ಅಂಚೆ ಕಚೇರಿ ಯೋಜನೆಗಳು ಸರ್ಕಾರದ ಬೆಂಬಲವನ್ನು ಹೊಂದಿರುವುದರಿಂದ ಅವುಗಳು ವಿಶ್ವಾಸಾರ್ಹವಾಗಿವೆ. ಅಂಚೆ ಕಚೇರಿಯು ಒಟ್ಟು ಮೊತ್ತದ ಹೂಡಿಕೆ ಯೋಜನೆಗಳನ್ನು ಕೂಡ ಹೊಸದಾಗಿ ನೀಡುತ್ತಿದೆ. ಇದರ ಅಡಿಯಲ್ಲಿ ಒಬ್ಬ ವ್ಯಕ್ತಿ ಒಂದೇ ಬಾರಿಗೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದರೆ ಮಾಸಿಕ ಗರಿಷ್ಠ ಆದಾಯವನ್ನು ಗಳಿಸಬಹುದಾಗಿದೆ.ಜನವರಿ-ಮಾರ್ಚ್ 2023 ರ ಬಡ್ಡಿ ದರವನ್ನು ಶೇಕಡಾ 7.1 ಕ್ಕೆ ನಿಗದಿಪಡಿಸಲಾಗಿದೆ. ಪೋಸ್ಟ್ ಆಫೀಸ್ ಲಾಕ್-ಇನ್ ಅವಧಿಯು 5 ವರ್ಷಗಳು. ನೀವು ಹೂಡಿಕೆ ಮಾಡಿದ ಮೊತ್ತವನ್ನು ಮುಕ್ತಾಯದ […]

ಮಂಡ್ಯದ ಮದ್ದೂರಿನ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹೆಚ್ ಡಿಕೆ ಬ್ರಾಹ್ಮಣರ ಬಗ್ಗೆ ನೀಡಿದಂತ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು, ಈ ರೀತಿ ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧದ ಹೇಳಿಕೆಗಳು ಕೇಳಿಬರ್ತಿದೆ. ಪ್ರತಿ ಚುನಾವಣೆ ಬಂದಾಗ ಇದು ಹೆಚ್ಚು ಕಾಣತ್ತೆ. ಬ್ರಾಹ್ಮಣರು ಯಾರು ಧ್ವನಿ ಎತ್ತಿ ಮಾತನಾಡುವವರು ಇಲ್ಲಾ, ಸಂಖ್ಯಾ ಬಲ ಇಲ್ಲಾ, ಅಲ್ಪ ಸಂಖ್ಯಾತರು ಆದ್ರಿಂದ ಏನು ಮಾತನಾಡಿದ್ರು ನಡೆಯತ್ತೆ ಎಂದು ಮಾತನಾಡ್ತಾರೆ. ರಾಜ್ಯದಲ್ಲಿ ಬ್ರಾಹ್ಮಣ […]

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಮೂವರು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಹೈಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್‌ನ ನೂತನ ಕಟ್ಟಡದ ಸಭಾಂಗಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಪ್ರಮಾಣ ವಚನ ಬೋಧಿಸಿದರು. ಐವರಿಂದ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ ೩೨ಕ್ಕೆ ಏರಲಿದೆ. ಸುಪ್ರೀಂ ಕೋರ್ಟ್‌ನ ಮಂಜೂರಾಗಿರುವ ನ್ಯಾಯಮೂರ್ತಿಗಳ ಸ್ಥಾನ ೩೪ ಆಗಿವೆ. ಇನ್ನು ಎರಡು ಹುದ್ದೆಗಳು […]

