ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮೋಸ

 

ಫೈನಾನ್ಸ್‌ ಕಂಪನಿಗಳಲ್ಲಿ ಸಾಲ ಬಾಕಿ ಉಳಿದಿರುವ ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಕಲಿ ಎನ್‌ಒಸಿ ಹಾಗೂ ದಾಖಲೆ ಸೃಷ್ಟಿಸಿ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸಿ.ಪ್ರಭಾಕರ (40), ಎಸ್‌. ಪ್ರಕಾಶ್‌ ಅಲಿಯಾಸ್‌ ಚೀಟಿ ಪ್ರಕಾಶ್‌ (33), ಆರ್‌. ಕಿರಣ್‌ (44) ಬಂಧಿತರು. ಆರೋಪಿಗಳು ವಂಚನೆ ಮಾರ್ಗದಲ್ಲಿ ಸಂಪಾದಿಸಿದ್ದ 90 ಲಕ್ಷ ರೂ.ಮೌಲ್ಯದ ವಿವಿಧ ಮಾದರಿಯ ಏಳು ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕೆಲ ತಿಂಗಳ ಹಿಂದೆ ಕುಮಾರ್‌ ಎಂಬುವವರು ಇನ್ಶೂರೆನ್ಸ್‌ ಕಂಪನಿಯ ಆನ್‌ಲೈನ್‌ ಹರಾಜಿನಲ್ಲಿ ಕಾರೊಂದನ್ನು ಖರೀದಿ ಮಾಡಿ ಹಣ ಪಾವತಿಸಿದ್ದರು. ಕಾರಿನ ಮಾಲೀಕತ್ವ ವರ್ಗಾವಣೆಗೆ ಸಂಬಂಧಿಸಿದಂತೆ ತುಮಕೂರಿನ ಆರ್‌ಟಿಒ ಕಚೇರಿಗೆ ತೆರಳಿದಾಗ ಅವರ ಬಳಿಯಿರುವ ಕಾರಿನ ನಂಬರ್‌ ಬೇರೊಂದು ಕಾರಿಗೆ ನೋಂದಣಿ ಆಗಿರುವುದು ಕಂಡು ಬಂದಿತ್ತು. ಹೀಗಾಗಿ, ಕುಮಾರ್‌ ದೂರು ನೀಡಿದ್ದರು.
ಈ ಪ್ರಕರಣದನ್ವಯ ತನಿಖೆ ನಡೆಸಿ ಆರೋಪಿಗಳಾದ ಪ್ರಭಾಕರ್‌ ಮತ್ತು ಇತರರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕುಮಾರ್‌ ಅವರ ಕಾರಿನ ನಂಬರ್‌ಗೆ ನಕಲಿ ದಾಖಲೆ ಸೃಷ್ಟಿಸಿ ಬೇರೊಂದು ಕಾರಿಗೆ ಅದೇ ನಂಬರ್‌ ನೋಂದಣಿ ಮಾಡಿಸಿಕೊಂಡು ಓಡಿಸುತ್ತಿದ್ದ ವಿಚಾರ ಬಾಯ್ಬಿಟ್ಟರು. ಜತೆಗೆ, ಅವರು ಹಲವು ವರ್ಷಗಳಿಂದ ನಡೆಸುತ್ತಿದ್ದ ವಂಚನೆಯೂ ಬಯಲಾಯ್ತು ಎಂದು ಪೊಲೀಸರು ಹೇಳಿದರು ಪ್ರಭಾಕರ್‌ ಹಾಗೂ ಪ್ರಕಾಶ್‌ ಕಾರು ಡೀಲರ್‌ಗಳಾಗಿದ್ದಾರೆ. ಕಿರಣ್‌ ಈ ಹಿಂದೆ ಖಾಸಗಿ ಬ್ಯಾಂಕ್‌ನ ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ, ಸಾಲದ ಕಂತು ಕಟ್ಟದೆ ಫೈನಾನ್ಸ್‌ ಕಂಪೆನಿಗಳಿಗೆ ನೋಟಿಸ್‌ ಪಡೆದಿರುವ ಕಾರು ಮಾಲೀಕರನ್ನು ಗುರಿಯಾಗಿಸಿಕೊಂಡು ಅವರನ್ನು ಸಂಪರ್ಕಿಸಿ ಕಡಿಮೆ ಬೆಲೆಗೆ ಕಾರು ಖರೀದಿಸುತ್ತಿದ್ದರು. ಬಳಿಕ ಫೈನಾನ್ಸ್‌ ಕಂಪನಿಗಳ ಹೆಸರಲ್ಲಿ ನಕಲಿ ಎನ್‌ಓಸಿ ಸೃಷ್ಟಿಸಿ ಅದೇ ಕಾರುಗಳನ್ನು ಬೇರೊಬ್ಬರಿಗೆ ದುಬಾರಿ ಬೆಲೆಗೆ ಮಾರುತ್ತಿದ್ದರು. ಈ ವಂಚನೆ ಜಾಲದಲ್ಲಿ ಇನ್ನೂ ಹಲವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಹಿರಿಯ ಪೊಧಿಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಕಲಿ ಚಿನ್ನ ಅಡ ಇರಿಸಿ ವಂಚನೆ

Sun Jan 1 , 2023
ನಕಲಿ ಚಿನ್ನಾಭರಣ ಅಡವಿಟ್ಟುಕೊಂಡು ಸಂಬಂಧಿಕರಿಗೆ ಸಾಲ ಕೊಟ್ಟು ಅಕ್ರಮ ಎಸಗಿದ್ದ ಕೆಂಗೇರಿಯ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಮಾಜಿ ಮ್ಯಾನೇಜರ್‌ ಟಿ. ಎಲ್‌. ಪ್ರವೀಣ್‌ ಕುಮಾರ್‌ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯದ (ಇಡಿ) ವಿಶೇಷ ನ್ಯಾಯಾಲಯ ಒಪ್ಪಿಗೆ ನೀಡಿದೆ ಆರೋಪಿಗಳಾದ ಟಿ. ಎಲ್‌. ಪ್ರವೀಣ್‌ ಕುಮಾರ್‌, ಎಸ್‌. ಕೆ. ಸುಬ್ರಹ್ಮಣ್ಯ ರೆಡ್ಡಿ, ಆರ್‌. ರಂಗನಾಥ್‌, ನರಸಿಂಹ ಮೂರ್ತಿ, ಶಾಂತ […]

Advertisement

Wordpress Social Share Plugin powered by Ultimatelysocial