ಹಿಂಡಿದ ನಿಂಬೆ ಸಿಪ್ಪೆಯನ್ನು ಕೂಡಲೇ ಬೀಸಾಡಬೇಡಿ, ಬದಲಿಗೆ ಹೀಗೆ ಮಾಡಿ

ಅಡುಗೆಯಲ್ಲಿ ನಿತ್ಯವೂ ವಿವಿಧ ರೀತಿಯಲ್ಲಿ ನಿಂಬೆಹಣ್ಣನ್ನು ಬಳಸುತ್ತಲೇ ಇರುತ್ತೇವೆ. ನಿಂಬೆಹಣ್ಣನ್ನು ಹಿಂಡಿದ ಮೇಲೆ ಕೂಡಲೇ ಬೀಸಾಡಬೇಡಿ. ಹಿಂಡಿದ ನಿಂಬೆಹಣ್ಣಿನ ಸಿಪ್ಪೆಯಿಂದಲೂ ಅನೇಕ ಪ್ರಯೋಜನಗಳಿವೆ.ಸಿಟ್ರಿಕ್‌ ಅಂಶವಿರುವ ನಿಂಬೆಹಣ್ಣು ಅಡುಗೆ ತಯಾರಿಸಲು ಬಳಸುವುದರ ಜೊತೆಗೆ ಇನ್ನಿತೆ ಕೆಲಸಕ್ಕೂ ಅತೀ ಉಪಯುಕ್ತವಾಗಿದೆ.ಬಟ್ಟೆಯ ಮೇಲೆ ಬಿದ್ದ ಅಡುಗೆ ಕಲೆಯನ್ನು ತೆಗೆಯಲು ನಿಂಬೆ ಹಣ್ಣಿನ ಸಿಪ್ಪೆ ಒಳ್ಳೆಯ ಕೆಲಸ ಮಾಡುತ್ತದೆ. ಬಟ್ಟೆ ಮೇಲೆ ಊಟದ ಕಲೆ ಬಿದ್ದರೆ ಕೂಡಲೇ ಸ್ವಲ್ಪ ಉಪ್ಪು ಹಾಕಿ ಕಲೆ ಇರುವ ಜಾಗಕ್ಕೆ ನಿಂಬೆ ಸಿಪ್ಪೆಯನ್ನು ಉಜ್ಜಿ. ಕಲೆ ಮಾಯವಾಗುತ್ತೆ.ಎರಡು ಮೂರು ನಿಂಬೆ ಸಿಪ್ಪೆಯನ್ನು ಒಂದು ಪಿಂಗಾಣಿ ಪಾತ್ರೆಗೆ ಹಾಕಿ. ಮನೆಯ ಮೂಲೆಯಲ್ಲಿ ಇಡಿ. ಇದರಿಂದಾಗ ಮನೆಯ ತುಂಬಾ ಮಂದವಾಗಿ ಸುವಾಸನೆ ಬೀರುತ್ತದೆ. ಹೀಗೆ ಮಾಡುವುದರಿಂದ ಕ್ರಿಮಿ ಕೀಟಗಳೂ ಮನೆಯೊಳಗೆ ಪ್ರವೇಶಿಸುವುದಿಲ್ಲ. ಕೆಲವೊಮ್ಮೆ ಬೆಳ್ಳುಳ್ಳಿ, ಈರುಳ್ಳಿ ಸಿಪ್ಪೆ ಸುಲಿದಾಗಲೋ ಅಥವಾ ಮಾಂಸದ ಅಡುಗೆ ಮಾಡಿದಾಗ ಕೈಗಳು ವಾಸನೆಯುಕ್ತವಾಗಿರುತ್ತವೆ. ಇಂತಹ ಸಮಯದಲ್ಲಿ ಉಳಿದ ಲಿಂಬೆಹಣ್ಣಿನ ಸಿಪ್ಪೆಯನ್ನು ಕೈಗಳಿಗೆ ಚೆನ್ನಾಗಿ ಉಜ್ಜಿಕೊಳ್ಳಿ. ಇದರಿಂದ ವಾಸನೆ ದೂರವಾಗುತ್ತದೆ. ಲಿಂಬೆಹಣ್ಣಿನ ಸಿಪ್ಪೆಯನ್ನು ದೇವರ ಮೂರ್ತಿಗಳನ್ನು ತೊಳೆಯಲು ಬಳಸಿ. ಇದರಲ್ಲಿರುವ ಹುಳಿ ಅಂಶ ತಾಮ್ರ ಅಥವಾ ಬೆಳ್ಳಿಯ ಮೂರ್ತಿಗಳನ್ನು ಪಳ ಪಳ ಹೊಳೆಯುವಂತೆ ಮಾಡುತ್ತದೆ. ರಸ ಹಿಂಡಿ ಉಳಿದ ನಿಂಬೆಹಣ್ಣಿನ ಸಿಪ್ಪೆಯನ್ನು ಸ್ಕ್ರಬ್‌ ರೀತಿಯಲ್ಲಿ ಬಳಸಬಹುದು. ಕೈ ಕಾಲು ಮುಖಕ್ಕೂ ನಿಂಬೆಹಣ್ಣಿನ ಸಿಪ್ಪೆಯನ್ನು ಸ್ಕ್ರಬ್‌ ಮಾಡಿಕೊಳ್ಳಬಹುದು. ಆದರೆ ಸೂಕ್ಷ್ಮ ಚರ್ಮ ಇದ್ದವರು ಮತ್ತು ಚರ್ಮದ ಅಲರ್ಜಿ ಇದ್ದವರು ಇದನ್ನು ಅವೈಡ್‌ ಮಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ನಿವಾಸಿಗಳು ಭಯಗೊಂಡ ಕಿರುಚಿದ ಘಟನೆ ̤

Sat Feb 5 , 2022
ಬೆಂಗಳೂರು : ನಾಲ್ವರು ಆತ್ಮಹತ್ಯೆ  ಮಾಡಿಕೊಂಡ ಮನೆಯಲ್ಲಿ ಬೆಳಕು ಕಂಡು ಸ್ಥಳೀಯ ನಿವಾಸಿಗಳು ಭಯಗೊಂಡ ಕಿರುಚಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ  ಯಲ್ಲಿ ನಡೆದಿದೆ.ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಈ ನಿವಾಸದಲ್ಲಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು.ಪರಿಣಾಮ ಸದ್ಯ ಮನೆ  ಖಾಲಿ ಇದೆ. ಕಳೆದ ನಾಲ್ಕು ತಿಂಗಳಿನಿಂದ ಮನೆಯ ವಿದ್ಯುತ್ ಸಂಪರ್ಕ ಸಹ ಕಡಿತಗೊಳಿಸಲಾಗಿದೆ. ವಿದ್ಯುತ್ ಕಡಿತವಾಗಿದ್ದರಿಂದ ದೆವ್ವದ ಮನೆ ಎಂದೇ ಬಿಂಬಿತವಾಗಿತ್ತು. ಆದ್ರೆ ನಿನ್ನೆ ಮನೆಯಲ್ಲಿ ಬೆಳಕು ಕಂಡ ಸ್ಥಳೀಯರು ಕುಟುಂಬಸ್ಥರಿಗೆ […]

Advertisement

Wordpress Social Share Plugin powered by Ultimatelysocial