ಹಿಂಡೆನ್‌ಬರ್ಗ್ ವರದಿಯ ಬೆನ್ನಲ್ಲೇ ಸತತ ೮ನೇ ದಿನವೂ ಉದ್ಯಮಿ ಗೌತಮ್ ಅದಾನಿ ಸಮೂಹದ ಷೇರುಗಳು ಶೇ.೧೦ ರಷ್ಟು ಕುಸಿತ ಕಂಡಿವೆ ಈ ಮೂಲಕ ಅದಾನಿ ಸಮೂಹಕ್ಕೆ ಮತ್ತೆ ೫೦ ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದ್ದು ದಿನದಿಂದ ದಿನಕ್ಕೆ ಅದಾನಿ ಸಾಮ್ರಾಜ್ಯ ಪಾತಾಳಕ್ಕೆ ಕುಸಿಯುತ್ತಿದೆ.ಎಂಟನೇ ದಿನದ ವಹಿವಾಟಿನಲ್ಲಿ ಬಿಲಿಯನೇರ್ ಗೌತಮ್ ಅದಾನಿ ಅವರ ಸಾಮ್ರಾಜ್ಯಕ್ಕೆ ಸೇರಿದ ಷೇರುಗಳು ತಡೆರಹಿತ ಕುಸಿತದಲ್ಲಿ ಶೇ. ೧೦ ವರೆಗೆ ಕುಸಿದಿವೆ ಅದಾನಿ ಟ್ರಾನ್ಸ್‌ಮಿಷನ್ ಪ್ಯಾಕ್‌ನಲ್ಲಿ […]

ಹೊಸ ತೆರಿಗೆ ಪದ್ಧತಿಯಡಿಯಲ್ಲಿ ರಿಯಾಯಿತಿ ಮಟ್ಟವನ್ನು ೭ ಲಕ್ಷಕ್ಕೆ ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಸುಮಾರು ೫-೭ ಲಕ್ಷ ಆದಾಯದ ವ್ಯಾಪ್ತಿಯಲ್ಲಿರುವ ಸುಮಾರು ಒಂದು ಕೋಟಿ ಜನರಿಗೆ ಲಾಭವಾಗಲಿದೆ ಎಂದು ಹಣಕಾಸು ಸಚಿವಾಲಯದ ತಿಳಿಸಿವೆ. ಹಲವರು ಸಾರ್ವಜನಿಕ ಭವಿಷ್ಯ ನಿಧಿ ಅಥವಾ ೫-ವರ್ಷದ ನಿಶ್ಚಿತ ಠೇವಣಿಗಳಂತಹ ನಿರ್ದಿಷ್ಟ ಉಳಿತಾಯ ಸಾಧನಗಳಲ್ಲಿ ಹೂಡಿಕೆಗೆ ಲಭ್ಯವಿರುವ ಪ್ರಯೋಜನ ಬಳಸಲು ಸಾಧ್ಯವಾಗುತ್ತಿಲ್ಲ, ಅವರ ತೆರಿಗೆ ಹೊಣೆಗಾರಿಕೆ ಹೆಚ್ಚಿಸುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ […]

ಬಿಗ್ ಬಾಸ್ ಮೂಲಕ ಖ್ಯಾತಿಯನ್ನು ಪಡೆದುಕೊಂಡ ಪ್ರಥಮ್ ನಂತರದ ದಿನಗಳಲ್ಲಿ ನಟನಾಗಿ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. 2018ರಲ್ಲಿ ಎಂಎಲ್‌ಎ ಎಂಬ ಚಿತ್ರದಲ್ಲಿ ನಟಿಸಿದ್ದ ಪ್ರಥಮ್ ಅದೇ ವರ್ಷ ದೇವ್ರಂತ ಮನುಷ್ಯ ಎಂಬ ಚಿತ್ರದಲ್ಲೂ ಸಹ ನಟಿಸಿದರು. ಈ ಎರಡೂ ಸಿನಿಮಾಗಳೂ ಸಹ ಹೇಳಿಕೊಳ್ಳುವಂತಹ ಹೆಸರು ಮಾಡಲಿಲ್ಲ.ಬಿಗ್ ಬಾಸ್ ನಂತರ ಪ್ರಥಮ್ ಹೊಂದಿದ್ದ ಜನಪ್ರಿಯತೆಗೆ ತಕ್ಕಂತ ಗೆಲುವು ಸಿಗಲಿಲ್ಲ.ಹೀಗೆ ಪ್ರಥಮ್ ನಾಯಕನಾಗಿ ನಟಿಸಿದ ಮೊದಲ ಎರಡೂ ಚಿತ್ರಗಳೂ ಸಹ ನಿರೀಕ್ಷೆ […]

