ದಿನಭವಿಷ್ಯ:ಹಿಂಜರಿಕೆ ಬೇಡ! ಮನಸ್ಸಿನ ಭಾವನೆಗಳನ್ನು ಹೊರಹಾಕುವ ಸಮಯ,

ಸೋಮವಾರ, 7 ಫೆಬ್ರವರಿ 2022

ಮೇಷ
ಲಾಭ -ನಷ್ಟಗಳಿಲ್ಲದ ಸಮತೋಲಿತ ದಿನ. ಕುಟುಂಬ ಸದಸ್ಯರು ನಿಮ್ಮ ಸಾಮೀಪ್ಯವನ್ನು ಬಯಸುತ್ತಾರೆ. ಅವರ ಬೇಡಿಕೆಗಳಿಗೆ ಸ್ಪಂದಿಸುವುದು ಒಳಿತು.

ವೃಷ
ಕೆಲವು ವಿಚಾರಗಳಲ್ಲಿ ಇಂದು ನಿಮಗೆ ನಿರಾಶೆ ಕಾದಿದೆ.

ಹಣಕಾಸು, ಕೌಟುಂಬಿಕ ವ್ಯವಹಾರ ಮತ್ತು ಸಂಬಂಧದಲ್ಲಿ ಹಿನ್ನಡೆ ಅನುಭವಿಸುವಿರಿ. ಆರೋಗ್ಯ ಸಮಸ್ಯೆ.

ಮಿಥುನ
ಹಣಕಾಸು ವಿಚಾರಕ್ಕೆ ಸಂಬಂಧಿಸಿ ಹೆಚ್ಚು ಕಾರ್ಯನಿರತ. ಕೆಲಸದಲ್ಲಿ ಕೆಲವು ಗೋಜಲು ಉಂಟಾಗ ಬಹುದು. ಅದನ್ನು ನಿವಾರಿಸುವ ಪ್ರಯತ್ನ.

ಕಟಕ
ನಿಮ್ಮ ಮನದ ಭಾವನೆಯನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ಪ್ರಸಂಗ ಉದ್ಭವಿಸಬಹುದು. ಅದರಿಂದ ಮನಸ್ಸಿಗೆ ನಿರಾಳತೆ.

ಸಿಂಹ
ನಿಮ್ಮ ಕಾರ್ಯವೈಖರಿ ಕೆಲವರಿಂದ ಪ್ರಶ್ನಿಸಲ್ಪಡುವುದು. ಅದನ್ನು ನಿರ್ಲಕ್ಷಿಸದಿರಿ. ಅದರ ಕುರಿತು ಗಮನ ಹರಿಸಿ ಕ್ರಮ ತೆಗೆದುಕೊಳ್ಳಿ.

ಕನ್ಯಾ
ಆರ್ಥಿಕ ಪರಿಸ್ಥಿತಿ ಚಿಂತೆ ತರುತ್ತದೆ. ಸಣ್ಣಪುಟ್ಟ ವಿಚಾರಗಳು ನಿಮ್ಮ ಸಂತೋಷ ಹಾಳುಗೆಡವುತ್ತವೆ. ಏನಿದ್ದರೂ ನಿಮ್ಮ ವಿಶ್ವಾಸ ಕುಂದದಿರಲಿ.

ತುಲಾ
ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ. ಗತದಿನಗಳ ಮೆಲುಕು. ಕೌಟುಂಬಿಕ ಹೊಣೆಗಾರಿಕೆಗಳು ಮಾನಸಿಕ ಒತ್ತಡ ಹೇರುತ್ತವೆ.

ವೃಶ್ಚಿಕ
ಬೇಗ ಕೆಲಸ ಮುಗಿಸಿ, ಸಂಜೆಯ ವೇಳಗೆ ವಿಶ್ರಾಂತಿ ಪಡೆಯು ವುದನ್ನು ಕಾಯುತ್ತೀರಿ. ಕೆಲಸದೊತ್ತಡ ಮನೆಯಲ್ಲೂ ಬೆಂಬಿಡದು.

ಧನು
ಬಾಹ್ಯ ಸೌಂದರ್ಯಕ್ಕೆ ನೀವಿಂದು ವಿಶೇಷ ಗಮನ ಕೊಡುವಿರಿ. ಯಾರನ್ನೋ ಮೆಚ್ಚಿಸುವ ಪ್ರಯತ್ನ ನಿಮ್ಮದು. ಒಟ್ಟಾಗಿ ಸಂತೋಷದ ದಿನ ಕಳೆಯುವಿರಿ.

ಮಕರ
ಗತಕಾಲದ ಆಪ್ತರು ಭೇಟಿಯಾಗಬಹುದು. ಅವರ ಸಂಗದಲ್ಲಿ ಸಂತೋಷ ಪಡುವಿರಿ. ಯುವಕರಿಗೆ ಪ್ರೇಮದ ಆಕರ್ಷಣೆ. ಅಧ್ಯಯನ ಕಡೆಗಣಿಸದಿರಿ.

ಕುಂಭ
ಕೆಲದಿನಗಳಿಂದ ಕಾಡುತ್ತಿದ್ದ ಆರ್ಥಿಕ ತೊಂದರೆಯು ಕೊನೆಗೂ ಪರಿಹಾರ ಕಾಣಲಿದೆ. ಇದರಿಂದ ಅವಶ್ಯ ಖರ್ಚುವೆಚ್ಚ ಸರಿದೂಗಿಸುವಿರಿ.

ಮೀನ
ಪ್ರಮುಖ ಸಾಧನೆ ಯೊಂದನ್ನು ಮಾಡುತ್ತೀರಿ. ಎಲ್ಲರಿಂದ ಮೆಚ್ಚುಗೆ. ಭಾವನಾತ್ಮಕವಾಗಿ ಸಂತೋಷದ ಬೆಳವಣಿಗೆ. ಆರ್ಥಿಕ ಉನ್ನತಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಂದಾಪುರದ ಕಾಲೇಜಿನಲ್ಲಿ ಮಾರಕಾಸ್ರ್ತ, ತಂದಿದ್ದ ವಿದ್ಯಾರ್ಥಿಇಬ್ಬರು ಅರೆಸ್ಟ್

Mon Feb 7 , 2022
‌ ಉಡುಪಿ.ಫೆ,7- ಜಿಲ್ಲಾಯ ಕುಂದಾಪುರದ ಸರಕಾರಿ ಪಿಯು ಕಾಲೇಜು ಬಳಿ ಮಾರಕಾಸ್ತ್ರಗಳನ್ನು ಹೊಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ುಂದಾಪುರ ಸಮೀಪದ ಗಂಗೊಳ್ಳಿ ಗ್ರಾಮ ಅಬ್ದುಲ್ ಮಜೀದ್ (32) ಮತ್ತು ರಜಬ್ (41) ಎಂದು ಗುರುತಿಸಲಾಗಿದೆ. ಹಿಜಾಬ್ ಅನ್ನು ನಿಷೇಧಿಸುವ ಅಧಿಕಾರಿಗಳ ನಿರ್ಧಾರದ ವಿರುದ್ಧ ನಡೆದ ಪ್ರತಿಭಟನೆ ಪ್ರತಿಭಟನೆಯಲ್ಲಿ ಬಂಧಿತರನ್ನು ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಐವರು ಮಾರಕಾಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದರು ಮತ್ತು ಅವರಲ್ಲಿ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. […]

Advertisement

Wordpress Social Share Plugin powered by Ultimatelysocial