ನಕಲಿ ಚಿನ್ನ ಅಡ ಇರಿಸಿ ವಂಚನೆ

ನಕಲಿ ಚಿನ್ನಾಭರಣ ಅಡವಿಟ್ಟುಕೊಂಡು ಸಂಬಂಧಿಕರಿಗೆ ಸಾಲ ಕೊಟ್ಟು ಅಕ್ರಮ ಎಸಗಿದ್ದ ಕೆಂಗೇರಿಯ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಮಾಜಿ ಮ್ಯಾನೇಜರ್‌ ಟಿ. ಎಲ್‌. ಪ್ರವೀಣ್‌ ಕುಮಾರ್‌ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯದ (ಇಡಿ) ವಿಶೇಷ ನ್ಯಾಯಾಲಯ ಒಪ್ಪಿಗೆ ನೀಡಿದೆ ಆರೋಪಿಗಳಾದ ಟಿ. ಎಲ್‌. ಪ್ರವೀಣ್‌ ಕುಮಾರ್‌, ಎಸ್‌. ಕೆ. ಸುಬ್ರಹ್ಮಣ್ಯ ರೆಡ್ಡಿ, ಆರ್‌. ರಂಗನಾಥ್‌, ನರಸಿಂಹ ಮೂರ್ತಿ, ಶಾಂತ ಕುಮಾರಿ, ಕೆ. ಆರ್‌. ಕವಿತಾ ವಿರುದ್ಧ ಪಿಎಂಎಲ್‌ಎ ಕಾಯಿದೆಯಡಿ ಪ್ರಕರಣದ ವಿಚಾರಣೆ ನಡೆಸಲು ಪ್ರಾಸಿಕ್ಯೂಶನ್‌ ದೂರು ಸಲ್ಲಿಸಲಾಗಿತ್ತು. ಈ ದೂರು ವಿಚಾರಣೆಗೆ (ಕಾಗ್ನಿಜೆನ್ಸ್‌) ನ್ಯಾಯಾಲಯ ಗುರುವಾರ ಒಪ್ಪಿಗೆ ನೀಡಿದೆ ಎಂದು ಇಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.2017ರ ಡಿಸೆಂಬರ್‌ 13 ರಿಂದ 2018ರ ಜುಲೈ 7ರ ನಡುವಣ ಅವಧಿಯಲ್ಲಿ ಕೆಂಗೇರಿಯ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಮುಖ್ಯಸ್ಥರಾಗಿದ್ದ ಪ್ರವೀಣ್‌ ಕುಮಾರ್‌, ಸಿಬ್ಬಂದಿ ಸುಬ್ರಹ್ಮಣ್ಯ ರೆಡ್ಡಿ ಹಾಗೂ ಇತರರು ನಕಲಿ ಚಿನ್ನಾಭರಣ ಅಡವಿರಿಸಿಕೊಂಡು ತನ್ನ ಸಂಬಂಧಿಕರು, ಪರಿಚಯಸ್ಥರು ಸೇರಿ 57 ಮಂದಿಗೆ ಚಿನ್ನಾಭರಣ ಸಾಲ ಮಂಜೂರು ಮಾಡಿ ಅಕ್ರಮ ಎಸಗಿದ್ದರು. ಬಳಿಕ ಸುಬ್ರಹ್ಮಣ್ಯ ರೆಡ್ಡಿ ಈ ಸಾಲದ ಹಣವನ್ನು ತನ್ನ ವೈಯುಕ್ತಿಕ ಖಾತೆ, ಕುಟುಂಬ ಸದಸ್ಯರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಇದರಿಂದ ಬ್ಯಾಂಕ್‌ಗೆ 19.03 ಕೋಟಿ ರೂ. ನಷ್ಟ ಉಂಟಾಗಿತ್ತು. ಈ ಹಣದಿಂದ ಆರೋಪಿಗಳು ಆಸ್ತಿ ಖರೀದಿ ಮಾಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಮಂದಿ ಸುಲಿಗೆಕೋರರನ್ನು ಬಂಧಿಸಿದ ಮೈಸೂರು ಪೊಲೀಸರು

Sun Jan 1 , 2023
ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೈಸೂರು ನಗರ ಪೊಲೀಸರು, ಏಳು ಮಂದಿ ಸುಲಿಗೆಕೋರರನ್ನು ಬಂಧಿಸಿದ್ದಾರೆ ಲಷ್ಕರ್‌ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಬಂಧಿತರಿಂದ 22,000 ರೂ.ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ನ. 20 ರಂದು ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಮಡಿಕೇರಿಗೆ ಹೋಗುವ ಸಲುವಾಗಿ ವ್ಯಕ್ತಿಯೊಬ್ಬರು ಬಿ.ಎನ್‌. ರಸ್ತೆ ಮೈಸೂರು ಕಾಂಪ್ಲೆಕ್ಸ್‌ ಹತ್ತಿರ ನಡೆದುಕೊಂಡು ಹೋಗುವಾಗ ಒಂದು ಆಟೋದಲ್ಲಿ ಬಂದ ಇಬ್ಬರು ಮಹಿಳೆಯರು ಮತ್ತು ಇಬ್ಬರು […]

Advertisement

Wordpress Social Share Plugin powered by Ultimatelysocial