ಮಂಗಳೂರಿನ ಪ್ರತಿಷ್ಠಿತ ಸಿಟಿ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಏಕಾಏಕಿ ಅಸ್ವಸ್ಥಗೊಂಡಿದ್ದರಿಂದ 89ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಫುಡ್ ಪಾಯಿಸನ್ ಆಗಿದ್ದರಿಂದ ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗಿದ್ದಾರೆ ಎನ್ನಲಾಗಿದೆ.ಮಂಗಳೂರು ಹೊರವಲಯದ ಶಕ್ತಿ ನಗರದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಹಾಸ್ಟೆಲ್ ಇದೆ. ಸೋಮವಾರ ಮುಂಜಾನೆಯಿಂದ ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅಸ್ವಸ್ಥಗೊಂಡ 89ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಮಂಗಳೂರಿನ ಸಿಟಿ ಆಸ್ಪತ್ರೆ, ಎ.ಜೆ. ಹಾಸ್ಪಿಟಲ್ ಹಾಗೂ ಕೆ.ಎಂ.ಸಿ ಆಸ್ಪತ್ರೆಗಳಿಗೆ ದಾಖಲಾಗಿಸಲಾಗಿದೆ.ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಾಲೇಜು ಆಡಳಿತ […]

  ಹಿಂದೂ ಸಂಪ್ರದಾಯದಲ್ಲಿ ವೀಗೆ ಮಹತ್ವವಾದ ಸ್ಥಾನವಿದೆ. ದೇವರ ಪೂಜೆಯಿಂದ ಹಿಡಿದು ಎಲ್ಲಾ ಶುಭಕಾರ್ಯದಲ್ಲೂ ವೀಳ್ಯದೆಲೆ ಇರಲೇಬೇಕು. ಊಟ ಆದ ಮೇಲೆ ವೀಳ್ಯದೆಲೆ ಸೇವಿಸುವ ಖಷಿಯೇ ಬೇರೆ. ನಮ್ಮ ಹಿರಿಯರು ಹಿಂದಿನ ಕಾಲದಿಂದಾನೂ ಈ ಆಚರಣೆಯನ್ನ ರೂಢಿಸಿಕೊಂಡು ಬಂದಿದ್ದಾರೆ.ಆಯುರ್ವೇದದಲ್ಲಿ ವೀಳ್ಯದೆಲೆ ತನ್ನದೇ ಆದ ಸ್ಥಾನವಿದೆ. ತಾಂಬೂಲದ ಜೊತೆಯಲ್ಲಿ ವೀಳ್ಯದೆಲೆ ಇರಲೇಬೇಕು. ಇಂತಹ ಶುಭಕರ ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ನಿಯಾಸನ್, ರೈಬೋಫ್ಲೇವಿನ್,ಕೆರಟೀನ್, ಮತ್ತು ಕ್ಯಾಲ್ಸಿಯಂನಂತಹ ಗುಣಗಳಿದ್ದು, ಆರೋಗ್ಯ ಉದ್ದೇಶದಿಂದ ತುಂಬಾನೇ ಒಳ್ಳೆಯದು.ಎಲೆ […]

ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆರೋನ್‌ ಫಿಂಚ್‌ ಅವರು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ 12 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿದ್ದಾರೆ.2024 ರ ಮುಂದಿನ ಟಿ 20 ವಿಶ್ವಕಪ್ ವರೆಗೆ ನಾನು ಆಡುವುದಿಲ್ಲ ಎಂದು ಅರಿತುಕೊಂಡು, ಟಿ20 ನಾಯಕತ್ವದಿಂದ ಕೆಳಗಿಳಿದು ತಂಡಕ್ಕೆ ಸಮಯ ನೀಡಲು ಇದು ಸರಿಯಾದ ಸಮಯ, 12 ವರ್ಷಗಳ ಕಾಲ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರರೊಂದಿಗೆ ಮತ್ತು […]

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಒಂದೇ ದಿನ ಮೂರು ಬಾರಿ ಪ್ರಬಲ ಭೂಕಂಪ ಸಂಭವಿಸಿದ್ದು, 3,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕ ಮಂದಿ ಕಟ್ಟಡ ಅವಶೇಷಗಳಡಿ ಸಿಲುಕಿದ್ದು, ಅವರನ್ನು ರಕ್ಷಣಾ ತಂಡಗಳು ಹೊರ ತೆಗೆಯುವ ಯತ್ನ ನಡೆಸುತ್ತಿವೆ.7.8 ತೀವ್ರತೆಯ ಭೂಕಂಪಕ್ಕೆ ಟರ್ಕಿ ನಲುಗಿದೆ. ಜನರು ನಿದ್ರಿಸುತ್ತಿರುವಾಗಲೇ ಈ ಘೋರ ಘಟನೆ  ನಡೆದಿದೆ.  ಭೂಕಂಪದಿಂದಾಗಿ ಹಲವು ಕಟ್ಟಡಗಳು ನೆಸಮವಾಗಿದ್ದು, ಅದರಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ, […]

ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ಅದಾನಿ ಸಮೂಹದ ಕುರಿತ ವರದಿ ಬಿಡುಗಡೆ ಮಾಡಿದ ಬಳಿಕ ಆ ಕಂಪನಿಯ ಷೇರುಗಳು ಪಾತಾಳಕ್ಕೆ ಕುಸಿದಿವೆ. ಅಲ್ಲದೆ ಈ ಎಲ್ಲ ಬೆಳವಣಿಗೆ ಕಾರಣಕ್ಕೆ ಗೌತಮ್ ಅದಾನಿ ಸಂಪತ್ತಿನಲ್ಲಿ ತೀವ್ರ ಇಳಿಕೆ ಕಂಡುಬಂದಿದೆ.ಹೀಗಾಗಿ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಹಾಗೂ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ, ಈಗ ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದಲೂ ಹೊರ ಬಿದ್ದಿದ್ದಾರೆ.ಇದರ ಮಧ್ಯೆ […]

