ಬೊಮ್ಮಾಯಿ ಬಜೆಟ್ : ಶಂಕರ್ ನಾಗ್ ಹೆಸರಿನಲ್ಲಿ ಟ್ಯಾಕ್ಸಿ, ಆಟೋ ನಿಲ್ದಾಣ

ನ್ನಡ ಸಿನಿಮಾ ರಂಗದ ಹೆಸರಾಂತ ನಟ ಶಂಕರ್ ನಾಗ್ ಹೆಸರಿನಲ್ಲಿ ಸರಕಾರ ಸಾಕಷ್ಟು ಕೆಲಸ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ. ಅದರಲ್ಲೂ ಮೆಟ್ರೋ ನಿಲ್ದಾಣಗಳಿಗೆ ಅವರ ಹೆಸರು ಇಡಬೇಕು, ಶಂಕರ್ ಕನಸಿನ ನಂದಿಬೆಟ್ಟದಲ್ಲಿಯ ರೋಪ್ ವೇ ಚಾಲನೆ ಕೊಡಬೇಕು ಮತ್ತು ಅದಕ್ಕೆ ಶಂಕರ್ ನಾಗ್ ಅವರ ಹೆಸರನ್ನೇ ಇಡಬೇಕು ಎನ್ನುವುದು ಆಗ್ರಹವಾಗಿತ್ತು.

ಕೊನೆಗೂ ಅದು ಹಾಗೆಯೇ ಉಳಿದುಕೊಂಡಿದೆ.

ಆದರೆ ಈ ಬಾರಿಯ ಬಜೆಟ್ ನಲ್ಲಿ ಸರಕಾರವು ಶಂಕರ್ ಹೆಸರಿನಲ್ಲಿ ಯೋಜನೆಯೊಂದನ್ನು ರೂಪಿಸಿದ್ದು, ಅದನ್ನು ಆಯವ್ಯಯ 2023-24ರಲ್ಲಿ ಸೇರಿಸಲಾಗಿದೆ. ನಗರ ಹಾಗೂ ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ, ಖ್ಯಾತ ನಟರಾದ ದಿವಗಂತ ಶಂಕರ್ ನಾಗ್ ಅವರ ಹೆಸರಿನಲ್ಲಿ ಟ್ಯಾಕ್ಸಿ ಹಾಗೂ ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.

ಈಗಾಗಲೇ ಇರುವ ಬಹುತೇಕ ಆಟೋ ಹಾಗೂ ಟ್ಯಾಕ್ಸಿ ನಿಲ್ದಾಣಗಳಿಗೆ ಶಂಕರ್ ನಾಗ್ ಅವರ ಹೆಸರೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಶಂಕರ್ ನಾಗ್ ಆಟೋ ಅಥವಾ ಟ್ಯಾಕ್ಸಿ ನಿಲ್ದಾಣಗಳನ್ನು ನೋಡಬಹುದು. ಇದೀಗ ಬಜೆಟ್ ನಲ್ಲೂ ಇಂಥದ್ದೊಂದು ಯೋಜನೆಯನ್ನು ಘೋಷಿಸಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣ ಆಗಬೇಕು ಎನ್ನುವುದು ಶಂಕರ್ ನಾಗ್ ಅವರ ಕನಸಾಗಿತ್ತು. ಅದೀಗ ನನಸಾಗಿದೆ. ನಂದಿಬೆಟ್ಟದಲ್ಲಿ ರೂಪ್‍ ವೇ ಕೂಡ ಶಂಕರ್ ಕನಸು. ಇಂತಹ ದೊಡ್ಡ ಯೋಜನೆಗಳಿಗೆ ಶಂಕರ್ ನಾಗ್ ಹೆಸರನ್ನು ಇಡಲಿ ಎನ್ನುವುದು ಅವರ ಅಭಿಮಾನಿಗಳ ಆಗ್ರಹವಾಗಿತ್ತು. ಆದರೆ, ಬಜೆಟ್‍ ನಲ್ಲಿ ಇದ್ಯಾವುದೂ ಘೋಷಣೆಯಾಗಲಿಲ್ಲ ಎಂಬ ಬೇಸರ ಕೂಡ ಅವರ ಅಭಿಮಾನಿಗಳದ್ದಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾ ಶಿವರಾತ್ರಿ ಹಬ್ಬ ಆಚರಿಸಲು ದೇಶದ ಜನತೆ ಸಜ್ಜಾಗಿದ್ದಾರೆ‌.

Fri Feb 17 , 2023
ಫೆಬ್ರವರಿ 18  ಮಹಾ ಶಿವರಾತ್ರಿ ಹಬ್ಬ ಆಚರಿಸಲು ದೇಶದ ಜನತೆ ಸಜ್ಜಾಗಿದ್ದಾರೆ‌. ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮನೆಯಲ್ಲಿ ಸಿಹಿ‌ ಸವಿಯುತ್ತಾರೆ. ಕೆಲವರು ಆ ದಿನ ರಾತ್ರಿ ಪೂರ್ತಿ ದೇವಸ್ಥಾನಗಳಲ್ಲಿ ನಡೆಯುವ ಭಜನೆಗಳನ್ನು ಆಲಿಸುತ್ತಾ ಜಾಗರಣೆ ಮಾಡುತ್ತಾರೆ. ಇನ್ನೂ ಹಲವರು ಮನೆಯಲ್ಲೇ ಗುಂಪು ಗುಂಪಾಗಿ ಕುಳಿತು ಟಿವಿಯಲ್ಲಿ ನೆಚ್ಚಿನ ಚಿತ್ರಗಳನ್ನು ವೀಕ್ಷಿಸಿ ಜಾಗರಣೆ ಆಚರಿಸುತ್ತಾರೆ. ಸದ್ಯ ಇದೇ ಮಾದರಿಯಲ್ಲಿ ಚಿತ್ರಮಂದಿರಗಳಲ್ಲೇ ಶಿವರಾತ್ರಿ ಜಾಗರಣೆ ಪ್ರಯುಕ್ತ ಹಿಟ್ ಚಿತ್ರಗಳನ್ನು ಪ್ರದರ್ಶನವನ್ನು ಏರ್ಪಡಿಸುವ […]

Advertisement

Wordpress Social Share Plugin powered by Ultimatelysocial