ಪ್ರಧಾನಿ ಕ್ಷಮೆ ಯಾಚಿಸುವುದು ನಮಗೆ ಇಷ್ಟವಿಲ್ಲ, ವಿದೇಶದಲ್ಲಿ ಅವರ ಹೆಸರು ಕೆಡಿಸಲು ಬಯಸುವುದಿಲ್ಲ: ಟಿಕಾಯತ್

ಪ್ರಧಾನಿ ಕ್ಷಮೆ ಯಾಚಿಸುವುದು ನಮಗೆ ಇಷ್ಟವಿಲ್ಲ, ವಿದೇಶದಲ್ಲಿ ಅವರ ಹೆಸರು ಕೆಡಿಸಲು ಬಯಸುವುದಿಲ್ಲ: ಟಿಕಾಯತ್

ಹೊಸದಿಲ್ಲಿ: “ರೈತರು ಪ್ರಧಾನಿ ನರೇಂದ್ರ ಮೋದಿಯವರ ಕ್ಷಮೆಯಾಚನೆಯನ್ನು ಬಯಸುವುದಿಲ್ಲ. ವಿದೇಶದಲ್ಲಿ ಅವರ ಪ್ರತಿಷ್ಠೆಯನ್ನು ಹಾಳುಮಾಡಲು ಇಷ್ಟಪಡುವುದಿಲ್ಲ” ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ರವಿವಾರ ಹೇಳಿದರು.

ಸುಮಾರು ಒಂದು ವರ್ಷದಿಂದ ಹಲವಾರು ರೈತ ಸಂಘಗಳು ಪ್ರತಿಭಟನೆ ನಡೆಸುತ್ತಿದ್ದ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರಕಾರವು ರದ್ದುಗೊಳಿಸಿದ ಹಲವು ದಿನಗಳ ನಂತರ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ.

‘ಪ್ರಧಾನಿ ಕ್ಷಮೆ ಯಾಚಿಸುವುದು ನಮಗೆ ಇಷ್ಟವಿಲ್ಲ., ವಿದೇಶದಲ್ಲಿ ಅವರ ಹೆಸರು ಕೆಡಿಸಲು ನಾವು ಬಯಸುವುದಿಲ್ಲ., ಯಾವುದೇ ನಿರ್ಧಾರ ತೆಗೆದುಕೊಂಡರೆ ರೈತರ ಒಪ್ಪಿಗೆಯಿಲ್ಲದೆ ಅದನ್ನು ಮಾಡಲಾಗುವುದಿಲ್ಲ. ನಾವು ಪ್ರಾಮಾಣಿಕವಾಗಿ ಹೊಲಗಳಲ್ಲಿ ದುಡಿಯುತ್ತಿದ್ದೇವೆ. ಆದರೆ ದಿಲ್ಲಿ ನಮ್ಮ ಬೇಡಿಕೆಗಳಿಗೆ ಗಮನ ಕೊಡಲಿಲ್ಲ” ಎಂದು ಬಿಕೆಯು ನಾಯಕ ಟ್ವೀಟ್‌ನಲ್ಲಿ ಹೇಳಿದ್ದಾರೆ

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೂರು ರದ್ದಾದ ಕೃಷಿ ಕಾನೂನುಗಳ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಕಾಯತ್, ” ಈ ಹೇಳಿಕೆಯು ರೈತರನ್ನು ಮೋಸಗೊಳಿಸುವ ಉದ್ದೇಶವನ್ನು ಹೊಂದಿದೆ ಹಾಗೂ ಪ್ರಧಾನಿಯನ್ನು ಅವಮಾನಿಸುತ್ತದೆ” ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿಗಳಿಗೆ ನೀಟ್ ಕೊಟ್ಟ ಶಾಕ್: ಸೀಟ್ ಬಿಟ್ಟರೇ ಲಕ್ಷ ಲಕ್ಷ ದಂಡ

Mon Dec 27 , 2021
ಬೆಂಗಳೂರು:ಸಿಇಟಿ ಮೂಲಕ ಸೀಟ್ ಪಡೆಯುವ ವಿದ್ಯಾರ್ಥಿಗಳು ಕೊನೆ ಕ್ಷಣದಲ್ಲೋ ಇಲ್ಲವೇ ಅವಧಿ ಮುಗಿದ ಬಳಿಕ ಸೀಟ್ ಬಿಟ್ಟರೇ ಅವರು ಲಕ್ಷಾಂತರ ರೂಪಾಯಿ ದಂಡ ಕಟ್ಟಲೇಬೇಕಾಗುತ್ತದೆ. ಈ ಮೂಲಕ ಈಗ ವಿದ್ಯಾರ್ಥಿಗಳಿಗೆ ಹೊಸ ಸಂಕಷ್ಟ ಶುರು ಆಗಿದೆ. ನೀಟ್ ಮೂಲಕ ಸೀಟ್ ಪಡೆದು ಕೆಲವ್ರು ಕೊನೆ ಕ್ಷಣದಲ್ಲಿ ಪಡೆದ ಸೀಟ್ ಬಿಟ್ಟು ಹೋಗಿ ಬಿಡುತ್ತಿದ್ದರು. ಆದರೆ ಈಗ ಅದಕ್ಕೆ ಅವಕಾಶವೇ ಇಲ್ಲ. ಸೀಟ್ ಪಡೆದ ವಿದ್ಯಾರ್ಥಿಗಳು ಇನ್ನೇನೂ ಕೊನೆ ದಿನ ಇದೆ […]

Advertisement

Wordpress Social Share Plugin powered by Ultimatelysocial