ಬೆಂಗಳೂರು : ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆಯ ಶಾಕ್, ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಫೆ. 13 ರಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲಯತ್ ನಡೆಸಲಿದ್ದು, ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಎಸ್ಕಾಮ್ ಗಳು ಪ್ರತಿ ಯುನಿಟ್ ಗೆ 1.50 ರಿಂದ 2 ರೂ. ತನಕ ವಿದ್ಯುತ್ ದರ ಏರಿಕೆ […]

ಮದ್ವೆ ಅನ್ನೋದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ತರ ಘಟ್ಟ. ನೂರಾರು ಕನಸಿನ ಬುತ್ತಿಯೊಂದಿಗೆ ವಧು-ವರರು ದಾಂಪತ್ಯಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಮದ್ವೆ ಹೀಗೆ ನಡೆಯಬೇಕು ಎಂದು ಯೋಜನೆ ರೂಪಿಸಿರುತ್ತಾರೆ. ಆದರೆ, ನಮ್ಮ ಕೈಯಲ್ಲಿ ಏನೂ ಇಲ್ಲ ಎನ್ನುವಂತೆ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆದುಬಿಡುತ್ತವೆ.ಇದಕ್ಕೆ ತಾಜಾ ನಿದರ್ಶನ ಎಂಬಂತೆ ಕೇರಳದಲ್ಲಿ ಒಂದು ಘಟನೆ ನಡೆದಿದೆ.ನಾಳೆ ಮದುವೆ ನಡೆಯಬೇಕು ಅನ್ನುವಷ್ಟರಲ್ಲಿ ಮದುವೆಯ ಹಿಂದಿನ ದಿನದಂದು ವರ ನಾಪತ್ತೆಯಾದ ಸಂಗತಿ ವಧುವಿನ ಕುಟುಂಬವನ್ನು ಆಘಾತಕ್ಕೆ ದೂಡಿತು. […]

ಮಹಿಳೆಯರು,ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಬಳ್ಳಾರಿ ನಗರದ ವಾರ್ಡ್ ನಂಬರ್ 30 ರ ವಟ್ಟಪ್ಪಗೇರಿಯಲ್ಲಿ ಘಟನೆ ಮಹಿಳೆ,ಮಕ್ಕಳು ಸೇರಿ 7 ಜನರು ವಿಮ್ಸ್ ಆಸ್ಪತ್ರೆಗೆ ದಾಖಲು ನಿನ್ನೆ ರಾತ್ರಿ ವೇಳೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಗಳು ಬೀದಿ ನಾಯಿಗಳ ದಾಳಿಯಿಂದ ಆತಂಕಗೊಂಡ ಜನರು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಚಿತ್ರಗಳಿಗಿಂತ ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೂ ರಾಖಿ ಸಾವಂತ್ ಮುಂದಿದ್ದು, ಇದೀಗ ತಮ್ಮ ವೈಯಕ್ತಿಕ ಬದುಕಿನ ಕಾರಣಕ್ಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ರಾಖಿ ಸಾವಂತ್ ಮೈಸೂರು ಮೂಲದ ಆದಿಲ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಆರಂಭದ ದಿನಗಳಲ್ಲಿ ಈ ಜೋಡಿ ಎಲ್ಲಿಗೆ ಹೋದರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ಪತಿ ತನಗೆ ನೀಡಿದ ಐಷಾರಾಮಿ ಕಾರ್ ಸೇರಿದಂತೆ ವಿವಿಧ ಗಿಫ್ಟ್ […]

ಭೂಪಿಂದರ್ ಸಿಂಗ್ ಭಾವಪೂರ್ಣ ಚಲನಚಿತ್ರ ಗೀತೆಗಳ ಗಾಯನಕ್ಕೆ ಹೆಸರಾಗಿದ್ದವರು. ಮೂಲತಃ ಗಝಲ್ ಗಾಯಕರಾದ ಭೂಪಿಂದರ್ ಸಿಂಗ್ ಚಲನಚಿತ್ರ ರಂಗದಲ್ಲಿ ಹೊಸತನ ತಂದವರಲ್ಲಿ ಒಬ್ಬರು.ಭೂಪಿಂದರ್ ಸಿಂಗ್ 1940ರ ಫೆಬ್ರುವರಿ 6ರಂದು ಪಟಿಯಾಲದಲ್ಲಿ ಜನಿಸಿದರು. ತಂದೆ ನಾಥ ಸಿಂಗ್‍ಜಿ ಅವರು ಮಹಾನ್ ಸಂಗೀತ ಶಿಕ್ಷಕರಾಗಿದ್ದು ಇವರಿಗೆ ಗುರುವಾದರು.ಗಿಟಾರ್ ಕಲಿತಿದ್ದ ಭೂಪಿಂದರ್ ಸಿಂಗ್ ಅವರು ಸತೀಶ್ ಭಾಟಿಯಾ ಅವರ ನಿರ್ದೇಶನದಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ ಕ್ಯಾಶುಯಲ್ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ದೆಹಲಿಯ […]

Advertisement

Wordpress Social Share Plugin powered by Ultimatelysocial