ಬ್ರಿಜ್ಮೋ ಮಿಶ್ರಾ ಕಥಕ್ ನೃತ್ಯದಲ್ಲಿ ವಿಶ್ವಪ್ರಖ್ಯಾತರು.

ಬ್ರಿಜ್ಮೋ ಮಿಶ್ರಾ ಅವರು ಪಂಡಿತ್ ಬಿರ್ಜು ಮಹಾರಾಜ್ ಎಂಬ ಹೆಸರಿನಿಂದ ಕಥಕ್ ನೃತ್ಯದಲ್ಲಿ ವಿಶ್ವಪ್ರಖ್ಯಾತರು.
ಬಿರ್ಜು ಮಹಾರಾಜರು 1938ರ ಫೆಬ್ರುವರಿ 4ರಂದು ರಾಯಘರದಲ್ಲಿ ಜನಿಸಿದರು. ಕಥಕ್ ನೃತ್ಯದ ‘ಕಲ್ಕಾ ಬಿಂದಾದಿನ್ ಘರಾನಾ’ವನ್ನು ಅತ್ಯಂತ ಪ್ರಸಿದ್ಧಿಪಡಿಸಿದ ಖ್ಯಾತಿ ಬಿರ್ಜು ಮಹಾರಾಜ್ ಅವರದ್ದು. ಕಥಕ್ ನೃತ್ಯ ಅವರ ಕುಟುಂಬದಲ್ಲಿ ವಂಶಪಾರಂಪರ್ಯವಾಗಿ ಬಂದದ್ದು. ಅವರ ಕುಟುಂಬದವರೆಲ್ಲ ರಾಜಮನೆತನದ ಆಸ್ಥಾನ ವಿದ್ವಾಂಸರೆಂದು ಪ್ರಖ್ಯಾತರು. ಅಚ್ಚನ್ ಮಹಾರಾಜ್ ಎಂದು ಪ್ರಖ್ಯಾತರಾದ ಅವರ ತಂದೆ ಜಗನ್ನಾಥ್ ಮಹಾರಾಜ್ ಹಾಗೂ ಚಿಕ್ಕಪ್ಪಂದಿರಾದ ಶಂಭು ಮಹಾರಾಜ್, ಲಚ್ಚು ಮಹಾರಾಜ್ ಇವರಲ್ಲಿ ಪ್ರತಿಯೋರ್ವರೂ ಮಹಾನ್ ನೃತ್ಯ ಕಲಾವಿದರೇ. ಬಿರ್ಜು ಮಹಾರಾಜ್ ಅವರಿಗೆ ಅವರ ತಂದೆಯೇ ಗುರು.
ಬಿರ್ಜು ಮಹಾರಾಜ್ ತಮ್ಮ ಏಳನೆಯ ಕಿರುವಯಸ್ಸಿನಲ್ಲೇ ಮೊದಲ ನೃತ್ಯ ಪ್ರದರ್ಶನ ನೀಡಿದರು. ಅವರು ಒಂಭತ್ತು ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು. ಹೀಗಾಗಿ ಅವರ ಕುಟುಂಬ ದೆಹಲಿಗೆ ವಲಸೆ ಬಂತು. ಬಿರ್ಜು ಮಹಾರಾಜ್ ಅವರಿಗೆ ನೃತ್ಯವೇ ಪ್ರಥಮ ಆಸಕ್ತಿಯಾದರೂ, ಅವರಿಗೆ ಹಿಂದೂಸ್ಥಾನಿ ಸಂಗೀತ ಗಾಯನದಲ್ಲೂ ಅದ್ಭುತವಾದ ಪಾಂಡಿತ್ಯವಿತ್ತು. ಅನೇಕ ವಾದ್ಯಗಳ ವಾದನದಲ್ಲೂ ಅವರಿಗೆ ಅಪ್ರತಿಮವೆನಿಸುವಂತಹ ಪಾಂಡಿತ್ಯವಿತ್ತು. ಕಥಕ್ ನೃತ್ಯದ ಮೂಲಕ ಅನೇಕ ನೃತ್ಯ ರೂಪಕಗಳನ್ನು ಮತ್ತು ನೃತ್ಯ ನಾಟಕಗಳನ್ನು ಸೃಷ್ಟಿಸುವುದರ ಮೂಲಕ ಬಿರ್ಜು ಮಹಾರಾಜ್ ಕಥಕ್ ನೃತ್ಯಕ್ಕೆ ವ್ಯಾಪಕ ವಿಸ್ತಾರವನ್ನು ತಂದುಕೊಟ್ಟರು.
‘ಕಲಾಶ್ರಮ’ ನೃತ್ಯ ಶಿಕ್ಷಣಕ್ಕೆ ಬಿರ್ಜು ಮಹಾರಾಜ್ ಅವರ ಕೊಡುಗೆ ಮಹತ್ವಪೂರ್ಣವಾದುದು. ಬಿರ್ಜು ಮಹಾರಾಜ್ ಅವರು ವಿಶ್ವದಾದ್ಯಂತ ಸಂಚರಿಸಿ ಸಹಸ್ರಾರು ನೃತ್ಯ ಪ್ರದರ್ಶನಗಳನ್ನು ನೀಡುವುದರ ಜೊತೆಗೆ ಕಥಕ್ ವಿದ್ಯಾರ್ಥಿಗಳಿಗಾಗಿ ಅಸಂಖ್ಯಾತ ಶಿಕ್ಷಣ ಶಿಬಿರಗಳನ್ನೂ ನಡೆಸಿದ್ದರು. ಬಿರ್ಜು ಮಹಾರಾಜ್ ತಮ್ಮ ಹದಿಮೂರನೆಯ ಎಳೆಯ ವಯಸ್ಸಿನಲ್ಲೇ ದೆಹಲಿಯ ಸಂಗೀತ ಭಾರತಿಯಲ್ಲಿ ನೃತ್ಯ ಶಿಕ್ಷಣ ನೀಡಲು ಪ್ರಾರಂಭಿಸಿದರು. ತಮ್ಮ ಚಿಕ್ಕಪ್ಪನವರಾದ ಶಂಭು ಮಹಾರಾಜ್ ಅವರೊಂದಿಗೆ ಭಾರತೀಯ ಕಲಾಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಬಿರ್ಜು ಮಹಾರಾಜ್, ಮುಂದೆ ನವದೆಹಲಿಯ ಕಥಕ್ ಶಿಕ್ಷಣ ಕೇಂದ್ರದ ಶಿಕ್ಷಕರಾಗಿ ಮತ್ತು ಕ್ರಮೇಣವಾಗಿ ಅದರ ಪ್ರಧಾನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ 1998ರ ವರ್ಷದಲ್ಲಿ ನಿವೃತ್ತಿಯ ನಂತರದಲ್ಲಿ ತಮ್ಮದೇ ಆದ ‘ಕಲಾಶ್ರಮ’ ನೃತ್ಯ ಕಲಾಶಾಲೆಯನ್ನು ಹುಟ್ಟುಹಾಕಿದರು.
ಬಿರ್ಜು ಮಹಾರಾಜ್ ಅವರು ಸತ್ಯಜಿತ್ ರೇ ಅವರ ಶತರಂಜ್ ಖಿಲಾರಿ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡುವುದರ ಜೊತೆಗೆ ಗಾಯನವನ್ನೂ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಸ್ಲಿಂ ಟೋಪಿ ಧರಿಸಿ `ಕವ್ವಾಲಿ' ಕಾರ್ಯಕ್ರಮದಲ್ಲಿ ಭಾಗಿಯಾದ ಬಿಜೆಪಿ ಸಚಿವ.

