ನಟ ಧನ್ವೀರ್‌ ಹಾಗೂ ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಬೈ ಟು ಲವ್‌’

ನಟ ಧನ್ವೀರ್‌ ಹಾಗೂ ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಬೈ ಟು ಲವ್‌’ ಸಿನಿಮಾದ ಮೊದಲ ಟ್ರೇಲರ್‌ ಬಿಡುಗಡೆಯಾಗಿದೆ. ಸಿನಿಮಾದ ಟೈಟಲ್ಲೇ ಹೇಳುವಂತೆ, ಒಂದು ಲವ್‌ ಸ್ಟೋರಿ ಅದರ ಹಿಂದಿನ ಮುದ್ದಾಟ, ಕಿತ್ತಾಟ, ಫ್ಯಾಮಿಲಿ ಸೆಂಟಿಮೆಂಟ್‌, ಒಂದಷ್ಟು ಎಮೋಶನ್ಸ್‌, ಆಯಕ್ಷನ್‌, ಕಾಮಿಡಿ ಹೀಗೆ ಎಲ್ಲ ಥರದ ಎಂಟರ್‌ಟೈನ್ಮೆಂಟ್‌ ಅಂಶಗಳಿರುವ ಸಣ್ಣ ಝಲಕ್‌ ಅನ್ನು “ಬೈ ಟು ಲವ್‌’ ಟ್ರೇಲರ್‌ನಲ್ಲಿ ತೆರೆದಿಡಲಾಗಿದೆ.ಕ್ಲಾಸ್‌ ಮತ್ತು ಮಾಸ್‌ ಆಡಿಯನ್ಸ್‌ ಎರಡೂ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು “ಬೈ ಟು ಲವ್‌’ ಟ್ರೇಲರ್‌ ಬಿಡುಗಡೆ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ. “ಬೈ ಟು ಲವ್‌’ ಚಿತ್ರದ ತಾರಾಗಣ, ಲೊಕೇಶನ್ಸ್‌, ಮೇಕಿಂಗ್‌ ಮತ್ತು ತಾಂತ್ರಿಕ ಕೆಲಸಗಳು ಟ್ರೇಲರ್‌ನಲ್ಲಿ ಎದ್ದು ಕಾಣುತ್ತಿದ್ದು, ಮೊದಲ ನೋಟದಲ್ಲೇ “ಬೈ ಟು ಲವ್‌’ ಟ್ರೇಲರ್‌ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದೆ.“ಕೆವಿಎನ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದು, ಹರಿ ಸಂತೋಷ್‌ ನಿರ್ದೇಶನವಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಜಪೂತ್ ಸಾವಿನ ಪ್ರಕರಣವನ್ನು ನಿಭಾಯಿಸಿದ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ ಅಭಿಮಾನಿಗಳು;

Mon Feb 14 , 2022
ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾದ ಮಾತಿನ ಸಮರ ನಡೆದಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳು ದೀಪಿಕಾ ಪಡುಕೋಣೆ ಅವರ ಇತ್ತೀಚಿನ ಚಿತ್ರ ಗೆಹ್ರೈಯಾನ್‌ಗೆ ಉತ್ಸಾಹವಿಲ್ಲದ ಸ್ವಾಗತವನ್ನು ಆಚರಿಸುತ್ತಿದ್ದಾರೆ, ಈ ಅವಕಾಶವನ್ನು ಬಳಸಿಕೊಂಡು ನಟನನ್ನು ಟೀಕಿಸಲು ಈ ಹಿಂದೆ ರಜಪೂತ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ರಜಪೂತ್ ಸಾವಿನ ಪ್ರಕರಣವನ್ನು ನಿಭಾಯಿಸಿದ ರೀತಿಗೆ ರಜಪೂತ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬದಲಾವಣೆಗಾಗಿ ಪ್ರತಿಭಟನೆಗಳನ್ನು ಆಯೋಜಿಸುವುದರ ಹೊರತಾಗಿ, ಈ ಹಿಂದೆ ನಟನನ್ನು ಕೀಳಾಗಿ […]

Advertisement

Wordpress Social Share Plugin powered by Ultimatelysocial