ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಯಾಣಿಸುತ್ತಿದ್ದ ಕಾರು ಅಪಘಾತ!

ಪ್ರಧಾನಿ ಮೋದಿ ಸಹೋದರ ಪ್ರಹ್ಹಾದ್‌ ಮೋದಿ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತವಾಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ ಎನ್ನಲಾಗಿದೆ.

ಪ್ರಹ್ಹಾದ್‌ ಮೋದಿ ಅವರು ತಮ್ಮ ಪುತ್ರ ಹಾಗೂ ಸೊಸೆ ಜೊತೆಗೆ ಮರ್ಸಿಸೀಸ್‌ ಬೆಂಚ್‌ ಕಾರಿನಲ್ಲಿ ಮೈಸೂರಿನಿಂದ ಬಂಡೀಪುರ ಕಡೆಗೆ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.ಈ ವೇಳೆ ಮೈಸೂರು ಬಳಿಯ ಕಡಕೋಳ ಬಳಿ ಕಾರು ಅಪಘಾತವಾಗಿದ್ದು, ಘಟನೆಯಲ್ಲಿ ಪ್ರಹ್ಹಾದ್‌ ಮೋದಿ ಅವರ ಮಗ ಹಾಗೂ ಸೊಸೆಗೆ ಗಂಭಿರವಾದ ಗಾಯವಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಮೈಸೂರು ಜಿಲ್ಲಾ ಎಸ್‌ಪಿ ಕೂಡಲೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ ಅಂತ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹುಣಸೆ ಹಣ್ಣಿನಲ್ಲಿದೆ ಆರೋಗ್ಯಕಾರಿ ಅಂಶಗಳು ಯಾವುವು ಗೊತ್ತಾ?

Tue Dec 27 , 2022
ಹುಣಸೆ ಹಣ್ಣು ಬಿ ಜೀವಸತ್ವಗಳು, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಬಿ 5, ರೈಬೋಫ್ಲಾವಿನ್, ಥಯಾಮಿನ್, ನಿಯಾಸಿನ್ ಮತ್ತು ಫೋಲೇಟ್‌ ಹೊಂದಿದೆ. ಹುಣಸೆಹಣ್ಣು ಕೋಲಿನ್, ಬೀಟಾ ಕ್ಯಾರೋಟಿನ್, ಕಬ್ಬಿಣ, ಮೆಗ್ನೀಸಿಯಮ್ ಇದ್ದು, ಒಟ್ಟಾರೆ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.ಹುಣಸೆಹಣ್ಣು ಉತ್ಕರ್ಷಣ ನಿರೋಧಕ, ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಹೊಂದಿದೆ. ಗ್ಯಾಸ್, ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ. ಗಂಟಲಿನಿಂದ ಲೋಳೆ ತೆರವುಗೊಳಿಸಲು ಸಹಾಯ […]

Advertisement

Wordpress Social Share Plugin powered by Ultimatelysocial