Tue Jan 17 , 2023
ಬೆಂಗಳೂರು : ರಾಜ್ಯದ ಬಿಜೆಪಿ ಸಚಿವರೊಬ್ಬರು ಮುಸ್ಲಿಂ ಸಮುದಾಯದ ಒಲೈಕೆಗೆ ಮುಂದಾಗಿದ್ದು, ಟೋಪಿ ಧರಿಸಿ ಮುಸ್ಲಿಂ ಸಮುದಾಯದ ಕವ್ವಾಲಿ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಅವರ ಪುತ್ರ ನಿತಿನ್ ಪುರುಷೋತ್ತಮ್ ಭಾಗಿಯಾಗಿದ್ದಾರೆ. ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಿನ್ನೆ ರಾತ್ರಿ ಸಚಿವ ಎಂಟಿಬಿ ನಾಗರಾಜ್ ಅವರು ಮುಸ್ಲಿಂ ಸಮುದಾಯದವರಿಗಾಗಿ ಕವ್ವಾಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರು ಟೋಪಿ ಹಾಕಿಕೊಂಡು ಮಧ್ಯರಾತ್ರಿಯವರೆಗೂ ಕಾರ್ಯಕ್ರಮದಲ್ಲಿ […]

Advertisement

Wordpress Social Share Plugin powered by Ultimatelysocial