ಇ-ಬಸ್‌ ಓಡಿಸಲಿರುವ ಪ್ರಥಮ ಮಹಿಳಾ ಚಾಲಕಿ, ಯಾರ ಗೊತ್ತಾ?

ಬೆಂಗಳೂರು, ಜನವರಿ 20: ಪುರುಷರಂತೆ ಎಲ್ಲ ಕ್ಷೇತ್ರಗಳಲ್ಲಿ ತೊಡಗಿರುವ ಮಹಿಳೆಯರು ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇದೀಗ ಮೊದಲ ಭಾರಿಗೆ ಸರ್ಕಾರಿ ಇ ಬಸ್‌ಗಳ ಚಾಲನೆ ಮಾಡಲು ಮಹಿಳೆಯೊಬ್ಬರು ಸಜ್ಜಾಗುತ್ತಿದ್ದಾರೆ.

ಹೌದು, ಮಹಿಳೆಯರು ಇನ್ನುಮುಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಇ ಬಸ್‌ಗಳನ್ನು ಓಡಿಸಲು ತಯಾರಿ ನಡೆಸಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರು ಮಹಾನಗರಾದ್ಯಂತ ಮಹಿಳೆಯರೇ ಬಿಎಂಟಿಸಿ ಇ ಬಸ್‌ಗಳನ್ನು ಚಲಾಯಿಸಲಿದ್ದು, ಇದರ ಭಾಗವಾಗಿ ಫೆಬ್ರುವರಿ ತಿಂಗಳಲ್ಲಿ ಮೊದಲ ಇ ಬಸ್ ಮಹಿಳಾ ಚಾಲಕಿ ಬೆಂಗಳೂರಿನ ರಸ್ತೆಗೆ ಇಳಿಯಲಿದ್ದಾರೆ.

32 ವರ್ಷ ಮಹಿಳೆಯೊಬ್ಬರು ಬಿಎಂಟಿಸಿ ಇ ಬಸ್ ಚಾಲನೆಗೆ ತರಬೇತಿ ಪಡೆಯುತ್ತಿದ್ದಾರೆ. ಅವರಿಗೆ ಬಿಎಂಟಿಸಿ ಸಂಸ್ಥೆ ಮುಂದಿನ ಫೆಬ್ರುವರಿ ತಿಂಗಳಲ್ಲಿ ಇ ಬಸ್ ಚಾಲನೆಗೆ ಮುಕ್ತ ಅವಕಾಶ ನೀಡುವ ಸಾಧ್ಯತೆ ಇದೆ. ನಗರದ ಪ್ರಯಾಣಿಕರಿಗೆ ಇಂಧನ ಸಹಿತ ಬಸ್ ವ್ಯವಸ್ಥೆ ಹೊಂದಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಂತರ ಇ ಬಸ್ ಹೊಂದುವಂತಾಯಿತು. ಇದೀಗ ಮೊದಲ ಮಹಿಳಾ ಇ ಬಸ್‌ ಚಾಲಕಿ ಹೊಂದಿದ ಏಕೈಕ ನಿಗಮವಾಗಿ ಹೊರ ಹೊಮ್ಮಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಚಾಲನಾ ತರಬೇತಿ ವಿಡಿಯೋದಲ್ಲಿ ಏನಿದೆ?

ಈ ಕುರಿತ ವಿಡಿಯೋವೊಂದು ಟ್ವೀಟ್ ಮಾಡಲಾಗಿದೆ. ಅದರಲ್ಲಿ ನೀಲಿ ವರ್ಣದ ಬಿಎಂಟಿಸಿ ಇ-ಬಸ್‌ ನಲ್ಲಿ ಈ 32 ವರ್ಷ ಮಹಿಳೆಗೆ ಚಾಲಕರೊಬ್ಬರು ಚಾಲನಾ ತರಬೇತಿ ನೀಡುತ್ತಿದ್ದಾರೆ. ಬಸ್ ಆನ್‌ ಆಂಡ್ ಆಪ್, ಸ್ಕೇರಿಂಗ್ ನಿರ್ವಹಣೆ, ಚಾಲಕನ ಸೀಟು ಮುಂದಿರುವ ಸಿಗ್ನಲ್ ಗುರುತುಗಳು ಮತ್ತು ಅವು ಏನನ್ನು ಸೂಚಿಸುವತ್ತೆ ಹಾಗೂ ಅವುಗಳ ಬಳಕೆ ಹೇಗೆ ಎಂದು ತಿಳಿಸುತ್ತಿದ್ದಾರೆ.

ಬಸ್ ಓಡಿಸಲು ಬೇಕಾದ ಚಾಲನಾ ಕೌಶಲ್ಯಗಳು, ತುರ್ತು ಸಂದರ್ಭದಲ್ಲಿ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದೆಲ್ಲವನ್ನು ಈ ಮಹಿಳೆಗೆ ತಿಳಿಸಿಕೊಡಲಾಗುತ್ತಿದೆ. ಇದಿನ್ನು ತರಬೇತಿ ಹಂತವಾಗಿದ್ದು, ಫೆಬ್ರುವರಿಯಲ್ಲಿ ಅವರಿಗೆ ಮುಕ್ತ ಅವಕಾಶ ನೀಡುವ ಚಿಂತನೆಯಲ್ಲಿ ಸಂಸ್ಥೆ ಇದೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರಬೇಕು.

Fri Jan 20 , 2023
    ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರಬೇಕು ಇಲ್ಲವೇ ಮುಖ್ಯಮಂತ್ರಿಯವರ ಬುಲ್ಡೋಜರ್ ಭೀತಿಯನ್ನು ಎದುರಿಸಬೇಕಾಗುತ್ತದೆ ಎಂದು ಮಧ್ಯಪ್ರದೇಶದ ಸಚಿವರೊಬ್ಬರು ರಾಜ್ಯದಲ್ಲಿನ ಕಾಂಗ್ರೆಸ್ ಪದಾಧಿಕಾರಿಗಳನ್ನು ಬೆದರಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಬುಧವಾರ ಇಲ್ಲಿನ ರುಥಿಯೈ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಧ್ಯಪ್ರದೇಶದ ಪಂಚಾಯತ್ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ನೀಡಿರುವ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತರ ಕೆಲವು ಬಿಜೆಪಿ ಆಡಳಿತದ ರಾಜ್ಯಗಳಂತೆ, ವಿವಿಧ ಅಪರಾಧಗಳನ್ನು ಎದುರಿಸುತ್ತಿರುವ […]

Advertisement

Wordpress Social Share Plugin powered by Ultimatelysocial