣ್ಣವಾಗಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಗೆ ಕ್ಯಾಪ್ಟನ್ಸಿ ಪಾಠ ಮಾಡಿದ್ದಾರೆ.

ಹೌದು..! ಇಂಗ್ಲೆಂಡ್ ಪರ ಜೋ ರೂಟ್ ನಾಯಕನಾಗಿ 58 ಪಂದ್ಯಗಳಲ್ಲಿ ಮುನ್ನಡೆಸಿದ್ದು, 27 ಗೆಲುವು ಪಡೆಯುವ ಮೂಲಕ ಅತ್ಯಂತ ಯಶಸ್ವಿ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಆದರೆ, ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ 2 ಟೆಸ್ಟ್​ ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಇಂಗ್ಲೆಂಡ್ ನಾಯಕನಾಗಿ ಗರಿಷ್ಠ ಸೋಲು ಪಡೆದ ನಾಯಕ ಎಂಬ ಬೇಡದ ದಾಖಲೆಗೂ ಪಾತ್ರರಾಗಿದ್ದಾರೆ.

ಇನ್ನು ಅಡಿಲೇಡ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಜೋ ರೂಟ್, ನಮ್ಮ ಬೌಲರ್ ಗಳು ನಿರ್ಧಿಷ್ಠವಾಗಿ ಲೈನ್ ಅಂಡ್ ಲೆಂಥ್ ನಲ್ಲಿ ಬೌಲಿಂಗ್ ಮಾಡಲಿಲ್ಲ. ಇದೇ ನಮ್ಮ ಹಿನ್ನಡೆಗೆ ಕಾರಣವಾಗಿದೆ ಎಂದಿದ್ದರು. ಇದಕ್ಕೆ ರಿಕಿ ಪಾಂಟಿಂಗ್ ಪ್ರತಿಕ್ರಿಯೆ ನೀಡಿದ್ದು, ರೂಟ್ ಗೆ ಕ್ಯಾಪ್ಟನ್ಸಿ ಕ್ಲಾಸ್ ಪಡೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎರಡೂ ಡೋಸ್ ಲಸಿಕೆ ಪಡೆದಿದ್ದ IIT ಬಾಂಬೆಯ 7 ವಿದ್ಯಾರ್ಥಿಗಳಿಗೆ ಕೋವಿಡ್ ದೃಢ

Tue Dec 21 , 2021
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಐಐಟಿ ಬಾಂಬೆಯ 7 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿದೆ. ರೂಪಾಂತರಿ ಕೊರೊನಾ ವೈರಸ್ ಒಮಿಕ್ರಾನ್ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ನಡುವೆಯೇ ಐಐಟಿ ಬಾಂಬೆಯ 7 ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಸೋಂಕಿತ ವಿದ್ಯಾರ್ಥಿಗಳೆಲ್ಲರೂ 2 ಡೋಸ್ ಲಸಿಕೆ ಪಡೆದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಸೋಂಕಿತರನ್ನು ಹಾಸ್ಟೆಲ್ ನಲ್ಲಿಯೇ ಐಸೋಲೇಷನ್ ಮಾಡಲಾಗಿದ್ದು, ಇಡೀ ಹಾಸ್ಟೆಲ್ ಸೀಲ್ ಡೌನ್ ಮಾಡಲಾಗಿದೆ. ವಿದ್ಯಾರ್ಥಿಗಳ ಸ್ಯಾಂಪಲ್ […]

Advertisement

Wordpress Social Share Plugin powered by Ultimatelysocial