ಅಶ್ವಮೇಧ ಯಾಗ ಆರಂಭ : ಇಬ್ರಾಹಿಂ

ಬೆಂಗಳೂರು, ಮೇ 14- ಜನತಾ ಜಲಧಾರೆ ಸಮಾವೇಶದ ಮೂಲಕ ಅಶ್ವಮೇಧ ಯಾಗ ಶುರು ಮಾಡಿದ್ದೇವೆ ನಿಮ್ಮ ಸಹಕಾರ ನಮಗಿರಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಮೇಕೆ ದಾಟಿಸೋದಿಲ್ಲ, ಸಿಂಹ ದಾಟಿಸುವವರು.

ನಮ್ಮ ಹುಲಿ ಕುಮಾರಸ್ವಾಮಿ, ಹುಲಿಯನ್ನು ದಾಟಿಸುತ್ತೇವೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

ಕೇಂದ್ರ ಸರ್ಕಾರ ಎಲïಐಸಿ ಸೇರಿದಂತೆ ಎಲ್ಲಾ ಸರ್ಕಾರಿ ಸ್ವಮ್ಯದ ಕಂಪನಿಗಳನ್ನು ಮಾರುತ್ತಿದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಏನೂ ಮಾರಲಿಲ್ಲ. ದೇವೇಗೌಡರು ಬಂದಾಗ ಮೋದಿ ಕೂಡ ಎದ್ದು ನಿಂತು ಗೌರವ ಕೊಡುತ್ತಾರೆ. ಇಡಿ, ಸಿಡಿ ಏನಾದರೂ ಆರೋಪ ಗೌಡರ ಮೇಲಿದೆಯಾ ಎಂದು ಪ್ರಶ್ನಿಸಿದರು.

ದೇವೇಗೌಡರನ್ನು ಅಧಿಕಾರದಿಂದ ಇಳಿಸಿದ್ದಾ.. ಕಾಂಗ್ರೆಸ್‍ಗೆ ದರಿದ್ರ ಬಂದಿದೆ. ಅಂದಿನಿಂದ ಇವತ್ತಿನವರೆಗೂ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಬರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಗುಜರಾತ್ ಮಾಡೆಲ್ ನಮಗೆ ಬೇಡ. ಗುಜರಾತ್ ನವರು ಪಾನಿಪೂರಿ ಮಾರುತ್ತಾರೆ. ಕನ್ನಡಿಗರಾರು ಪಾನಿಪುರಿ ಮಾರುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದ ಬಸವನಬಾಗೇವಾಡಿ, ಬಸವನಕಲ್ಯಾಣ ಮತ್ತು ಕಲಬುರಗಿಯ ಬಂಡೇನವಾಜ್ ಸನ್ನಿಗೆ ಭೇಟಿ ನೀಡಿದ ಬಳಿಕ ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸಲು ಪ್ರವಾಸ ಕೈಗೊಳ್ಳುತ್ತೇನೆ ಎಂದು ಹೇಳಿದರು. ರಾಜ್ಯದಲ್ಲಿ ಮತಗಟ್ಟೆ ಸಮಿತಿಗಳನ್ನು ರಚಿಸಬೇಕು. ಪಕ್ಷವನ್ನು ಸಧೃಢಗೊಳಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕು ಎಂದರು.

ಪಂಜಾಬ್‍ನ ಭತ್ತದ ತಳಿಗೆ ದೇವೇಗೌಡ ಹೆಸರನ್ನು ಇಡಲಾಗಿದೆ. ಅವರ ಋಣವನ್ನು ನಾವೆಲ್ಲಾ ತೀರಿಸಬೇಕಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಸೋನಿಯಾ ಮನೆಗೆ ಉದೋ ಉದೋ ಎಂದು ಸಿದ್ದರಾಮಯ್ಯ ತಿರುಗುತ್ತಿದ್ದಾರೆ. ಜೆಡಿಎಸ್‍ನಲ್ಲಿ ಅಂತಹ ಸ್ಥಿತಿ ಇಲ್ಲ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪರಾಧಿಗಳಿಗೆ ದೇಶದ ಚುಕ್ಕಾಣಿ ಕೊಡುವ ಬದಲು ಅಣುಬಾಂಬ್‌ ಹಾಕುವುದೇ ಮೇಲು:

Sat May 14 , 2022
  ಇಸ್ಲಮಾಬಾದ್‌: ಅಪರಾಧಿಗಳಿಗೆ ಪಾಕಿಸ್ತಾನದ ಚುಕ್ಕಾಣಿಯನ್ನು ಕೊಡುವ ಬದಲು ದೇಶದ ಮೇಲೆ ಅಣುಬಾಂಬ್‌ ಹಾಕುವುದು ಹೆಚ್ಚು ಉತ್ತಮ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಶುಕ್ರವಾರ ಮಾಧ್ಯಮದ ಜೊತೆ ಮಾತನಾಡಿದ ಇಮ್ರಾನ್‌ ಖಾನ್‌, ಪಾಕಿಸ್ತಾನ ಸೇನೆಯಿಂದ ದೂರವಾಣಿ ಕರೆ ಮತ್ತು ಸಂದೇಶಗಳು ಬರುತ್ತಿವೆ. ಆದರೆ ಅವರ ನಂಬರ್‌ಗಳನ್ನು ಬ್ಲಾಕ್‌ ಮಾಡಿದ್ದೇನೆ. ಚುನಾವಣೆ ಘೋಷಣೆಯಾಗುವ ವರೆಗೆ ಯಾರೊಬ್ಬರ ಜೊತೆಗೂ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರಧಾನಿ ಹುದ್ದೆ ಕಳೆದುಕೊಂಡಿದ್ದರ ಹಿಂದೆ ಅಮೆರಿಕ […]

Advertisement

Wordpress Social Share Plugin powered by Ultimatelysocial