ಪ್ರತಿಪಕ್ಷಗಳ ಟೀಕೆ ಮತ್ತು ಪ್ರತಿಭಟನೆಗಳ ನಡುವೆಯೇ ಅಸ್ಸಾಂ ಪೊಲೀಸರು ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಒಟ್ಟು ೨,೪೪೧ ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಪಿಡುಗನ್ನು ಕೊನೆಗೊಳಿಸುವ ಕಾರ್ಯಾಚರಣೆಯು ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಚಾಲ್ತಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಸ್ಪಷ್ಟಪಡಿಸಿದ್ದರು. ಆದರೆ, ಇದು ತರಾತುರಿಯಲ್ಲಿ ನಡೆಸಿದ ಪ್ರಚಾರದ ಕಸರತ್ತು ಎಂದು ಪ್ರತಿಪಕ್ಷಗಳು ಟೀಕಿಸಿವೆ. ಬಾಲ್ಯ ವಿವಾಹ ತಡೆ […]

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ೭ ಸಾವಿರ ಕೋಟಿ ವೆಚ್ಚ ಮಾಡಿರುವ ವರದಿಗಳು ಸತ್ಯಕ್ಕೆ ದೂರವಾಗಿದ್ದು, ಇದೊಂದು ಹಾಸ್ಯಸ್ಪದ ಮಾತುಗಳೆಂದು ಭಾವಿಸಿದ್ದೇನೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡಿ ಮುಚ್ಚಲು ೭,೧೨೧ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಕೆಲ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇಂತಹ ಅಂಕಿ-ಅಂಶ ಸತ್ಯಕ್ಕೆ ದೂರವಾಗಿವೆ. […]

ಐಟಿ ಸಂಸ್ಥೆಗಳು ಉದ್ಯೋಗಿಗಳನ್ನು ವಜಾಗೊಳಿಸುವ ಸರಣಿ ಮುಂದುವರೆದಿದ್ದು, ಇದೀಗ ದೇಶ ಪ್ರಸಿದ್ಧ ಇನ್ಫೋಸಿಸ್ ಸಂಸ್ಥೆ ಕೂಡ ಸುಮಾರು ೬೦೦ ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.ಕಳೆದ ಕೆಲವು ತಿಂಗಳುಗಳಲ್ಲಿ ಎಫ್ ಎ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಸುಮಾರು ೬೦೦ ಫ್ರೆಶರ್‌ಗಳನ್ನು ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಹೊಸ ಉದ್ಯೋಗಿಗಳನ್ನು ಆಂತರಿಕ ಫ್ರೆಶರ್ ಮೌಲ್ಯಮಾಪನ (ಎಫ್‌ಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ.ಆಗಸ್ಟ್ ೨೦೨೨ […]

  ದೇಶದಲ್ಲಿ ಸಾಕಷ್ಟು ಕಲ್ಲಿದ್ದಲು ನಿಕ್ಷೇಪವಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ ಪವರ್, ಅಂಬಾನಿ ಶಕ್ತಿ .. ಎಂದು ಇಡೀ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮುಂದಾಗಿದ್ಧಾರೆ ಎಂದು ತೆಲಂಗಾಣದ ಮುಖ್ಯಮಂತ್ರಿ ಹಾಗು ಬಿಆರ್‍ಎಸ್ ಪಕ್ಷದ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಆರೋಫಿಸಿದ್ದಾರೆ.ದೇಶದ ಎಲ್ಲಾ ವಿದ್ಯುತ್ ಕಂಪನಿಗಳನ್ನು ಖಾಸಗಿ ಕಂಪನಿಗಳಿಗೆ ನೀಡಿದರೆ ಅವರು ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತಾರೆ ಎಂದು ಹೇಳಿದ್ದಾರೆ.ಮಹಾರಾಷ್ಟ್ರದ ನಾಂದೇಡ್‍ನಲ್ಲಿ ನಡೆದ ಭಾರತ್ ರಾಷ್ಟ್ರೀಯ ಸಮಿತಿ ಪಕ್ಷದ […]

Advertisement

Wordpress Social Share Plugin powered by Ultimatelysocial